ರೈತರ ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ಸರಬರಾಜು ಮಾಡಲು ಮನವಿ

0
50

ಕೊಟ್ಟೂರು ತಾಲ್ಲೂಕಿನಲ್ಲಿ ರೈತರ ಜಮೀನುಗಳ ಪಂಪ್‌ಸೆಟ್‌ಗಳಿಗೆ 120 ರಿಂದ 150 ವೊಲ್ಟೇಜ್ ಸರಬರಾಜಾಗುತ್ತಿದ್ದು, ಜಮೀನುಗಳಲ್ಲಿನ ಪಂಪ್‌ಸೆಟ್‌ಗಳು ಚಾಲನೆ ಆಗುತ್ತಿಲ್ಲ. ಇದರಿಂದ ಬೆಳೆಗಳು ಒಣಗಿ ಹೋಗುವ ಸಂಭವವಿದ್ದು, ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ಸರಬರಾಜು ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಗುರುವಾರ ಜೆಸ್ಕಾಂ ಸಹಾಯಕ ಅಭಿಯಂತರರಿಗೆ ಮನವಿ ಮಾಡಿದರು.

ಮುಂಗಾರು ಮಳೆ ಕೈಕೊಟ್ಟು ಬೆಳೆಗಳು ಒಣಗಿ ನಿಂತಿದ್ದು, ರೈತರು ಕಂಗಾಲಾಗಿದ್ದಾರೆ ಕೆ.ಇ.ಬಿ. ಅಧಿಕಾರಿಗಳು ರೈತರ ಕರೆಗಳಿಗೆ ಸ್ಪಂದಿಸದೇ ಇರುವುದರಿಂದ ರೈತರಿಗೆ ತೀವ್ರ ಸಂಕಷ್ಟ ಬಂದಿದೆ ಎಂದು ಪತ್ರದಲ್ಲಿ ತಿಳಿಸಿದರು. ರೈತರ ಪಂಪ್‌ಸೆಟ್‌ಗಳಿಗೆ 300 ರಿಂದ 350 ವೊಲ್ಟೇಜ್ ವಿದ್ಯುತ್ ಸರಬರಾಜು ಮಾಡಬೇಕೆಂದು ಮನವಿ ಮಾಡಿದರು. ಟಿ.ಸಿ.ಗಳು ಸುಟ್ಟು ಹಾಳಾಗುತ್ತಿರುವುದರಿಂದ ತಾವುಗಳು ವೋಲ್ಟೇಜ್‌ಅನ್ನು ನಿಗದಿತ ಪ್ರಮಾಣದಲ್ಲಿ ಪಂಪ್‌ಸೆಟ್‌ಗಳಿಗೆ ಪೂರಕವಾದಂತಹ ವಿದ್ಯುತ್ ಪೂರೈಕೆ ಮಾಡಬೇಕೆಂದು ತಿಳಿಸಿದರು. ಮನವಿ ಪತ್ರ ಸ್ವೀಕರಿಸಿ, ರೈತರ ಪಂಪ್‌ಸೆಟ್‌ಗಳಿಗೆ ಸೂಕ್ತವಾಗಿ ವಿದ್ಯುತ್ ಪೂರೈಕೆ ಮಾಡಲಾಗುವುದು ಮತ್ತು ರೈತರ ಕರೆಗಳಿಗೆ ಸ್ಪಂದಿಸದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಪ್ರಕಾಶ್ ಪತ್ತನೂರು ತಿಳಿಸಿ, ಪ್ರತಿ ದಿನ 6 ರಿಂದ 9 ಗಂಟೆಯವರೆಗೆ ವಿದ್ಯುತ್ ಸರಬರಾಜು ಮಾಡಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಂಬೂರು ಮರುಳಸಿದ್ದಪ್ಪ, ಎನ್ ಭರಮಣ್ಣ, ಜಿ.ಮಲ್ಲಿಕಾರ್ಜುನ, ಸಿದ್ದಪ್ಪ, ಕೆ ಎಸ್.ಜಯಪ್ರಕಾಶ್ ನಾಯ್ಕ, ನಾಗರಾಜ ಗೌಡ, ಕಮಂದರ್,ದೂಪದಹಳ್ಳಿ ಭಾಗ್ಯವಂತ,ತಾಂಡಾದ ನಾಗನಾಯ್ಕ , ಕೆ.ನಾಗರಾಜ, ಪಾಲಾಕ್ಷಪ್ಪ,ಕೊಟ್ರೆಶಪ್ಪ ಎಂ, ಸಿದ್ದಪ್ಪ,ಕೊಟ್ರಯ್ಯಸ್ವಾಮಿ ಕೆ ಅಯ್ಯನಹಳ್ಳಿ, ರಮೇಶ ನಾಯ್ಕ ,ಗಂಗಾಧರ,ಸೊಮ್ಲಾ ನಾಯ್ಕ, ಜನಾರ್ಧನ ಹರಾಳು, ರೈತ ಪ್ರಮುಖ ಮುಖಂಡರು  ಇದ್ದರು.

LEAVE A REPLY

Please enter your comment!
Please enter your name here