ಕನ್ನನಾಯಕನಕಟ್ಟಿ ಮಕ್ಕಳಿಗಾಗಿ ಸಣ್ಣ ಕಥೆ ಬರೆಯುವ ಅಭಿಯಾನ

0
92

ಕೊಟ್ಟೂರು : ಸಮೀಪದ ಕನ್ನನಾಯಕನ ಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಕೆ ಅಯ್ಯನಹಳ್ಳಿ ಮಕ್ಕಳಿಗಾಗಿ ಸಣ್ಣ ಕಥೆ ಬರೆಯುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ಮಕ್ಕಳು ಸಣ್ಣ ಕಥೆ ಬರೆಯುವ ಹವ್ಯಾಸದಿಂದ ಮಕ್ಕಳಲ್ಲಿ ನೈತಿಕ ಮೌಲ್ಯ ಹೆಚ್ಚುತ್ತದೆ ಎಂದು ಯು ಮೂಗಣ್ಣ. ಮುಖ್ಯ ಗುರುಗಳು ಮಾತನಾಡಿದರು.

ಮಕ್ಕಳು ಸಣ್ಣ ಕಥೆ ಬರೆಸುವ ಕಾರ್ಯದಲ್ಲಿ ಗ್ರಂಥಾಲಯಗಳ ಪಾತ್ರ ಮಹತ್ವದ್ದಾಗಿದೆ ಆದ್ದರಿಂದ ಎಲ್ಲಾ ಮಕ್ಕಳು ಗ್ರಂಥಾಲಯ ಕ್ಕೆ ಬಂದು ಓದು ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಮಲ್ಲಪ್ಪ ಗುಡ್ಲಾನೂರ್, ಶಾಖಾಗ್ರಂಥಾಲಯ ಅಧಿಕಾರಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮಕ್ಕಳು ಸಣ್ಣ ಕಥೆ ಬರೆಯುವ ಸಿದ್ಧಾಂತ ,ನಿಯಮಗಳನ್ನು ಮುರುಗೇಶ್ ಗೌಡ ಇವರು ಸಾ ವಿವರವಾಗಿ ತಿಳಿಸಿಕೊಟ್ಟರು. ಹೇಮಪ್ಪ ಸ್ವಾಗತಿಸಿದರು .ಜಯಶ್ರೀ ಹೊಡೆದ್ ಶಿಕ್ಷಕಿ ನಿರೂಪಿಸಿದರು .ಕೆ ಎನ್ ಮಂಜುನಾಥ.ಶಿಕ್ಷಕರು ವಂದಿಸಿದರು. ಮೇಘನಾ ಸಂಗಡಿಗರು ಪ್ರಾರ್ಥಿಸಿದರು

LEAVE A REPLY

Please enter your comment!
Please enter your name here