ಗುಡೇಕೋಟೆ ಗ್ರ‍ಾಪಂ:ಪುರಾತನ ಬಾವಿಗಳ ಪುನಶ್ಚೇಚನ

0
154

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೆಕೋಟೆ 1ನೇ ವಾರ್ಡ್,ಪುರಾತನ ಕಾಲದ ಬಾವಿ ಇದ್ದು.ಗ್ರಾಮದ ಮಧ್ಯೆ ಇರುವ ಸಕ್ರಪ್ಪ ನ ಬಾವಿ ಗಲೀಜ್ ಮತ್ತು ಊರಿನ ಎಲ್ಲಾ ಕಸ ಮತ್ತು ಬಚ್ಚಲ ನೀರು ತ್ಯಾಜ್ಯ ತುಂಬಿ ನಾರುತುತ್ತು.ಬಾವಿ ಅಲ್ಲಲ್ಲಿ ಬಿದ್ದು ಬಾವಿ ಕುಸಿದಿತ್ತು.
ಪೂರ್ಣ ಶಿಥಿಲಾವಸ್ಥೆಯಲ್ಲಿದ್ದ ಬಾವಿಯನ್ನು ಗುಡೆಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಲಿತಮ್ಮ ಗೋವಿಂದಪ್ಪ ನೇತೃತ್ವದಲ್ಲಿ,ಹಾಗೂ ಗ್ರಾಪಂ ಸದಸ್ಯರೊಳಗೊಂಡ ತಂಡ ಬಾವಿಯನ್ನ ಹೂಳೆತ್ತು ಕಾರ್ಯಾಚರಣೆಯನ್ನು ಮಾಡಿದ್ದಾರೆ,ಐತಿಹಾಸಿಕ ಗುಡೇಕೋಟೆಯ ಒನಕೆ ಓಬವ್ವನ ತವರೂರಿನಲ್ಲಿ,ಕೆಲವು ಬಾವಿಗಳು ಮುಚ್ಚಿ ಹೋಗಿವೆ ಆದರೆ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರು ಸರ್ವಸದಸ್ಯರು ಕಾಳಜಿ ವಹಿಸಿ ಬಾವಿಗಳನ್ನ ಸ್ವಚ್ಚಗೊಳಿಸಿದ್ದಾರೆ.

ಅವುಗಳನ್ನ ಪುನಶ್ಚೇಥನಗೊಳಿಸುವ ಕಾರ್ಯದಲ್ಲಿ ಗ್ರಾಪಂ ಅಧ್ಯಕ್ಷರು ಹಾಗೂ ಸರ್ವಸದಸ್ಯರು ತಮ್ಮನ್ನ ತೊಡಗಿಸಿಕೊಂಡಿದ್ದಾರೆ.ಇವರ
ಬಾವಿಗಳ ಸಂರಕ್ಷಣಾ ಕಾರ್ಯ ದಿಂದ ಗ್ರಾಮ ಮಾತ್ರವಲ್ಲದೇ,ನೆರೆ ಹೊರೆ ಗ್ರಾಪಂ ಗಳಿಗೂ ಗುಡೇಕೋಟೆ ಗ್ರಾಪಂ ಜನಪ್ರತಿನಿಧಿಗಳು ಮಾದರಿಯಾಗಿದ್ದಾರೆ.
ಪುರಾತನ ಬಾವಿಗಳನ್ನ ಸ್ವಚ್ಚಗೊಳಸಿ ಬಾವಿಗಳನ್ನ ಸಂರಕ್ಷಿಸುವ ಮಹಾಕಾರ್ಯವನ್ನ ಗ್ರ‍ಾಪಂ ಸರ್ವ ಸದಸ್ಯರು ಮಾಡಿದ್ದಾರೆ ಎಂದು. ಗ್ರಾಮದ ಹಿರಿಯರು ಭಾರೀ ಪ್ರಶಂಸೆಯನ್ನ ಅಭಿವ್ಯಕ್ತಪಡಿಸಿದ್ದಾರೆ.ಗ್ರಾಮ ಉಗಮ ವಾದಾಗಿನಿಂದ ಜಥನದಿಂದ ಕಾಪಾಡಿಕೊಂಡು ಬಂದಿರುವ ಪುರಾತನ ಕಲ್ಲಿನ ಕಟ್ಟಡದ ಬಾವಿಗಳು ಶಿಥಿಕಾವಸ್ಥೆಯಲ್ಲಿದ್ದು, ಅವುಗಳನ್ನ ದುರಸ್ಥಿತಿಗೊಳೊಸುವ ಮೂಲಕ ಅವುಗಳ ಸಂರಕ್ಷಣೆಗೆ ಜನಪ್ರತಿನಿಧಿಗಳು ಬದ್ಧರಾಗಿರೋದು ತುಂಬಾ ಆದರ್ಶನೀಯ ಹಾಗೂ ಶ್ಲಾಘನೀಯ ಎಂದಿದ್ದಾರೆ ನಿವೃತ್ತ ಶಿಕ್ಷಕರು.
ಪುರಾತನ ಕಾಲದ ಗ್ರಾಮಸ್ಥರು ಹಾಗೂ ಗ್ರಾಮದ ಹಿರಿಯರು ಸಂಘ ಸಂಸ್ಥೆಗಳ ಮುಖಂಡರು ಹೃದಯಪೂರ್ವಕವಾಗಿ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here