ಹೋಬಳಿ ಮಟ್ಟದ ತರಬೇತಿ ಕಾರ್ಯಾಗಾರ

0
58

ಕೊಟ್ಟೂರು: ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ದೂಪದಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ತಾಲೂಕಿನ ಕೋಗಳಿ ಹೋಬಳಿ ಮಟ್ಟದ ಕಾಯಕ ಬಂಧುಗಳ ತರಬೇತಿ ಕಾರ್ಯಾಗಾರ ಜರುಗಿತು.

ಮಾನ್ಯ ಸಹಾಯಕ ನಿರ್ದೇಶಕರಾದ ವಿಜಯಕುಮಾರ್ ಅವರು ಕಾರ್ಯಗಾರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ, ಯೋಜನೆಯ ಸ್ವರೂಪ, ಕಾಯ್ದೆ, ರೂಪರೇಷಗಳು, ಒಗ್ಗೂಡಿಸುವಿಕೆ, ವೈಯಕ್ತಿಕ ಕಾಮಗಾರಿಗಳ ಕುರಿತು ಸಭೆಗೆ ಮಾಹಿತಿ ನೀಡಿದರು.
ಸಾಮಾಜಿಕ ಪರಿಶೋಧನೆಯ ತಾಲೂಕು ವ್ಯವಸ್ಥಾಪಕರಾದ ಸಕ್ರಪ್ಪ ಧರ್ಮರ್ ಮಾತನಾಡಿ, ಸಾಮಾಜಿಕ ಪರಿಶೋಧನೆಯ ಮಹತ್ವ, ಪಾರದರ್ಶಕತೆ, ಕಡತಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಐಇಸಿ ಸಂಯೋಜಕರಾದ ಪ್ರಭುಕುಮಾರ್ ಉಪ್ಪಾರ್ ಮಾತನಾಡಿ, ಸಾಮಾಜಿಕ ಜಾಲತಾಣಗಳ ಬಳಕೆ, ನಿರ್ವಹಣೆ, ಮಹಿಳಾ ಸಹಭಾಗಿತ್ವ, ಗ್ರಾಮ ಆರೋಗ್ಯದ ಕುರಿತು ಕಾಯಕ ಬಂಧುಗಳಿಗೆ ಮಾಹಿತಿ ನೀಡಿದರು.
ತಾಂತ್ರಿಕ ಸಹಾಯಕರಾದ ಶ್ರೀಧರ್ ಮಾತನಾಡಿ, ಅಳತೆ, ಎನ್ ಎಂಎಂಎಸ್ ಹಾಜರಾತಿ ಕುರಿತು ಮಾಹಿತಿ ನೀಡಿದರು.

ತಾಂತ್ರಿಕ ಸಹಾಯಕರಾದ ರವಿನಾಯ್ಕ್, ರಾಘವೇಂದ್ರ, ಗ್ರಾಮ ಪಂಚಾಯತಿ ಡಿಇಒ, ಕರವಸೂಲಿಗಾರರು, ಬಿ ಎಫ್ ಟಿ ಎಸ್ , ಜಿ ಕೆ ಎಂ ಎಸ್, ಕಾಯಕ ಬಂದುಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here