ಶಿಶುಗಳಿಗೆ ಆರು ತಿಂಗಳ ನಂತರದಿಂದ ಪೂರಕ ಆಹಾರ ಪ್ರಾರಂಭಿಸಿ; ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ.

0
210

ಸಂಡೂರು: ಮಾ: 04: ಶಿಶುಗಳಿಗೆ ಆರು ತಿಂಗಳ ನಂತರದಿಂದ ಪೂರಕ ಆಹಾರ ಪ್ರಾರಂಭಿಸಿ; ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,ಅವರು ತಿಳಿಸಿದರು
ತಾಲೂಕಿನ ತೋರಣಗಲ್ಲು ಗ್ರಾಮದ ನಾಲ್ಕನೇ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಕೆ.ಹೆಚ್.ಪಿ.ಟಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾದ ಪೋಷಣ ಅಭಿಯಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಗರ್ಭಿಣಿಯರು ಗರ್ಭಾವಸ್ಥೆಯಲ್ಲೆ ಸರಿಯಾದ ಪೌಷ್ಟಿಕಾಹಾರ ಸೇವಿಸಬೇಕು, ಹಾಲು, ಹಣ್ಣು,ಮೊಳಕೆ ಕಾಳು,ಸೊಪ್ಪು, ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು, ಶಿಶು ಜನನವಾದ ನಂತರ ಆರು ತಿಂಗಳು ಕೇವಲ ಎದೆಹಾಲು ಮಾತ್ರ ನೀಡಬೇಕು, ತದನಂತರ ದ್ರವರೂಪದ ಪೂರಕ ಆಹಾರ ಕೊಡಬೇಕು, ಎಲ್ಲಾ ಲಸಿಕೆಗಳನ್ನು ಸರಿಯಾದ ಸಮಯಕ್ಕೆ ಕೊಡಿಸಬೇಕು,ಹೆಣ್ಣುಮಕ್ಕಳನ್ನು ಬೇದ ವಿಲ್ಲದೇ ಬೆಳಸಬೇಕು,ಮತ್ತು ಓದಿಸಬೇಕು, ಅದಕ್ಕಾಗಿ ಮಾತೃವಂದನಾ, ಭಾಗ್ಯಲಕ್ಷ್ಮಿ , ಸುಕನ್ಯಾ ಸಂವೃದ್ಧಿ ಯೋಜನೆಗಳ ಸೌಲಭ್ಯ ಪಡೆದುಕೊಳ್ಳ ಬೇಕು ಎಂದು ಅವರು ತಿಳಿಸಿದರು,

ನಂತರ ಶಿಶುಗಳಿಗೆ ಅನ್ನಪ್ರಾಸನ ಕಾರ್ಯಕ್ರಮ ಜರುಗಿತು, ಅರ್ಜಿಗಳನ್ನು ಸೂಕ್ತ ಸಮಯದಲ್ಲಿ ಸಲ್ಲಿಸುವಂತೆ, ಮತ್ತು ಮಧ್ಯಾಹ್ನದ ಊಟಕ್ಕೆ ಗರ್ಭಿಣಿ ಮತ್ತು ಬಾಣಂತಿಯರು ಅಂಗವಾಡಿ‌ ಕೇಂದ್ರಕ್ಕೆ ಬರುವಂತೆ ಕಾರ್ಯಕರ್ತೆ ಮಲ್ಲಮ್ಮ ತಿಳಿಸಿದರು, ಕೆ.ಹೆಚ್.ಪಿ.ಟಿ ಸ್ವಯಂ ಸೇವಕಿ ಉಮಾದೇವಿ ಕ್ಷಯ ರೋಗದ ಲಕ್ಷಣಗಳು ಇದ್ದವರನ್ನು ತಪಾಸಣೆಗೆ ಆಸ್ಪತ್ರೆಗೆ ಕಳಿಸುವಂತೆ ತಿಳಿಸಿದರು,

‌ಈ ಸಂದರ್ಭದಲ್ಲಿ ಗ್ರಾಮ ಹಿರಿಯ ನಾಗರೀಕರಾದ ಹುಲಿಗೆಮ್ಮ,ನಿರ್ಮಲ, ಸುನಿತಾ,ಸಂಗೀತಾ, ಪ್ರಿಯಾ,ಸುಜಾತ, ಜಯಮ್ಮ,ಮಹಂಕಾಳಿ, ವಂದನಾ,ಅನಿತಾ, ಮಹಾಲಕ್ಷ್ಮಿ, ಕೌಶಿಕಿ,ನೀಲಮ್ಮ,ನಾಗಲಕ್ಷ್ಮಿ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here