ರಿಲ್ ಅಲ್ಲ ರಿಯಲ್ ಹೀರೋ ಸಮಾಜ ಸೇವೆಯಲ್ಲಿ ಕಾರ್ಯನಿರತರಾದ ಮಂಚನಬಲೆಯ ಡಾ.ಎಂ.ವಿ ಸದಾಶಿವ

0
266

ಮನುಷ್ಯ ಸಂಘಜೀವಿಯು ಹೌದು, ಸ್ವಾರ್ಥಜೀವಿಯು ಹೌದು…. ಆನಾದಿಕಾಲದಿಂದಲು ಮನುಷ್ಯ ಸಮಾಜದಲ್ಲಿ ಬದುಕಲು ನಿತ್ಯವು ಶ್ರಮಿಸುತ್ತಲೇ ಇದ್ದಾನೆ. ಹೌದು, ಮನುಷ್ಯ ತನಗಾಗಿ ತನ್ನ ಅಭಿವೃದ್ಧಿಗಾಗಿ, ತನ್ನ ಸ್ವಾರ್ಥಕ್ಕಾಗಿ ಏನು ಬೇಕಾದರು ಮಾಡುತ್ತಾನೆ. ಅದರಲ್ಲೂ ಇಂದಿನ ಆಧುನಿಕ, ತಂತ್ರಜ್ಞಾನ ಯುಗದಲ್ಲಿ ಮನುಷ್ಯ ಮನುಷ್ಯನಾಗಿಯೇ ಉಳಿಯದೆ, ಸ್ವಾರ್ಥ ಎಂಬ ಸಾಗರದಲ್ಲಿ ಬಂಧಿಯಾಗಿದ್ದಾನೆ. ಸ್ವಾರ್ಥವೇ ತುಂಬಿದ ಜನರ ಮಧ್ಯೆಯೂ ಇಲ್ಲೊಬ್ಬ ನಿಸ್ವಾರ್ಥದಿಂದ ಸಮಾಜ ಸೇವೆಯನ್ನು ಮಾಡುತ್ತಾ ಕೆಸರಿನಲ್ಲಿ ಕಮಲದಂತೆ ಅರಳಿ ಬಡವರ, ನೊಂದವರ ದಿನ-ದಲಿತರ ಬಾಳಿಗೆ ಆಶಾಕಿರಣರಾಗಿದ್ದಾರೆ ಅವರೇ ಮಂಚನಬಲೆಯ ಡಾ.ಎಂ.ವಿ.ಸದಾಶಿವ.

ಹೌದು, ಇವರ ಜೀವನ ಯಶೋಗಾಥೆಯನ್ನು ಕೇಳಿದ ಪ್ರತಿಯೊಬ್ಬರು ನಿಬೆರಗಗುತ್ತಾರೆ. ಏಕೆಂದರೆ ಇವರು ಮಾಡಿರುವ ಸೇವೆ ಒಂದಾ,, ಎರಡಾ,, ಅಬ್ಬಾ ನಿಜಕ್ಕೂ ಇವರು ದೈವ ಪುರುಷರಾಗಿ ಸೇವೆ ಮಾಡಿದ್ದಾರೆ.
ಇವರು ಮೂಲತಹ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚನಬಲೆ ಗ್ರಾಮದಲ್ಲಿ 1983ರ ಏಪ್ರಿಲ್ 17ರಂದು ವೆಂಕಟರಮಣ ಮೂರ್ತಿ ಮತ್ತು ವೆಂಕಟಲಕ್ಷ್ಮಮ್ಮ ದಂಪತಿಗಳ ಮುದ್ದು ಮಗನಾಗಿ ಜನಿಸಿದರು ಡಾ.ಎಂ.ವಿ ಸದಾಶಿವರವರು.

