ಬೆಳೆ ಸಮೀಕ್ಷೆಗೆ ಮೊಬೈಲ್‌ ತಂತ್ರಾಂಶ ಆಪ್ ಕುರಿತು ತರಬೇತಿ.

0
126

ಕೊಟ್ಟೂರು:ಜುಲೈ:09:-ತಾಲೂಕಿನ ಜೋಳದಕೂಡ್ಲಿಗಿ ಗ್ರಾಮದಲ್ಲಿ ವಿಜಯನಗರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಹಾಗೂ ಕೊಟ್ಟೂರು ತಾಲೂಕು ಪಂಚಾಯಿತಿಯ ಆಡಳಿತಾಧಿಕಾರಿಯಾದ ಶ್ರೀ ಶರಣಪ್ಪ ಮುದ್ಗಲರವರು ರೈತರನ್ನು ಉದ್ದೇಶಿಸಿ ಪ್ರಧಾನಮಂತ್ರಿ ಫಸಲ್ ಭೀಮಾಯೋಜನೆ (ವಿಮಾ) ಹಾಗೂ ಬೆಳೆ ಸಮೀಕ್ಷೆ ಕುರಿತು ರೈತರಿಗೆ ತರಬೇತಿ ನೀಡಿದರು.

ರೈತರು ಕೇವಲ 2% ವಿಮಾ ಮೊತ್ತವನ್ನು ತಮ್ಮ ಬ್ಯಾಂಕ್ ಅಥವಾ ಗ್ರಾಹಕರ ಸೇವಾ ಕೇಂದ್ರದಲ್ಲಿ ಹಣವನ್ನು ಪಾವತಿಸಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬಹುದು ರೈತರಿಗೆ ತಿಳಿಸಿದರು.

ಬೆಳೆ ಸಾಲ ಪಡೆದ ಎಲ್ಲಾ ರೈತರು ಕಡ್ಡಾಯವಾಗಿ ಈ ಯೋಜನೆಯಡಿಯಲ್ಲಿ ಒಳಪಡಿಸಲಾಗಿವುದು, ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಚೆ ಪಡದೆ ಇದ್ದಲ್ಲಿ 7 ದಿನಗಳೊಳಗೆ ಬ್ಯಾಂಕ್ ವ್ಯವಸ್ಥಾಪಕಕರಿಗೆ ಲಿಖಿತ ಮುಚ್ಚಳಿಕೆ ನೀಡಿದ್ದಲ್ಲಿ ಆ ರೈತನನ್ನು ಬೆಳೆ ವಿಮೆಯಿಂದ ಕೈಬಿಡಲಾಗುವುದು

ಪ್ರಕೃತಿ ವಿಕೋಪಗಳ ಬರಗಾಲ, ಆಲಿ ಕಲ್ಲು ಮಳೆ, ಬೆಳೆ ಮುಳುಗಡೆ, ಪ್ರವಾಹದಿಂದ ಬೆಳೆ ಹಾನಿಯದಲ್ಲಿ ಬೆಳೆ ವಿಮೆ ಮಾಡಿಸಿದ ರೈತರು 48 ಗಂಟೆಗೊಳಗಾಗಿ ವಿಮಾ ಸಂಸ್ಥೆಗೆ ತಿಳಿಸಿದರೆ ವಿಮಾ ಸಂಸ್ಥೆ ನಷ್ಟವನ್ನು ನಿರ್ಧರಿಸಿ ಪರಿಹಾರ ನೀಡಲಾಗುವುದು.

ರಾಜ್ಯ ಸರ್ಕಾರ ನಡೆಸುವ ಬೆಳೆ ಅಂದಾಜು ಸಮೀಕ್ಷೆಯಡಿ ಬೆಳೆ ಕಾಟವು ಪ್ರಯೋಗಗಳ ಆಧಾರದ ಮೇಲೆ ಇಳುವರಿಯನ್ನು ಪರಿಗಣಿಸಿ ಬೆಳೆ ವಿಮಾ ಪರಿಹಾರವನ್ನು ಲೆಕ್ಕ ಹಾಕಿ ಇತ್ಯರ್ಥಪಡಿಸಲಾಗುವುದು.

ರೈತರು ತಮ್ಮ ಜಮೀನಲ್ಲಿ ಬೆಳೆದ ಬೆಳೆಯನ್ನು ಬೆಳೆ ಸಮೀಕ್ಷೆ ಆಪ್ ನೋಂದಾಯಿಸಬೇಕು. ಇದರಿಂದ ಸರ್ಕಾರದ ಬೆಳೆ ವಿಮೆ, ಬೆಳೆ ಪರಿಹಾರ ಪಡೆಯುವುದಕ್ಕೆ, ರಾಗಿ ಖಾರಿದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡುವುದಕ್ಕೆ ಹಾಗೂ ಸರ್ಕಾರದ ವಿವಿಧ ಇಲಾಖೆಯಡಿ ವಿವಿಧ ಪಡೆಯುವುದಕ್ಕೆ ಈ ಬೆಳೆ ಸಮೀಕ್ಷೆ ರೈತರಿಗೆ ಸಹಕಾರಿಯಾಗುವುದೆಂದು ರೈತರಿಗೆ ತರಬೇತಿ ನೀಡಿದರು. ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆಗೆ ಸಂಪರ್ಕಿಸಬಹುದು.

ಈ ಸಂಧರ್ಭದಲ್ಲಿ ಕೂಡ್ಲಿಗಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ವಾಮದೇವ ಕೆ, ಕೃಷಿ ಅಧಿಕಾರಿಗಳಾದ ಮನೋಹರ ಗೌಡ, ನೀಲಾ ನಾಯ್ಕ್, ಶ್ಯಾಮಸುಂದರ್, ಸಹಾಯಕ ಕೃಷಿ ಅಧಿಕಾರಿಗಳಾದ ಚಂದ್ರಶೇಖರ್, ಪಿ. ಆರ್. ಹಿರೇಮಠ್ ಹಾಗೂ ಜೋಳದ ಕೂಡ್ಲಿಗಿ ಗ್ರಾಮದ ರೈತರು ಉಪಸ್ಥಿತರಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here