ಸುರಕ್ಷಿತ ಮಾತೃತ್ವ ಅಭಿಯಾನ ಕುರಿತು ಅರಿವು ಕಾರ್ಯಕ್ರಮ

0
150

ಸಂಡೂರು: ನ: 09: ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಹೆಚ್.ಎಲ್.ಸಿ ಗಾರ್ಡನ್‌ನಲ್ಲಿ ಆಶಾ ಕಾರ್ಯಕರ್ತೆಯರಿಗೆ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮದಡಿ ಸುರಕ್ಷಿತ ಮಾತೃತ್ವ ಅಭಿಯಾನ ಯಶಸ್ವಿ ಗೊಳಿಸುವ ಕುರಿತು ಅರಿವು ಮೂಡಿಸಲಾಯಿತು, ಪ್ರತಿಯೊಂದು ಗರ್ಭಿಣಿ ಮಹಿಳೆಯರಿಗೆ ಕನಿಷ್ಟ ಆರು ಬಾರಿ ತಪಾಸಣೆಗೆ ಒಳಪಡಿಸ ಬೇಕು, ತೊಡಕಿನ ಗರ್ಭಿಣಿಯರು ಒಂಬತ್ತು ಬಾರಿ ತಪಾಸಣೆಗೆ ಒಳಪಡಿಸಲೇಬೇಕು, ಗರ್ಭಿಣಿಗೆ ತಾಯಿಕಾರ್ಡ್ ಎಂಬುದು ಮಾರ್ಗದರ್ಶಕ ಇದ್ದಂತೆ, ಮುಖ ಪುಟದಲ್ಲಿ ಹಸಿರು,ಕೆಂಪು,ಹಳದಿ,ನೀಲಿ ವರ್ಗಿಕರಣ ಬಣ್ಣದ ಸ್ಟಿಕ್ಕರ್ ಹಚ್ಚಬೇಕು, ರಕ್ತದ ಗುಂಪು,ರಕ್ತ ಹೀನತೆ,ಹೆಚ್.ಬಿ.ಎಸ್.ಎ.ಜಿ, ಹೆಚ್.ಐ.ವಿ,ಥೈರಾಯ್ಡ್ ,ಬಿ.ಪಿ, ಮಧುಮೇಹ ಟೆಸ್ಟ್ ಗಳನ್ನು ಮಾಡಿಸಿದ ರಿಜಲ್ಟ್‌ನ್ನು ತಾಯಿ ಕಾರ್ಡ್‌ನಲ್ಲಿ ದಾಖಲಿಸಬೇಕು,

ಬಾಯಿ ತಪಾಸಣೆಯೂ ಅಷ್ಟೇ ಮುಖ್ಯ, ಗರ್ಭದ ಬೆಳವಣಿಗೆ ಮತ್ತು ಇತರೆ‌ ರಿಜಲ್ಟ್‌ಗಳನ್ನು ಪ್ರತಿ ಬಾರಿಯೂ ತಪಾಸಣೆ ಮಾಡಿದಾಗ ತಾಯಿ ಕಾರ್ಡ್‌ನಲ್ಲಿ ದಾಖಲಿಸಿಕೊಂಡು ಬರಬೇಕು,ಅಂದಾಜು ಹೆರಿಗೆಯಾಗುವ ದಿನಾಂಕ, ಮುಂದಿನ ಬೇಟಿ ಯಾವಾಗ, ಹೆರಿಗೆ ಎಲ್ಲಿ ಮಾಡಿಸಬೇಕು, ರಕ್ತದ ಅವಶ್ಯಕತೆ ಇದೆಯೆ ಎಂಬುದನ್ನು ದಾಖಲಿಸ ಬೇಕು,ಅದರಂತೆ ಸಿದ್ದತೆ ಮಾಡಿಕೊಳ್ಳಲು ಕುಟುಂಬದವರಿಗೆ ತಿಳಿಸಿರ ಬೇಕು,ಮೇಲ್ದರ್ಜೆಯ ಆಸ್ಪತ್ರೆಗೆ ಸೂಚಿಸಿದಾಗ ಇರುವ ಅಪಾಯಗಳೆಲ್ಲವೂ ತಜ್ಞರಿಗೆ ಕನ್ನಡಿಯಂತೆ ಕಾಣಬೇಕು, ಸುರಕ್ಷಿತ ಹೆರಿಗೆಯಾದ ನಂತರ ಶಿಶುವಿನ ವಿವರಗಳನ್ನು ದಾಖಲಿಸಬೇಕು, ಹೆರಿಗೆ ಮತ್ತು ಶಿಶುವಿನ ಆರೋಗ್ಯ ರಕ್ಷಣೆಗೆ ಇರುವ ಜೆ.ಎಸ್.ವೈ, ಜೆ.ಎಸ್.ಎಸ್.ಕೆ, 108, ಮತ್ತು ನಗುಮಗು ಯೋಜನೆಯ ಸೇವೆಗಳ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುವಂತೆ ತಿಳಿಸಿದರು,

ಈ ಸಂದರ್ಭದಲ್ಲಿ ವಡ್ಡು,ಕುರೇಕುಪ್ಪ, ತೋರಣಗಲ್ಲು ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಾದ ಬಸಮ್ಮ,ಸಾವಿತ್ರಿ, ಶಿವಲೀಲಾ,ಹನುಮಂತಮ್ಮ, ಭಾರತಿ, ನೀಲಮ್ಮ,ಸುಶೀಲಮ್ಮ,ಪಾರ್ವತಿ,ಮಂಜುಳಾ,ಲಕ್ಷ್ಮಿ, ರಾಜೇಶ್ವರಿ, ಶಿವಗಂಗಮ್ಮ, ಮತ್ತು ಸಮಾಲೋಚಕ ಪ್ರಶಾಂತ್ ಕುಮಾರ್ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here