ಹುಟ್ಟು ದರಿದ್ರವಾದರೇನಂತೆ ಸಾವು ಚರಿತ್ರೆಯಾಗಿರಬೇಕು ಎಂಬ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತು ಇವರ ಬದುಕಿನಲ್ಲಿ ನಡೆದಿದೆ.
ಅತಿ ಕಡುಬಡತನದಲ್ಲಿಯೇ ಜನಿಸಿದ ಇವರು ಪಟ್ಟ, ಕಷ್ಟ- ಪಾಡು ನೋವುಗಳು ಒಂದೆರಡಲ್ಲಾ. ಹೌದು, ಇಂದು ಸಾವಿರಾರು ಜನರಿಗೆ ಸಹಾಯ ಮಾಡುವ ಇವರು ಅಂದಿನ ಆ ಬಾಲ್ಯದಲ್ಲಿ ಕಷ್ಟ ನೋವುಗಳು ಸಾಮಾನ್ಯವಾಗಿರಲಿಲ. ಇವರಿಗೆ ಹುಟ್ಟಿನಿಂದ 14ವರ್ಷಗಳ ಕಾಲ ಮಾತು ಬಾರದೆ ಮೂಕನೆಂದು ಕರೆಸಿಕೊಂಡರು, ಇತರರು ಚೇಷ್ಠೆ ಮಾಡಿದರೂ ಸಹ ಕಲಿಯುವ ಛಲ, ಆತ್ಮವಿಶ್ವಾಸವನ್ನು ಬಿಟ್ಟಿರಲಿಲ್ಲ. ಅದೇ ಆತ್ಮವಿಶ್ವಾಸದೊಂದಿಗೆ ಕೊನೆಗೂ ಮಾತನಾಡುವುದನ್ನು ಕಲಿತು ತಾನೇನೆಂಬುದನ್ನು ತೋರಿಸಲು ಮುಂದಾದರು.

ಶಿಕ್ಷಣ: ತಂದೆ-ತಾಯಿ ಕೂಲಿ ಮಾಡಿ ತಂದ ಹಣದಲ್ಲಿ ಸದಾಶಿವರನ್ನು ಸಾಕಿ ಸಲುಹಿದರು. ಪ್ರಾರಂಭದಲ್ಲಿ ಶಾಲೆಗೂ ಹೋಗದ ಇವರು “ಸ್ವಾತಂತ್ರ‍್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ” ದಿನದಂದು ಮಾತ್ರ ಕಡ್ಡಾಯವಾಗಿ ಶಾಲೆಯಲ್ಲಿ ಹಾಜರು ಇರುತ್ತಿದ್ದರು. ಏಕೆಂದರೆ ಅವರು ಕೊಡುವ ಮಿಠಾಯಿಗಾಗಿ. ಜೊತೆಗೆ ಗಣ್ಯರು ಧ್ವಜಾರೋಹಣ ನೆರವೇರಿಸುವುದು ಕಂಡು ಅಂದೇ ಕನಸು ಕಂಡರು, ಮುಂದೊAದು ದಿನ ನಾನು ಈ ಸ್ಥಾನದಲ್ಲಿರಬೇಕೆಂದು.

ಕೆಲಸ: “ಉದ್ಯೋಗಂ ಪುರುಷ ಲಕ್ಷಣಂ” ಎಂಬ0ತೆ ಯಾವುದೇ ಕೆಲಸ ಸಿಗಲಿ ಮಾಡಲು ನಿರ್ಧರಿಸಿದರು. ಕ್ಷೌರಿಕ ವೃತ್ತಿಯನ್ನು ಸುಮಾರು 10ವರ್ಷಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡಿದರು. ತದನಂತರ ಅಂಗಡಿಯಲ್ಲಿ, ಮಾರ್ಗದರ್ಶಕರಾಗಿ, ಹೀಗೆ ಹಂತ ಹಂತವಾಗಿ ಹತ್ತಾರು ಕೆಲಸಗಳನ್ನು ಮಾಡಿದರು. ಎಲ್ಲಾ ಕೆಲಸಗಳಲ್ಲಿನ ಪ್ರಾಮಾಣಿಕತೆ, ನಿಷ್ಠೆ, ಶ್ರಮದ ಮೂಲಕ ಅಭಿವೃದ್ಧಿಯಾದರು. ಬಡತನದಿಂದದ್ದ ಕುಟುಂಬಕ್ಕೆ ಸದೃಡತೆಯನ್ನು ತಂದರು. ದಿನ ಕಳೆದಂತೆ ಸಂಪಾದಿಸುತ್ತಲೇ ಬಸವಣ್ಣನವರು ಹೇಳಿದಂತೆ ದಾಸೋಹ ಮಾಡುತ್ತಾ ಬಂದರು. ಅಂದರೆ ತಾನು ಸಂಪಾದಿಸಿದ್ದನ್ನು ಸಮಾಜ ಸೇವೆಗೆ ಅರ್ಪಿಸುತ್ತಲೇ ಬಂದರು.

