ತಾಯಿ ಮತ್ತು ಮಗುವಿನ ಉತ್ತಮ ಆರೋಗ್ಯಕ್ಕೆ ಪೌಷ್ಟಿಕಾಹಾರ ಅವಶ್ಯ: ಪುರಸಭೆ ಸದಸ್ಯ ನಾಗರಾಜ್ ನಾಯ್ಕ,

0
415

ಸಂಡೂರು: ಸೆ:01: ತಾಲೂಕಿನ ಕುರೇಕುಪ್ಪ ಪುರಸಭೆ ವ್ಯಾಪ್ತಿಯ ತೋರಣಗಲ್ಲು ರೈಲ್ವೆ ನಿಲ್ದಾಣದ ಘೋರ್ಪಡೆನಗರದ ಒಂದನೇ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ “ರಾಷ್ಟ್ರೀಯ ಪೊಷಣ ಮಾಸ ಅಭಿಯಾನ”ದಡಿ ಪೌಷ್ಟಿಕ ಅಹಾರ ಕುರಿತು ಅರಿವಿನ ಕಾರ್ಯಕ್ರಮ ಆಯೋಜಿಸಲಾಗಿತ್ತು,

ಕಾರ್ಯಕ್ರಮ ಉದ್ಘಾಟನಾ ಮಾಡಿ ಮಾತನಾಡಿದ 11 ನೇ ವಾರ್ಡಿನ ಪುರಸಭೆ ಸದಸ್ಯ ನಾಗರಾಜ್ ನಾಯ್ಕ ಅವರು ತಾಯಂದಿರು ಮತ್ತು ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಪೌಷ್ಟಿಕಾಹಾರ ಸೇವನೆ ಮಾಡಬೇಕಿದೆ, ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳಿಸಿಕೊಡಿ ಇಲ್ಲಿ ಶೇಂಗಾ ಚಿಕ್ಕಿ, ಕಿಚಿಡಿಯಂತಹ ಪೌಷ್ಟಿಕ ಆಹಾರ ಸಿಗುತ್ತದೆ,ಶಾಲಾಪೂರ್ವ ಶಿಕ್ಷಣ ಸಿಗುತ್ತದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಸೆಪ್ಟೆಂಬರ್ ತಿಂಗಳ ಪೂರಾ ಪಂಚ ಸೂತ್ರಗಳು ಹಾಗೂ ಪೌಷ್ಟಿಕ ಆಹಾರ ಕುರಿತು ಅರಿವು ಮೂಡಿಸಲಾಗುತ್ತಿದೆ,ನಮ್ಮ ದೇಹಕ್ಕೆ ಹೆಚ್ಚು ಪ್ರೋಟೀನ್,ಮಿಟಮಿನ್,ಕಾರ್ಬೋಹೈಡ್ರೇಟ್, ಮತ್ತು ಖನಿಜಾಂಶಗಳು ಹಾಗೂ ನಾರು ಮತ್ತು ಕೊಂಬ್ಬಿನಾಂಶದ ಅವಶ್ಯಕತೆ ಇರುತ್ತದೆ, ಹಾಗಾಗಿ ದೇಹದ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪೌಷ್ಟಿಕ ಆಹಾರದ ಅವಶ್ಯಕತೆ ಇದೆ, ಹಾಗೆ ಗರ್ಭಿಣಿಯರು, ಮಕ್ಕಳ ತಾಯಂದಿರು, ಮಕ್ಕಳಿಗೆ ರಕ್ತಹೀನತೆ ದೂರಮಾಡಲು ಹೆಚ್ಚು ಪೋಷಕಾಂಶಗಳ ಇರುವ ಆಹಾರ ಸೇವಿಸುವುದು ಸಹಾ ಅವಶ್ಯವಿದ್ದು, ಸ್ಥಳೀಯ ಆಹಾರ ಪದಾರ್ಥಗಳನ್ನು ಬಳಸಿಕೊಂಡು ಹೆಚ್ಚು ಪೌಷ್ಟಿಕಾಂಶ ಉಳ್ಳ ಆಹಾರ ತಯಾರಿಸಬೇಕು ಎಂದು ತಿಳಿಸಿ, ಮಕ್ಕಳ ಉತ್ತಮ ಪೌಷ್ಟಿಕಾಹಾರ ಕುರಿತು ಕರಪತ್ರ ಬಿಡುಗಡೆ ಮಾಡಿದರು,

ನಂತರ ಶಿಕ್ಷಕಿ ಕವಿತಾ ಅವರು ಪ್ರತಿದಿನವೂ ಏಕದಳ,ದ್ವಿದಳ, ಹಲವಾರು ಸೊಪ್ಪು, ತರಕಾರಿಗಳನ್ನು ಬಳಸಿಕೊಂಡು ಪೋಷಕಾಂಶಗಳು ನಷ್ಟವಾಗದ ರೀತಿಯಲ್ಲಿ ಜಾಣ್ಮೆಯಿಂದ ಆಹಾರ ತಯಾರಿಸುವುದು, ಹಾಲು, ಮೊಸರು, ತುಪ್ಪ,ಎಣ್ಣೆ,ಬೆಲ್ಲ, ಮೊಳಕೆ ಕಟ್ಟಿದಕಾಳು, ನುಗ್ಗೆಸೊಪ್ಪು, ಸಬಾಕ್ಷಿ ಸೊಪ್ಪುಗಳು ಬಳಸಿ ತಯಾರಿಸಿದ ಆಹಾರವನ್ನು, ಮತ್ತು ಮಾಂಸಾಹಾರಿಗಳು ‌ಮೊಟ್ಟೆ,ಮಾಂಸ, ಮೀನಿನ ಅಹಾರವನ್ನು ಚೆನ್ನಾಗಿ ಬೇಯಿಸಿ ಸೂಕ್ತ ಸಮಯದೊಳಗೆ ಸೇವನೆ ಮಾಡುವುದು ಮತ್ತು ಸ್ಥಳೀಯವಾಗಿ ದೊರೆಯುವ ಹಣ್ಣುಗಳನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು, ನಂತರ ಮಕ್ಕಳಿಗೆ ಅನ್ನ ಪ್ರಾಶನ ಮತ್ತು ಗರ್ಭಿಣಿಯರಿಗೆ ಸೀಮಂತ ಕಾರ್ಯ ಹಾಗೇ ಮೊಟ್ಟೆಗಳ ವಿತರಣೆ ನಡೆಯಿತು,

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಮಂಗಮ್ಮ,ಸಹ ಶಿಕ್ಷಕ ಪ್ರಕಾಶ್, ಅಂಗನವಾಡಿ ಕಾರ್ಯಕರ್ತೆ ಮಾಬುನ್ನಿ, ಪೀರಮ್ಮ,ಗರ್ಭಿಣಿಯರಾದ ವಿಜಯಲಕ್ಷ್ಮಿ, ವನಜಾ,ಸಂಧ್ಯಾ,ಪೂಜಾ,ರಿಂಕು,ಅಭಿಬಾ,ಸುನೋದಾ,ಮಹಿಳೆಯರಾದ ಪದ್ಮಾ, ಉಮಾದೇವಿ,ಆಪ್ರೀನ್ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here