ಜಂತು ಹುಳುವಿನ ಬಾಧೆ ತಪ್ಪಿಸಲು ಆಲ್ಬೆಂಡಜೋಲ್ ಮಾತ್ರೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ: ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,

0
423

ಸಂಡೂರು/ತೋರಣಗಲ್ಲು:ನ:-ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣದ
ಶ್ರೀಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದೇ ತಿಂಗಳು 23 ರಿಂದ 27 ರ ವರೆಗೆ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು 1 ವರ್ಷದಿಂದ 19 ವರ್ಷದೊಳಗಿನ ಮಕ್ಕಳಿಗೆ ಆಲ್ಬೆಂಡಜೋಲ್ ಮಾತ್ರೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ

ಮಕ್ಕಳಲ್ಲಿ ರಕ್ತಹೀನತೆ ಮತ್ತು ದೇಹ ಬೆಳವಣಿಗೆಗೆ ಅಪಾಯ ತಂದೊಡ್ಡುವ ಲಾಡಿಹುಳು, ಕೊಕ್ಕೆಹುಳು ಮತ್ತು ಜಂತುಹುಳುಗಳ ಬಾಧೆ ತಪ್ಪಿಸಲು ಮಾತ್ರೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಲಿದೆ, ಪ್ರತಿ ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಮಾತ್ರೆ ಸೇವನೆ ಮಾಡುವುದು ಸರಿಯಾದ ಕ್ರಮ, ಹುಳುಗಳ ಬಾಧೆ ತಪ್ಪಿಸಲು ಶೌಚಾಲಯಕ್ಕೆ ಹೋಗಿ ಬಂದ ನಂತರ, ಊಟಕ್ಕೆ ಮೊದಲು ಕೈಗಳನ್ನು ಸಾಬೂನಿನಿಂದ ತೊಳೆಯುವುದು, ತರಕಾರಿಗಳನ್ನು ಸ್ವಚ್ಛವಾಗಿ ಒಳ್ಳೆಯ ನೀರಿನಿಂದ ತೊಳೆಯುವುದು, ಆಹಾರ ಪದಾರ್ಥಗಳನ್ನು ಮುಚ್ಚಿಡುವುದು, ಮನೆಯ ಸುತ್ತ ಮುತ್ತ ಸ್ವಚ್ಛವಾಗಿಡುವುದು, ಕಾಲಿಗೆ ಚಪ್ಪಲಿ ಬಳಸುವುದು, ಉಗುರುಗಳನ್ನು ಸರಿಯಾದ ಕ್ರಮದಲ್ಲಿ ಇಡುವುದು ಮಾಡಿದಲ್ಲಿ ಹುಳಗಳ ಬಾಧೆ ತಪ್ಪಿಸಲು ಸಾಧ್ಯವಿದೆ, ಏಕ ಕಾಲದಲ್ಲಿ ಎಲ್ಲರೂ ಮಾತ್ರೆ ಸೇವನೆ ಮಾಡಿದಲ್ಲಿ ಹುಳಗಳು ನಾಶ ವಾಗುತ್ತವೆ ಎನ್ನುವ ಕಾರಣಕ್ಕೆ ಮಾತ್ರೆಗಳನ್ನು ವರ್ಷಕ್ಕೆ ಎರಡು ಬಾರಿ ನೀಡಲಾಗುವುದು ಎಂದು ತಿಳಿಸಿದರು, ಇಂದಿನಿಂದ ಶಾಲೆ, ಕಾಲೇಜು, ಅಂಗನವಾಡಿಗಳಲ್ಲಿ ಮಾತ್ರೆ ವಿತರಣೆ ಕಾರ್ಯ ಮುಂದುವರಿಯಲಿದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ಸುರಕ್ಷಾಧಿಕಾರಿ ಭಾಗ್ಯಲಕ್ಷ್ಮಿ, ಶಾಲೆಯ ಮುಖ್ಯ ಗುರುಗಳಾದ ಧರಿಯಪ್ಪ, ಸಹ ಶಿಕ್ಷಕರಾದ ಗಣೇಶ್, ರುದ್ರಪ್ಪ, ಆಶಾ ಕಾರ್ಯಕರ್ತೆಯರಾದ ಕಾವೇರಿ, ಶ್ರೀದೇವಿ, ಆಶಾ, ವಿಜಯಶಾಂತಿ, ಹುಲಿಗೆಮ್ಮ,ರಾಜೇಶ್ವರಿ, ಪದ್ಮಾ, ತೇಜಮ್ಮ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here