ಸಮಾಜಸೇವೆ: ಡಾ.ಎಂ.ವಿ ಸದಾಶಿವರ ತಾತ ದಿವಂಗತ ಹಟ್ಟೂರು ವೆಂಕಟಸ್ವಾಮಿ ಅವರು ಜೀವನಪೂರ್ತಿ ಸಮಾಜ ಸೇವೆ ಮಾಡುತ್ತಲೇ ಇದ್ದರು. ಇದ್ದುದರಲ್ಲಿ ಸೇವೆ ಮಾಡುವುದೇ ಅವರ ಕಾಯಕವಾಗಿತ್ತು. ಇವರು ಕೂಡ ಅವರ ತಾತನಂತೆಯೇ ಸಮಾಜಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಕೆಲಸ ಮಾಡುತ್ತಾ ಬಂದುದ್ದನ್ನು ಸೇವೆ ಮಾಡುತ್ತಾ ಪ್ರಸ್ತುತ ಸೇವೆಯನ್ನೇ ಕಾಯಕವನ್ನಾಗಿಸಿಕೊಂಡಿರುವ ಡಾ.ಎಂ.ವಿ ಸದಾಶಿವ ರವರು ಯುವಜನತೆಗೆ ಮಾದರಿಯಾಗಿದ್ದಾರೆ.
ಬಾಲ್ಯದ ಕನಸಿನ ಗೋಪುರಕ್ಕೆ ರೆಕ್ಕೆಯ ಹಾಗೆ ಜೀವನದ ಮೌಲ್ಯಗಳನ್ನು ತುಂಬುವ ಕೆಲಸ ಮಾಡುತ್ತಿದ್ದಾರೆ. ಯುವಜನತೆಗೆ ಮಾರ್ಗದರ್ಶನ, ಬಡವರಿಗೆ ಆರ್ಥಿಕ ಸಹಾಯ, ವಿಕಲ ಚೇತನರಿಗೆ ಉಚಿತ ಬಸ್ ಪಾಸ್, ಹಸಿದವರಿಗೆ ಅನ್ನ, ವಿದ್ಯಾರ್ಥಿಗಳಿಗೆ ಶಿಕ್ಷಣ, ಸಾಮೂಹಿಕ ವಿವಾಹಗಳಿಗೆ ಮಾಂಗಲ್ಯ-ಕಾಲುAಗರ, ಆಹಾರ ಧಾನ್ಯಗಳು, ಉಚಿತ ನೋಟ್ ಬುಕ್ಸ್, ಉಚಿತ ದಿನಪತ್ರಿಕೆಗಳು, ನಿರ್ಗತಿಕರಿಗೆ ಉಚಿತ ಊಟ, ಬಟ್ಟೆ, ಬೀದಿಬದಿಯಲ್ಲಿನ ಜನರಿಗೆ ಸಹಾಯ ಸೇರಿದಂತೆ ಇನ್ನು ಅನೇಕ ಸಹಾಯವನ್ನು ಕಳೆದ 15 ವರ್ಷಗಳಿಗೂ ಹೆಚ್ಚು ಕಾಲ ಸಮಾಜ ಸೇವೆ ಮಾಡುತ್ತಲೇ ಬಂದಿರುವ ಡಾ.ಎಂ.ವಿ ಸದಾಶಿವ ರವರ ಸೇವೆ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ.
ಗೌರವ ಡಾಕ್ಟರೇಟ್ ಪ್ರಶಸ್ತಿ: ಅಂದಿನಿದ ಇಂದಿನವರೆಗೂ ದಣಿವರಿಯದ ದೈವದಂತೆ ಸೇವೆ ಮಾಡುತ್ತಲೇ ಇರುವ ಡಾ.ಎಂ.ವಿ ಸದಾಶಿವರ ಸೇವೆಯನ್ನು ಪರಿಗಣಿಸಿ ನ್ಯಾಶನಲ್ ವರ್ಚುವಲ್ ಫೀಸ್ ಆಫ್ ಎಜುಕೇಶನ್ ಯೂನಿವರ್ಸಿಟಿಯು ಗೌರವ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಿದೆ.

