ವಯೋ ನಿವೃತ್ತಿ ಹೊಂದಿದ ತೋರಣಗಲ್ಲು ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಮ್ ಎಸ್ ಹೊನ್ನೂರ್ ಸಾಬ್

0
258

ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾಗಿದ್ದ ಶ್ರೀ ಎಮ್.ಎಸ್ ಹೊನ್ನೂರು ಸಾಬ್ ಅವರು ಸೇವೆಯಿಂದ ಇದೇ ಮೇ 31 ರಂದು ವಯೋ ನಿವೃತ್ತಿ ಹೊಂದಿದರು,

ಅವರಿಗೆ ಬಿಳ್ಕೊಡಿಗೆ ಸಮಾರಂಭದಲ್ಲಿ ತಾಲೂಕಿನ ಬಿ.ಇ.ಓ ಮೈಲೇಶ್ ಬೇವೂರು ಅವರು ಭಾಗವಹಿಸಿ, ಸನ್ಮಾನಿಸಿ ಶುಭಕೋರಿ ಮಾತನಾಡಿದರು, ಶ್ರೀ ಎಮ್.ಎಸ್ ಹೊನ್ನೂರು ಸಾಬ್ ಅವರು ದಿನಾಂಕ 13.5.2020 ರಿಂದ ಇಲ್ಲಿಯ ವರೆಗೆ ತೋರಣಗಲ್ಲು ಪ್ರೌಢ ಶಾಲೆಯ ಮುಖ್ಯ ಗುರುಗಳಾಗಿ ಉತ್ತಮ ಸೇವೆ ಸಲ್ಲಿಸಿದ್ದು, ಶಾಲೆ ಸಹ ಶಿಕ್ಷಕರಿಗೂ ಮತ್ತು ಮಕ್ಕಳಿಗೂ ಪ್ರೀತಿ ಪಾತ್ರರಾಗಿದ್ದು ಪೋಷಕರೊಂದಿಗೂ ಸಹ ಉತ್ತಮವಾಗಿ ಸ್ಪಂದಿಸುವ ಅವರ ಗುಣ ವಿಶೇಷವಾಗಿದ್ದು,
ಸಮೀಪದ ಎಲ್ಲಾ ಶಾಲೆಗಳ ಮುಖ್ಯ ಗುರುಗಳೊಂದಿಗೆ ಉತ್ತಮವಾದ ಬಾಂಧವ್ಯ ಹೊಂದಿದ್ದರು, ತಾಲೂಕಿನ ಆಡಳಿತಾತ್ಮಕ ವಿಷಯಗಳ ಬಗ್ಗೆಯೂ ಅಷ್ಟೇ ಜವಾಬ್ದಾರಿತನದೊಂದಿ ವರ್ತಿಸಿ, ಕೋವಿಡ್ ಸಮಯದಲ್ಲಿಯೂ ಸಹ ತಾಳ್ಮೆಯಿಂದ ನಡೆದುಕೊಂಡು ಶಾಲೆಯ ಪಾಠ, ಆಟಗಳಲ್ಲಿಯೂ ಮಕ್ಕಳಲ್ಲಿ ಆಸಕ್ತಿಯನ್ನು ಹೆಚ್ಚಿಸುವ ಮಟ್ಟದಲ್ಲಿ ಪ್ರಯತ್ನ ಮಾಡಿದ್ದರು, ಎಲ್ಲರೊಂದಿಗೆ ಉತ್ತಮ ಬಾಂಧವ್ಯದಿಂದ ಕಾರ್ಯ ನಿರ್ವಹಿಸಿದ್ದಾರೆ ಅವರಿಗೆ ಶುಭವಾಗಲಿ ಎಂದು ಅವರು ತಿಳಿಸಿದರು,

ಸಮಾರಂಭದಲ್ಲಿ ಅವರ ಶ್ರೀಮತಿ ನಾಜಿನೀನ್ ಅವರು ಭಾಗವಹಿಸಿದ್ದು ಸಂಭ್ರಮ ಹೆಚ್ಚಾಗಲು ಕಾರಣವಾಗಿತ್ತು, ಸಮಾರಂಭದಲ್ಲಿ ಭಾಗವಹಿದ ಮುಖ್ಯಗುರುಗಳು ಅವರ ಸ್ನೇಹ, ಒಡನಾಟದ ಬಗ್ಗೆ ತಿಳಿಸುತ್ತಾ ನಿವೃತ್ತಿ ಜೀವನ ಆರೋಗ್ಯ, ಸುಖ,ಶಾಂತಿ,ನೆಮ್ಮದಿಯೊಂದಿಗೆ ಕೂಡಿರಲಿ ಎಂದು ಶುಭ ಕೋರಿದರು, ವಿದ್ಯಾರ್ಥಿಗಳು ಸಹಾ ಮಾತನಾಡಿ ಶುಭ ಕೋರಿದರು,

ಈ ಸಂದರ್ಭದಲ್ಲಿ ಬಿ.ಇ.ಓ ಕಛೇರಿಯ ಇ.ಸಿ.ಓ ಬಸವರಾಜ್, ಮಂಜುನಾಥ್, ದೋಣಿ ಮಲೈ ಶಾಲೆಯ ಮು.ಗು ವೀರೇಶಪ್ಪ, ವಡ್ಡು ಶಾಲೆಯ ಮು.ಗು ಗಂಗಾ ಪಾಟೀಲ್, ರಾಜಾಪುರ ಮತ್ತು ತೋರಣಗಲ್ಲು ಮು.ದೇ.ವ.ಶಾ ಕೊಟ್ರೇಶ್, ವೀರೇಶಪ್ಪ, ಬಸವೇಶ್ವರ ಪ್ರೌಢಶಾಲೆ ಆರ್.ಎಸ್ ಮು.ಗು ಧರಿಯಪ್ಪ ರಾಥೋಡ್, ತಾಳೂರು ಮು.ಗು ನಾಗರಾಜ್, ದೊಡ್ಡ ಅಂತಾಪುರ ಮು.ಗು ನಿಲೋಫರ್ ಜಹಾಂ, ಹೊಸದರೋಜಿ ಮು.ಗು ಉಲ್ಲೇಶಿ, ತೋರಣಗಲ್ಲು ಮು.ಗು ಪಾರ್ವತಿ, ಮು.ಗು ಮಲ್ಲಿಕಾರ್ಜುನ, ಮತ್ತು ಶಾಲೆಯ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗ ವಹಿಸಿದ್ದರು,

LEAVE A REPLY

Please enter your comment!
Please enter your name here