ಎರಡೂ ಡೋಸ್ ಲಸಿಕೆ ಪಡೆದರೆ ಮಾತ್ರ ಕೋವಿಡ್ ನಿಂದ ಸುರಕ್ಷತೆ : ಡಾ.ಸುಮಿತ್ರ,

0
578

ಸಂಡೂರು:ಜ:19: ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದಲ್ಲಿ ಆಯೋಜಿಸಲಾದ ಕೋವಿಡ್ ಲಸಿಕಾ ಮೇಳ ಉದ್ದೇಶಿಸಿ ಮಾತನಾಡಿದ ಅವರು ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಜನರು ಕಾದು ನೋಡುವ ತಂತ್ರ ಮಾಡುತ್ತಿದ್ದಾರೆ ಮೂರನೆ ಅಲೆ ಮಾರಕವೆ ಅಥವಾ ಸಾಮಾನ್ಯವೇ ನೋಡಿ ಲಸಿಕೆ ಪಡೆದರೆ ಆಯಿತು ಎನ್ನುವ ಮನೋಭಾವನ್ನು ಜನರು ಬಿಡಬೇಕು, ಎಷ್ಟೇ ರೂಪಾಂತರ ಬರಲಿ ನಾವು ಎರಡೂ ಡೋಸ್ ಲಸಿಕೆ ಪಡೆದಿರಬೇಕು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಇಂದಿನ ಮೆಗಾ ಮೇಳದಲ್ಲಿ ತಾಲೂಕಿನಾದ್ಯಂತ 4000 ಡೋಸ್ ಲಸಿಕೆ ನೀಡಲು ಸಿದ್ದತೆ ಮಾಡಿ ಕೊಳ್ಳಲಾಗಿದೆ, ಇದರಲ್ಲಿ ಶಾಲೆ ಮತ್ತು ಕಾಲೇಜುಗಳಲ್ಲಿ ಲಸಿಕೆ ವಂಚಿತರಿಗೂ ಹಾಗೂ ಶಾಲೆ ಕಾಲೇಜುಗಳಿಂದ ಹೊರಗುಳಿದ ಮಕ್ಕಳಿಗೂ ಲಸಿಕೆ ಹಾಕುವ ಗುರಿ ಹೊಂದಿದ್ದೇವೆ, ಶಾಲೆ ಕಾಲೇಜುಗಳಿಂದ ಮಕ್ಕಳ ಹೆಸರು, ಪೋಷಕರ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡಿದ್ದೆವೆ, ನಾವೇ ಅವರಿಗೆ ಕರೆ ಮಾಡಿ ಕರೆದು ಲಸಿಕೆ ಹಾಕುತ್ತಿದ್ದೆವೆ ಮತ್ತು ಅಂಗಡಿ, ಹೋಟೆಲ್ ಗಳಲ್ಲಿ ಕೆಲಸ ಮಾಡುವ 15 ವರ್ಷ ಮೇಲ್ಪಟ್ಟ ಮಕ್ಕಳನ್ನು ಕರೆತಂದು ಲಸಿಕೆ ನೀಡುತ್ತೇವೆ, ಯಾವೊಬ್ಬ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು,

ಈಗಾಗಲೇ ತೋರಣಗಲ್ಲು ವ್ಯಾಪ್ತಿಯಲ್ಲಿ ನಾಲ್ಕು ಆರ್.ಅರ್ ಟೀಮ್ ಗಳು ವಡ್ಡು, ಕುರೇಕುಪ್ಪ, ರೈಲ್ವೆ ನಿಲ್ದಾಣ , ತೋರಣಗಲ್ಲು, ಸುಲ್ತಾನ್ ಪುರ ಗ್ರಾಮಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ, ಕೋವಿಡ್ ಪಾಸಿಟಿವ್ ಬಂದ ಮನೆಗೆ ಬೇಟಿ ನೀಡಿ ಆರೋಗ್ಯ, ಪಲ್ಸ್ ರೇಟ್, ಆಕ್ಸಿಜನ್ ಲೆವೆಲ್ ಬಗ್ಗೆ ವಿಚಾರಣೆ ಮಾಡಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಸದ್ಯ ಯಾವುದೇ ತೀವ್ರತರ ರೋಗಿಗಳು ಕಂಡುಬಂದಿಲ್ಲ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಅರ್.ಬಿ.ಎಸ್.ಕೆ ತಂಡದ ಡಾ. ಸುಮಿತ್ರಾ, ಡಾ. ದಿಲೀಪ್ ಕುಮಾರ್, ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ನೇತ್ರಾಧಿಕಾರಿ ಅಶೋಕ್, ದೈಹಿಕ ಶಿಕ್ಷಕರಾದ ಶರಣಬಸವ, ಆರೋಗ್ಯ ಸುರಕ್ಷಾಧಿಕಾರಿ ಸೂಫಿ ಶರ್ಮ, ಆಶಾ ಕಾರ್ಯಕರ್ತೆಯರಾದ ವಿಜಯಶಾಂತಿ, ಕಾವೇರಿ,ಶ್ರೀದೇವಿ, ಪದ್ಮಾ, ಆಶಾ, ಹುಲಿಗೆಮ್ಮ, ವೆಂಕಟಲಕ್ಷ್ಮಿ, ರಾಜೇಶ್ವರಿ, ರೇಖಾ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here