ಮಾದರಿ: ಮಹಿಳೆಯರಿಗೆ ಅಣ್ಣನಾಗಿ, ಬಡವರ ಬಂಧುವಾಗಿ, ಹಸಿದವರಿಗೆ ಅನ್ನದಾತನಾಗಿ, ವಯೋವೃದ್ಧರಿಗೆ ಮಗನಾಗಿ, ಮಕ್ಕಳಿಗೆ ಪೋಷಕರಾಗಿ, ವಿದ್ಯಾರ್ಥಿಗಳಿಗೆ ಗುರುಗಳಾಗಿ, ಯುವಜನತೆಗೆ ಮಾರ್ಗದರ್ಶಕರಾಗಿ ಇಡೀ ಮನುಕುಲಕ್ಕೆ ಮಾದರಿಯಾಗಿದ್ದಾರೆ ಡಾ. ಎಂ.ವಿ ಸದಾಶಿವ ರವರು.

ಟ್ರಸ್ಟ್ ಸಮಾಜಸೇವೆ: ಚಿಕ್ಕಬಳ್ಳಾಪುರದಲ್ಲಿ ಶಿರಡಿ ಸಾಯಿ ಎಜುಕೇಶನ್ ಅಂಡ್ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸ್ಥಾಪಿಸಿ ತಮ್ಮ ಸಮಾಜಸೇವೆಯನ್ನು ಮತ್ತಷ್ಟು ಹೆಚ್ಚಿಸಿರುವುದು ಪ್ರಶಂಸನೀಯ ಕಾರ್ಯವಾಗಿದೆ. ಇವರ ಸೇವೆಯನ್ನು ಪರಿಗಣಿಸಿ ನಾಡಿನ ಸುಮಾರು ಇನ್ನೂರಕ್ಕು ಹೆಚ್ಚು ನಾನಾಕಡೆಗಳಲ್ಲಿ, ಸಂಘ-ಸAಸ್ಥೆಗಳಿAದ ಗೌರವ ಸನ್ಮಾನಗಳು ಮಾಡಿದ್ದಾರೆ.

