ಜೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಆಕಳು ಸಾವು..!!

0
615

ವಿಜಯನಗರ ಜಿಲ್ಲೆ, ಕೊಟ್ಟೂರು ಪಟ್ಟಣದ ಉಜ್ಜಿನಿ ಸರ್ಕಲ್ ವಾಲ್ಮೀಕಿ ನಗರ (ಕೆಳಗೇರಿ ) ಹೋಗುವ ಮುಖ್ಯ ರಸ್ತೆಯಲ್ಲಿ ಜೆಸ್ಕಾ ಅಧಿಕಾರಿಗಳು ವಿದ್ಯುತ್ ಟ್ರಾನ್ಸ್ಪರಂ ನ್ನು ನಿರ್ಮಾಣ ಮಾಡಿದ್ದು ಪಟ್ಟಣದ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ತನದಿಂದ ಈ ಟ್ರಾನ್ಸ್ಪರಂಗೆ ಅಕಳು ಬಲಿಯಾಯಿತು.

ಸಾರ್ವಜನಿಕರು ಮತ್ತು ವಿಧ್ಯಾರ್ಥಿಗಳು ವಿಧ್ಯಾಭ್ಯಾಸ ಮಾಡಲು ಶಾಲೆ ಕಾಲೇಜ್ ಗಳಿಗೆ ಹೋಗಲು ಈ ರಸ್ತೆಯಲ್ಲಿ ಅತೀ ಹೆಚ್ಚು ನೆಡೆದುಕೊಂಡು ಹೋಗುತ್ತಾರೆ.

ಮುಂದಿನ ದಿನಗಳಲ್ಲಿ ಈ ವಿದ್ಯುತ್ ಟ್ರಾನ್ಸ್ ಪೋರಂ ನಿಂದ ಸಾರ್ವಜನಿಕರಿಗೆ ವಿಧ್ಯಾರ್ಥಿಗಳಗೆ ಟ್ರಾನ್ಸ್ಪರಂ ವಿದ್ಯುತ್ ನಿಂದ ಸಾರ್ವಜನಕರಿಗೆ ತೊಂದರೆ ಅಗುವ ಮೊದಲು ಹಾಗು ಪಟ್ಟಣದಲ್ಲಿ ಇನ್ನಿತರ ಹಳೆ ಪಟ್ಟಣ ಪಂಚಾಯತಿ ಹತ್ತಿರ ಕೆಳಗೇರಿ ಶ್ರೀ ಅಂಜನೇಯ ದೇವಸ್ಥಾನದ ಹತ್ತಿರ ಮೇಗಳಗೇರಿ, ಸಿರಿಬಿ ರಸ್ತೆ, ಜರಿಮಲೆ ದುರುಗಮ್ಮ ದೇವಾಸ್ತನದ ಎದುರುಗಡೆ ಈ ವಿದ್ಯುತ್ ಟ್ರಾನ್ಸ್ಪರಂ ಗಳಿಗೆ ಕೂಡಲೇ ಜೆಸ್ಕಾಂ ಅಧಿಕಾರಿಗಳು ಸುತ್ತಲು ಕಲ್ಲುಕಂಬ ತಂತಿಬೇಲಿ ಹಾಕಿ ಸಾರ್ವಜನಿಕರಿಗೆ ತೊಂದರೆ ಅಗದಂತೆ ಜೆಸ್ಕಾಂ ಅಧಿಕಾರಿಗಳು ನೋಡಿ ಕೊಳ್ಳಬೇಕು.

ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಕಚೇರಿ ಮುಂಭಾಗದಲ್ಲಿ ಸಿಪಿಐ (ಎಂ ಎಲ್ ) ಸಂಘಟನೆ ವತಿಯಿಂದ ಧರಣಿ ಮಾಡುತ್ತೇವೆ ಎಂದು ಕೊಟ್ಟೂರು ತಾಲೂಕು ಸಿಪಿಐ (ಎಂ ಎಲ್) ಸಂಘಟನೆ ಕಾರ್ಯದರ್ಶಿ ಜಿ.ಮಲ್ಲಿಕಾರ್ಜುನ ಸುದ್ದಿಗಾರಿಗೆ ತಿಳಿಸಿದರು.

LEAVE A REPLY

Please enter your comment!
Please enter your name here