ಮೊದಲನೇ ತ್ರೈಮಾಸಿಕ ಉಪವಿಭಾಗ ಮಟ್ಟದ ಜಾಗೃತಿ ಸಮಿತಿ ಸಭೆ ಜೂ.26 ರಂದು

0
92

ಬಳ್ಳಾರಿ,ಜೂ.15:ಮಲಹೊರುವ ಪದ್ಧತಿ ನಿಷೇಧ ಹಾಗೂ ಪುರ್ನವಸತಿ ಕಾಯ್ದೆಯನ್ವಯ ಮೊದಲನೇ ತ್ರೈಮಾಸಿಕ ಉಪವಿಭಾಗ ಮಟ್ಟದ ಜಾಗೃತಿ ಸಮಿತಿ ಸಭೆ ಜೂ.26 ರಂದು ಮಧ್ಯಾಹ್ನ 03 ಕ್ಕೆ ಸಹಾಯಕ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಉಪವಿಭಾಗ ಮಟ್ಟದ ಜಾಗೃತಿ ಸಮಿತಿಯ ಅಧ್ಯಕ್ಷರು ಹಾಗೂ ಸಹಾಯಕ ಆಯುಕ್ತರಾದ ಹೇಮಂತ್ ಕುಮಾರ್ ಅವರು ತಿಳಿಸಿದ್ದಾರೆ.

ಸಮಿತಿಯ ಸದಸ್ಯರು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಸೂಕ್ತ ದಾಖಲೆಗಳೊಂದಿಗೆ ಹಾಜರಾಗಬೇಕು.
ವಿಷಯಸೂಚಿ: ಮ್ಯಾನುವೆಲ್ ಸ್ಕ್ಯಾವೆಂಜರ್‍ಗಳ ಸಮೀಕ್ಷೆಯ ವರದಿ ನೀಡುವುದು. ಸಫಾಯಿ ಕರ್ಮಚಾರಿ ಅಥವಾ ಪೌರಕಾರ್ಮಿಕರ ವಿವರ ನೀಡುವುದು. ಪೌರ ಕಾರ್ಮಿಕರಿಗೆ ಇಎಸ್‍ಐ ಮತ್ತು ಇಪಿಎಫ್ ಸೌಲಭ್ಯ ಒದಗಿಸಿದ ಕುರಿತು ಮಾಹಿತಿ. ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿಸಿದ ಕುರಿತು ಮಾಹಿತಿ. ಸ್ಥಳೀಯ ಸಂಸ್ಥೆವಾರು ಸಫಾಯಿ ಕರ್ಮಚಾರಿಗಳಿಗೆ, ಮ್ಯಾನುವೆಲ್ ಸ್ಕ್ಯಾವೆಂಜರ್‍ಗಳಿಗೆ ನೀಡಿದ ಸೌಲಭ್ಯಗಳ ವಿವರ. ಸ್ಥಳೀಯ ಸಂಸ್ಥೆವಾರು ಸಫಾಯಿ ಕರ್ಮಚಾರಿಗಳಿಗೆ ನಿವೇಶನ, ವಸತಿ ಸೌಲಭ್ಯ ಕಲ್ಪಿಸುವ ಕುರಿತು ಮಾಹಿತಿ. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದಿಂದ ಸಫಾಯಿ ಕರ್ಮಚಾರಿಗಳಿಗೆ ನೀಡಿದ ಸೌಲಭ್ಯಗಳ ವಿವರ ಹಾಗೂ ಅಭಾ ಕಾರ್ಡ್ ಸೌಲಭ್ಯ ಒದಗಿಸಿದ ಕುರಿತು ಮಾಹಿತಿ ನೀಡಬೇಕು.

ಈ ಮೇಲ್ಕಂಡ ಮಾಹಿತಿಯ ನಮೂನೆಗಳನ್ನು ಈ ಕಚೇರಿಯ ಇ-ಮೇಲ್ ವಿಳಾಸ tswobellary@gmail.com ಗೆ ಜೂ.23 ರೊಳಗೆ ಕಳುಹಿಸಬೇಕು ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here