ಮಾನಸಿಕ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿರುವವರ ಆರೈಕೆ ಮಾಡಿ, ನಿರ್ಲಕ್ಷ ಸಲ್ಲ ; ಮನೋಶಾಸ್ತ್ರಜ್ಞೆ ಕಾವ್ಯ,

0
313

ಸಂಡೂರು:ಮೇ:09:ತಾಲೂಕಿನ ತೋರಣಗಲ್ಲು ಗ್ರಾಮದ ವ್ಯಾಪ್ತಿಯಲ್ಲಿ ಮಾನಸಿಕ ತೊಂದರೆ ಇರುವವರು ಚಿಕಿತ್ಸೆ ಪಡೆಯುತ್ತಿರುವವರ ಮನೆಗಳ ಬೇಟಿ ಮಾಡಿ ವಿಚಾರಿಸುವ ಕಾರ್ಯವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಹಾಗೂ ಕೇಂದ್ರದ ವೈದ್ಯರಾದ ಡಾ.ಸಾದಿಯ ಅವರ ಸಹಕಾರದೊಂದಿಗೆ ನಡೆಯಿತು,

ಈ ಸಂದರ್ಭದಲ್ಲಿ ಮನೋ ಶಾಸ್ತ್ರಜ್ಞರಾದ ಶ್ರೀಮತಿ ಕಾವ್ಯ ಅವರು ಕೆಲವು ಮಾನಸಿಕ ರೋಗಿಗಳ ಮನೆಗೆ ಭೇಟಿನೀಡಿ ವಿಚಾರಿಸಿದರು, ಮಾನಸಿಕ ರೋಗಿಗಳ ಬಗ್ಗೆ ನಿಷ್ಕಾಳಜಿ ಬೇಡ, ಮಾತ್ರೆಗಳನ್ನು ಸೇವಿಸುತ್ತಿರುವ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗೆ ಮಂಕಾಗಿ ಇರುವ ಸಾಧ್ಯತೆ ಇದೆ, ಹಾಗಂತ ಅವರನ್ನು ದೂರ ಇಡುವ ಅವಶ್ಯಕತೆ ಇರುವುದಿಲ್ಲ, ಅವರೊಂದಿಗೆ ಸಂತೋಷದ ಸಂಗತಿಗಳು ಹಂಚಿಕೊಳ್ಳುತ್ತಾ ನಮ್ಮಂತೆ ಸಹಜ ಜೀವನ ಮಾಡುವಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ, ಅವರಿಗೆ ಸಿಗಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸ ಬೇಕು, ಅವರಿಗೆ ನೀಡುವ ವೈಕಲ್ಯ ವೇತನ ಉಪಯೋಗವಾಗುವಂತೆ ನೋಡಿಕೊಳ್ಳಬೇಕು, ಸರಿಯಾದ ರೀತಿಯಲ್ಲಿ ಚಿಕಿತ್ಸೆಯನ್ನು ಕೊಡಿಸಬೇಕು ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಪ್ರತಿ ತಿಂಗಳ ಎರಡನೇ ಮಂಗಳವಾರ ಮನೋಚೈತನ್ಯ ಕಾರ್ಯಕ್ರಮದಡಿ ಮಾನಸಿಕ ಆರೋಗ್ಯ ಕುರಿತು ಶಿಬಿರ ನಡೆಯಲಿದೆ ರೋಗಿಗಳನ್ನು ಪತ್ತೆ ಹಚ್ಚಲು ಎಲ್ಲರೂ ಕೈ ಜೋಡಿಸ ಬೇಕಿದೆ ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಕೀಲ್ ಅಹಮದ್, ನಿಜಾಮುದ್ದೀನ್,ಆಶಾ ಕಾರ್ಯಕರ್ತೆಯರಾದ ಎ.ಲಕ್ಷ್ಮಿ, ಹೆಚ್.ಲಕ್ಷ್ಮಿ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here