ಕಾಯಕಯೋಗಿ ಶರಣ ನೂಲಿ ಚಂದಯ್ಯನವರ 914 ನೇ ಜಯಂತ್ಯೋತ್ಸವ ಹಾಗೂ ಜಾಲಿಹಾಳ ಗ್ರಾಮದಲ್ಲಿ ಗ್ರಾಮ ಘಟಕ ಉದ್ಘಾಟನೆ.

0
139

ಸಿಂಧನೂರು ತಾಲೂಕು ಕುಳುವ ಮಹಾಸಂಘ (ರಿ) ಕೊರಮ ಕೊರಚ ಕೊರವ ಭಂಜತ್ರಿ ಸಮುದಾಯಗಳ ಒಕ್ಕೂಟದಿಂದ ಶ್ರೀ ಕಾಯಕಯೋಗಿ ಶರಣ ನುಲಿಯ ಚಂದಯ್ಯನವರ 914 ನೇ ಜಯಂತ್ಯೋತ್ಸವ ಮತ್ತು ಸಿಂಧನೂರು ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಗ್ರಾಮ ಘಟಕ ಉದ್ಘಾಟನೆ ಮಾಡಿದರು.
ಸಿಂಧನೂರು ಆರ್.ಜಿ ಮೆಲೋಡಿಸ್ ಸಂಸ್ಥಾಪಕರಾದ ವೀರೇಶ ದೇವರಮನಿ ಸಾಹಿತ್ಯದಲ್ಲಿ ಹಾಗೂ ರಂಗು ಗಲಗ್ ಅವರ ಕಂಠಸಿರಿಯಲ್ಲಿನ ಕಾಯಕಯೋಗಿ ಶರಣ ಶ್ರೀ ನುಲಿಯ ಚಂದಯ್ಯವರ ಭಕ್ತಿ ಗೀತೆ ಧ್ವನಿಸುರುಳಿ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಶ್ರೀ ಪ.ಪೂ.ಜಗದ್ಗುರು ಶ್ರೀ ಬಸವ ಪ್ರಸಾದ ಮಹಾಸ್ವಾಮಿಗಳು ಶ್ರೀ ಶಿವಶಕ್ತಿಪೀಠ ಸುಕ್ಷೇತ್ರ ಇರಕಲ್ ಮಠ ತಾ// ಮಸ್ಕಿ ದಿವ್ಯಸಾನಿದ್ಯಾ ವಹಿಸಿದ್ದರು,ಶ್ರೀ ನೀಲಕಂಠಪ್ಪ ಭಜಂತ್ರಿ ಮಸ್ಕಿ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿ.ಪಂ.ಸದಸ್ಯರಾದ ಶ್ರೀ ಏನ್ ಶಿವನಗೌಡ ಗೊರೇಬಾಳ ಅವರು
ಎ.ಕೆ.ಎಂ.ಎಸ್ ಜಾಲಿಹಾಳ ಗ್ರಾಮ ಘಟಕವನ್ನು ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಾಯಕ ಮಾಡಿ ಕಾಯಕದ ಬೆವರಿನಿಂದ ನೈವೇದ್ಯ ಮಾಡಿದರೆ ಮಾತ್ರ ಶಿವನಿಗೆ ಅರ್ಪಿತಾ ಮೋಸ ವಂಚನೆ ಲಂಚದಿಂದಲ್ಲ ಕಾಯಕವೇ ಶ್ರೇಷ್ಠ ಅಂತ ಶ್ರೀ ಕಾಯಕಯೋಗಿ ಶರಣ ನುಲಿಯ ಚಂದಯ್ಯ ನವರ ಕುರಿತು ಹಿತವಚನ ಮತ್ತು ಶರಣರ ವಿಚಾರಗಳನ್ನು ಎ.ಕೆ.ಎಂ.ಎಸ್ ಸಮುದಾಯದ ಜನತೆಗೆ ಮನ ಮುಟ್ಟುವಂತೆ ಹೇಳಿದರು. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸಾಹಿತ್ಯ ಗಾಯನ ಧವನಿಸುರುಳಿ ಮೆಚ್ಚಿ ವೀರೇಶ ದೇವರಮನಿ ಹಾಗೂ ರಂಗು ಗಲಗ್ ಅವರಿಗೆ ಸನ್ಮಾನಿಸಿದರು ಹಾಗೂ ಸಮುದಾಯದ ಪ್ರತಿಭಾವಂತ ಬಡವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ೧೦ ನೇ ಪಿ,ಯು,ಸಿ, ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು.

LEAVE A REPLY

Please enter your comment!
Please enter your name here