ಡಾ. ಎಂ.ವಿ ಸದಾಶಿವ ರವರಿಗೆ ಲಭಿಸಿರುವ ಪ್ರಶಸ್ತಿ ಸನ್ಮಾನ ಗೌರವಗಳು:
1.ನ್ಯಾಷನಲ್ ವರ್ಚುವಲ್ ಯುನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಶನ್ ವತಿಯಿಂದ ಗೌರವ ಡಾಕ್ಟರೇಟ್ ಪದವಿ ಪ್ರಶಸ್ತಿ.
2.ಕಾಯಕ ರತ್ನ ರಾಜ್ಯ ಪ್ರಶಸ್ತಿ.
3.ಸಮಾಜಿಕ ರತ್ನ ಪ್ರಶಸ್ತಿ.
4.ಯಶವಂತ ರಾಜ್ಯ ಪ್ರಶಸ್ತಿ.
5.ಕಲಾರತ್ನ ಪ್ರಶಸ್ತಿ.
6.ಕರ್ನಾಟಕ ರಾಷ್ಟ್ರೀಯ ರಾಜ್ಯ ಮಟ್ಟದ ಸೇವಾ ರತ್ನ ಪ್ರಶಸ್ತಿ.
7.ಗೌರವ ಡಾಕ್ಟರೇಟ್ ಪದವಿ.
8.ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ.ಜಿಲ್ಲಾಡಳಿತ ವತಿಯಿಂದ ನಡೆದ ಕೃಷಿಮೇಳದಲ್ಲಿ ಪ್ರಶಸ್ತಿ.
10.ಕುದ್ಮುಲ್ ರಂಗರಾವ್ ರಾಜ್ಯ ಪ್ರಶಸ್ತಿ.
11.ಕರುನಾಡ ಹಣತೆ ಸಾಧಕ ಶ್ರೀ ರಾಜ್ಯ ಪ್ರಶಸ್ತಿ
12.ಶ್ರೇಷ್ಠ ಮಾನವ ರಾಷ್ಟ್ರೀಯ ಪ್ರಶಸ್ತಿ
13.ಕರುನಾಡ ವಿಭೂಷಣ ರಾಷ್ಟ್ರ ಪ್ರಶಸ್ತಿ
14.ಯುವಚೇತನ ಚನ್ನಬಸವಣ್ಣ ಪ್ರಶಸ್ತಿ
15.ವಿಶ್ವ ಕನ್ನಡ ಶ್ರೇಷ್ಠ ಸೇವಾ ರತ್ನ ಪ್ರಶಸ್ತಿ
ಕಾಯಕಯೋಗಿ ಡಾ. ಎಂ.ವಿ ಸದಾಶಿವ ರವರ ಸೇವೆ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ. ಪ್ರತಿಯೊಬ್ಬರ ಮನ-ಮನೆಯಲ್ಲೂ ಇವರ ಹೆಸರು ಕೇಳಬಹುದಾಗಿದೆ. ಯುವಜನತೆಗೆ ಮಾದರಿಯಾಗಿರುವ ಇವರ ಸಮಾಜ ಸೇವೆ ಮತ್ತು ಜೀವನ ಸದಾ ಈಗೆ ಮುಂದುವರೆಯಲಿ, ಮತ್ತಷ್ಟು ಹೆಚ್ಚಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ.

ಕಳೆದ 15ವರ್ಷಗಳಿಂದ ಸಮಾಜಸೇವೆ ಮಾಡುತ್ತಿದ್ದು, ಅದೇ ಜೀವನವಾಗಿದೆ. ಇದರಲ್ಲೇ ತೃಪ್ತಿಯಿದೆ. ಪ್ರಾಮಾಣಿಕವಾಗಿ ದುಡಿಯುತ್ತೇನೆ ಮತ್ತು ಸೇವೆ ಮಾಡುತ್ತೇನೆ. ಸೇವೆಯಲ್ಲಿ ಅನಂತವೂ ಅಡಗಿದೆ. ಯಾರು ಸೇವೆ ಮಾಡುತ್ತಾರೋ ಅವರಿಗೆ ಅದು ತಿಳಿಯುತ್ತದೆ. ನನ್ನಿಂದ ಒಬ್ಬರ ಜೀವನ ಉದ್ಧಾರವಾಗಲಿ, ಯುವಜನತೆ ಸದೃಢವಾಗಲಿ, ಬಲಿಷ್ಠ ದೇಶ ನಿರ್ಮಾಣವಾಗಲಿ ಎಂಬುದೇ ನಮ್ಮ ಆಶಯ.ಸದಾಶಿವ ಎಂ.ವಿ
ಸಮಾಜ ಸೇವಕರು
ಎಸ್.ಎಸ್.ಈ.ಆರ್.ಡಿ.ಟಿ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರು
ಚಿಕ್ಕಬಳ್ಳಾಪುರ.

ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಆದರ್ಶ ವ್ಯಕ್ತಿ ಸದಾಶಿವರವರು ಅತ್ಯತ್ತಮ ಉದಾಹರಣೆಯಾಗಿದ್ದಾರೆ. ಮಕ್ಕಳಂತೆ ಮುಗ್ಧ ಮನಸ್ಸು ಹೊಂದಿರುವ ಇವರು ಪ್ರಾಮಾಣಿಕತೆಗೆ, ಸೇವೆಗೆ ಮತ್ತೊಂದು ಹೆಸರು. ಅಸಹಾಯಕರು, ನಿರ್ಗತಿಕರು, ಬಡವರು, ದೀನ ದಲಿತರು, ಕೈಲಾಗವದರು, ಹಸಿವು ಎಂದು ಬರುವವರು, ಸಹಾಯ ಕೇಳಿ ಬರುವವರು, ಯಾರು ಕಷ್ಟದಲ್ಲಿರುತ್ತಾರೋ ಅವರಿಗೆಲ್ಲಾ ಸದಾ ಕಾಲ ಸಹಾಯ ಮಾಡುತ್ತಲೇ ಇರುವ ಸದಾಶಿವರವರು ನಮ್ಮಲ್ಲೆರಿಗೂ ಆದರ್ಶ ವ್ಯಕ್ತಿಗಳಾಗಿದ್ದಾರೆ.
-ಕೆ.ವಿ. ವಂಕಟರಮಣ ಗುರುಪ್ರಸಾದ್
ಉಪ ವಿಭಾಗಧಿಕಾರಿಗಳು, ಮುಜುರಾಯಿ ಇಲಾಖೆ,
ಚಿಕ್ಕಬಳ್ಳಾಪುರ

ಡಾ|| ಎಂ.ವಿ.ಸದಾಶಿವ ಅಣ್ಣನವರು ಹುಟ್ಟು ಹೋರಾಟಗಾರ ಧೀಮಂತ ನಾಯಕ ಬಡವರ ಆಶಾಕಿರಣ ಕಷ್ಟದಲ್ಲಿದ್ದವರನ್ನು ಕಂಡರೆ ತಕ್ಷಣ ಸ್ಪಂದಿಸುವ ನಿಸ್ವಾರ್ಥ ಮನೋಭಾವವುಳ್ಳ ವ್ಯಕ್ತಿ ನಿರುದ್ಯೋಗಿ ಯುವಕರನ್ನು ಕಂಡರೆ ತಕ್ಷಣ ಯಾವುದಾದರೊಂದು ಉದ್ಯೋಗವನ್ನು ಕೊಡಿಸಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಧೀಮಂತ ನಾಯಕ. ಅಪಾರ ಪರಿಸರ ಪ್ರೇಮ ಉಳ್ಳಂತಹ ಪರಿಸರ ಪ್ರೇಮಿ ಪ್ರಾಣಿ ಪ್ರಿಯ ಯುವಕರು ಅತ್ಯುತ್ತಮ ಮಾರ್ಗದರ್ಶಕರು.ಸೊಪ್ಪಹಳ್ಳಿ ಎನ್.ರಾಮಕೃಷ್ಣ.
ಬಿಜೆಪಿ ಜಿಲ್ಲಾ ಯುವ ಮುಖಂಡರು
ಚಿಕ್ಕಬಳ್ಳಾಪುರ ಜಿಲ್ಲೆ

ಎಂ.ವಿ. ಶಿವಯೋಗಿ, ರಾಂಪುರ
ಮೊಳಕಾಲ್ಮೂರು ತಾ ಚಿತ್ರದುರ್ಗ ಜಿ
9008611900

LEAVE A REPLY

Please enter your comment!
Please enter your name here