ಅಪೌಷ್ಟಿಕ ಮಕ್ಕಳ ತಾಯಂದಿರ ಹಿಮೋಗ್ಲೋಬಿನ್ ಪರೀಕ್ಷೆ ಮಾಡಿ: ಡಿ.ಹೆಚ್.ಓ ಡಾ.ಹೆಚ್.ಎಲ್ ಜನಾರ್ಧನ್

0
215

ಸಂಡೂರು: ಮೇ: 23: ಅಪೌಷ್ಟಿಕ ಮಕ್ಕಳ ತಾಯಂದಿರ ಹಿಮೋಗ್ಲೋಬಿನ್ ಅಂಶ ಪರೀಕ್ಷೆ ಮಾಡಿ: ಡಿ.ಹೆಚ್.ಓ ಡಾ.ಹೆಚ್.ಎಲ್ ಜರ್ನಾದನ್ ಹೇಳಿದರು

ಸಂಡೂರು ಬಾಲ ಚೈತನ್ಯ ಆರೈಕೆ ಕೇಂದ್ರಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್ ಜರ್ನಾದನ್ ಅವರು ಕೇಂದ್ರದಲ್ಲಿರು 51 ಮಕ್ಕಳ ದಾಖಲಾತಿ ಪರೀಕ್ಷೆ ಮಾಡಿದರು, ಹಾಗೂ ಮಕ್ಕಳು ಅಪೌಷ್ಟಿಕತೆಗೆ ಕಾರಣ ಪತ್ತೆ ಹಚ್ಚುವಂತೆ ಮಕ್ಕಳ ತಜ್ಞರಿಗೆ ಸೂಚಿಸಿದರು, ಮಕ್ಕಳ ಆರೋಗ್ಯ ಉತ್ತಮವಾಗುತ್ತಿರುವುದನ್ನು ಗಮನಿಸಿ ಮಕ್ಕಳ ತಾಯಂದಿರ ಆರೋಗ್ಯ ತಪಾಸಣೆ ಮಾಡಿ ಹಿಮೋಗ್ಲೋಬಿನ್ ಅಂಶ ಪತ್ತೆಮಾಡಿ ಕಡಿಮೆ ಕಂಡು ಬಂದರೆ ತಕ್ಷಣ ಅವರಿಗೆ ನಿಮ್ಮ ಸುಪರ್ದಿಯಲ್ಲಿ ಐರನ್ ಸುಕ್ರೋಸ್‌‌ ಇಂಜೆಕ್ಷನ್ ಹಾಕಿಸಿ ಇತರೆ ತೊಂದರೆಗಳಿಗೆ ಚಿಕಿತ್ಸೆ ನೀಡುವಂತೆ ಸೂಚಿಸಿದರು,

ವಾರ್ಡ್ ಗಳಿಗೂ ಬೇಟಿ ಕೊಟ್ಟು ಹದಿನಾಲ್ಕು ದಿನ ನಿಮ್ಮ ಮಕ್ಕಳ ಆರೋಗ್ಯಕ್ಕೆ ಮೀಸಲಿಡಿ, ಆರೋಗ್ಯದ ಕಡೆ ಗಮನ ಕೊಡಿ ಮಕ್ಕಳ ಆರೈಕೆ, ಪೌಷ್ಟಿಕ ಆಹಾರ ತಯಾರಿಸುವ ಬಗ್ಗೆಯೂ ತಿಳಿದು ಕೊಳ್ಳಿ, ಅದರಂತೆ ಪಾಲಿಸಿ, ಹದಿನಾಲ್ಕು ದಿನಗಳ ದಿನಗೂಲಿ ಎನ್.ಆರ್.ಜಿ ಪ್ರಕಾರ ನಿಮಗೆ ನೀಡಲಾಗುವುದು ಇಲ್ಲಿ ಇರುವಷ್ಟು ದಿನವೂ ಉತ್ತಮ ವಿಷಯಗಳನ್ನು ಕಲೆತುಕೊಳ್ಳಿ, ಎರಡು ಮಕ್ಕಳಿರುವ ತಾಯಂದಿರಿಗೆ ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಿ ಎಂದು ತಾಯಂದಿರಿಗೆ ಸಲಹೆ ನೀಡಿದರು,ಹಾಗೇ ಹೃದಯ ಸಂಬಂಧಿ ಕಾಯಿಲೆ ಇರುವ ಮಗುವಿಗೆ ಆಯುಷ್ಮಾನ್ ಭಾರತ್ ಯೋಜನೆಡಿ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಡಿ.ಎಲ್.ಓ ಡಾ.ವೀರೇಂದ್ರ ಕುಮಾರ್, ಮಕ್ಕಳ ತಜ್ಞ ಡಾ.ರಾಮಕೃಷ್ಣ, ತಾಲೂಕು ಆರೋಗ್ಯಾಧಿಕಾರಿ ಡಾ. ಭರತ್ ಕುಮಾರ್, ಡಾ.ಅಕ್ಷಯ್ ಶಿವಪುರ,ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ದೀಪಾ,ನಾಗಮ್ಮ, ಮೇಲ್ವಿಚಾರಕಿ ಎಮ್. ಎಮ್ ಭಜಂತ್ರಿ, ಶಾರದಾ ಶಿಂದೆ,ಲಕ್ಷ್ಮಿ ಕಂಕಣವಾಡಿ,ಚೇತನಾ ಗೌಡ, ಲಿಂಗರಾಜು,ಯಶೋಧ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here