ಕುಡುಕರ ತಾಣವಾದ ಆರೋಗ್ಯ ಮತ್ತು ಕ್ಷೇಮ ಕೇಂದ್ರ,ಕೇಂದ್ರದಲ್ಲಿ ಸ್ವಚ್ಛತೆ ಮರೀಚಿಕೆ

0
141

ವಿಜಯನಗರ:ಜೂನ್ :07:- ತಾಲೂಕಿನ ಜುಮ್ಮೋಬನಹಳ್ಳಿ ಉಪಕೇಂದ್ರ ಕುಮತಿ ಗಡಿ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಎರಡು ತಿಂಗಳಿಂದ ಬೀಗ ಹಾಕಿದ್ದು, ಸೂಕ್ತ ಚಿಕಿತ್ಸೆಯಿಲ್ಲದೇ ಜನತೆ ಪರದಾಡುವಂತಾಗಿದೆ. ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಿದ ಕಾರಣ ಕೇಂದ್ರದ ಆವರಣ ಕುಡುಕರ ತಾಣವಾಗಿ ಮಾರ್ಪಟ್ಟಿದೆ.

ಸಾರ್ವಜನಿಕರು ಸಣ್ಣಪುಟ್ಟ ಕಾಯಿಲೆಗೂ ಚಿಕಿತ್ಸೆಯಿಲ್ಲದೇ ಪರದಾಡುವಂತಾಗಿದೆ ಗ್ರಾಮದಲ್ಲಿ ಚಿಕ್ಕಮಕ್ಕಳು, ಗರ್ಭಿಣಿಯರು, ಬಾಣಂತಿಯರ ಆರೋಗ್ಯದಲ್ಲಿ ಏರುಪೇರಾದರೆ 15-20 ಕಿ.ಮೀ. ದೂರದ ಹೊಸಹಳ್ಳಿ, ಚಿಕ್ಕಜೋಗಿಹಳ್ಳಿ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಸರ್ಕಾರಿ ಆಸ್ಪತ್ರೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.

ಅದು ಅಲ್ಲದೆ ಸಿಬ್ಬಂದಿಯ ಕೊರತೆಯಿಂದ ಆಸ್ಪತ್ರೆಯ ಆವರಣದಲ್ಲಿ ಎಲ್ಲೆಡೆ ಹುಲ್ಲು ಕಸ ಹಾಗೂ ಜಾಲಿಗಿಡ ಗಂಟೆಗಳು ಆವರಣದಲ್ಲಿ ತುಂಬಿದೆ. ಅಲ್ಲದೆ ಆವರಣವು ಕತ್ತಲಾಗುತ್ತಿದ್ದಂತೆ ಮದ್ಯಪ್ರಿಯರ ತಾಣವಾಗಿ ಪರಿವರ್ತನೆಯಾಗುತ್ತದೆ. ಆಸ್ಪತ್ರೆ ಆವರಣದಲ್ಲಿ ಎಲ್ಲೆಂದರಲ್ಲಿ ಬಿಯರ್ ಬಾಟಲಿ, ಸಾರಾಯಿ ಪ್ಯಾಕೆಟ್ ಗಳು, ಪ್ಲಾಸ್ಟಿಕ್ ಇತರೆ ಕಸ ವಿಷ ಜಂತುಗಳ ತಾಣವಾಗಿದೆ ವರ್ಷಗಳೆ ಕಳೆದರೂ ಸ್ವಚ್ಛತೆಗೆ ಮುಂದಾಗದ ಅಧಿಕಾರಿಗಳು ಇನ್ನಾದರೂ ಸ್ವಚ್ಛತೆಗೆ ಮುಂದಾಗಬೇಕಾಗಿದೆ ಎಂಬುದು ಗ್ರಾಮದ ಯುವಕರಾದ ಮೇಘರಾಜ್ ಹಾಗೂ ಸಾರ್ವಜನಿಕರು ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೆಚ್. ಮಂಜುನಾಥ್

LEAVE A REPLY

Please enter your comment!
Please enter your name here