ಪಶುಪಾಲನೆ ಮಾಡದಿದ್ದರೆ ಪಶುಗಳನ್ನು ಸಾಕಬೇಡಿ

0
5

ಸಂಡೂರು: ಏ:23: ನಮ್ಮ ಜೀವನದಲ್ಲಿ ಬದುಕಿನ ಪಾಲನೆ ಎಷ್ಟು ಮುಖ್ಯವೋ ಪಶುಗಳ ಪ್ರಾಣಿಗಳ ಪಾಲನೆಯೂ ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ. ನಾವು ಮಾತನಾಡುವ ಮನುಷ್ಯರು ನಾವು ಇನ್ನೆಷ್ಟು ಸಹಕಾರದಿಂದ ರಕ್ಷಣೆ ಮಾಡಿಕೊಳ್ಳುತ್ತೇವೆ ಅದರೆ ಪಶುಗಳಿಗೆ ಪ್ರಾಣಿಗಳಿಗೆ ಬಾಯಿಯಿಲ್ಲ ಮಾತನಾಡಲು ಶಕ್ತಿಯೂ ಇಲ್ಲ ಅವು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಲು ಸಾಧ್ಯ, ಅವುಗಳ ರಕ್ಷಣೆ ನಮ್ಮಿಂದ ಮಾತ್ರ ಸಾಧ್ಯ, ಪಶುಗಳ ಪಾಲನೆ ಮಾಡಿದರೆ ನಿಮ್ಮ ಮನೆಯಂಗಳದಲ್ಲಿ ಕಟ್ಟಿಕೊಳ್ಳಿ ಕಟ್ಟಿಕೊಂಡು ರಕ್ಷಣೆ ಕೊಡಿ. ನಿಮಗೆ ರಕ್ಷಣೆ ಕೊಡದಿದ್ದರೆ ಪುರಸಭೆಯವರು ನಿರ್ಮಿಸಿದ ಬಂದಿದೊಡ್ಡಿಯಲ್ಲಿ ಹಾಕಿ ಅವರಾದರೂ ಪಶುಗಳಿಗೆ ಪ್ರಾಣಿಗಳಿಗೆ ರಕ್ಷಣೆ ನೀಡುತ್ತಾರೆ. ಬಾಯಿಲ್ಲದ ಪಶುಗಳನ್ನು ಬಯಲಿಗೆ ಬಿಟ್ಟು ನರಳುವಂತೆ ಮಾಡಬೇಡಿ ನಿಮ್ಮಂತೆ ಪಶುಗಳ ಪ್ರಾಣಿಗಳ ಜೀವ ಎನ್ನುವುದನ್ನು ಮರೆಯಬಾರದು ರೈತರಿಗೆ ಪಶುವೈದ್ಯಾಧಿಕಾರಿ ಡಾ. ವಲೀಭಾಷಾರವರು ಮನವಿ ಮಾಡಿದರು.

ಅವರು ಪುರಸಭೆ ಬಸ್ ನಿಲ್ದಾಣದ ಅವರಣದ ಅಪೋಲೋ ಔಷಧಿ ಅಂಗಡಿಯ ಹತ್ತಿರ ಹಸುವಿನ ಕರು ಬಳಲುತ್ತಿದ್ದ ಸಮಯದಲ್ಲಿ ಕರವೇ ಶಿವರಾಮೇಗೌಡ ಬಣದ ತಾಲೂಕು ಅಧ್ಯಕ್ಷರಾದ ರಾಜು ಪಾಳೇಗಾರ್ ಹಸುವಿನ ಮರಿಯ ನರಳಾಟ ನೋಡದೇ ತಕ್ಷಣವೆ ಪಶುವೈದ್ಯಾಧಿಕಾರಿಗಳಿಗೆ ದೂರವಾಣಿ ಕರೆಮಾಡಿ ವಿಷಯ ತಿಳಿಸಿದಾಗ ಕೂಡಲೇ ಸ್ಪಂದಿಸಿದ ಪಶುವೈದ್ಯಾಧಿಕಾರಿ ವಲಿಭಾಷಾರವರೊಂದಿಗೆ ವಿಜಯಮಹಾಂತೆಶ್, ಭಾಗ್ಯ ಶ್ರೀ, ಕರುವಿನ ರಕ್ಷಣೆಗೆ ಮುಂದಾಗಿ ಆರೈಕೆ ಮಾಡಿ ಕರುವಿಗೆ ಉತ್ತಮ ಶುಶ್ರುಷೆ ಮಾಡಿ ಕರುವು ಚೇತರಿಸಿಕೊಳ್ಳುವಂತೆ ಮಾಡಿದರು. ಈ.ಕೀರ್ತಿ ಪಿ. ರಾಜು ಪಾಳೇಗಾರ್ ಅವರಿಗೆ ಸಲ್ಲಬೇಕಾಗುತ್ತದೆ.

ನಡೆದಿದ್ದೇನು:- ಬೆಳಗಿನ ಜಾವ 4.30 ನಿ. ಕೆ.ಇ.ಬಿ. ವೃತ್ತದ ಬಳಿ ಹಸುವಿನ ಮರಿ ತಿರುಗಾಡುತ್ತಿರುವ ಸಂದರ್ಭದಲ್ಲಿ ಬೀದಿ ನಾಯಿಗಳು ಹಸುವಿನ ಮರಿಯನ್ನು ಕಚ್ಚಿ ಗಾಯಗೊಳಿಸಿತು. ತದನಂತರ ಕೆ.ಇ.ಬಿ. ವೃತ್ತದ ಬಳಿ ಇರುವ ಹೋಟಲ್ ಮಾಲೀಕರೊಬ್ಬರು ಅರಿಷಿಣ ಪುಡಿ ಹಚ್ಚಿ ರಕ್ಷಣೆಯೇನ್ನು ನೀಡಿ ಪಶುವೈಧ್ಯಧಾಕಾರಿಗಳ ಕಛೇರಿಗೆ ಕರೆದಯೋದ್ದು ಅಲ್ಲಿ ವೈದ್ಯರು ಚಿಕಿತ್ಸೆ ನೀಡಿ ಕಳುಹಿಸಿದರು. ಅದು ಫಲಕಾರಿಯಾಗದೇ ಪುರಸಭೆ ಬಸ್ ನಿಲ್ದಾಣದ ಸ್ವಾಸ್ಥ್ಯ ಕಳೆದುಕೊಂಡಿತ್ತು. ಅಸ್ವಸ್ಥ ಗೊಂಡ ಹಸುವಿನ ಮರಿಯನ್ನು ಮತ್ತೋಮ್ಮೆ ಚಿಕಿತ್ಸೆ ನೀಡಿ ಫಲಕಾರಿಯಾಗುವಂತೆ ಮಾಡಿ ಹಸುವಿನ ಮರಿಗೆ ಉತ್ತಮ ಚಿಕಿತ್ಸೆ ನೀಡಿ ಚೇತರಿಸಿಕೊಳ್ಳುವಂತೆ ಮಾಡಿದರು.

LEAVE A REPLY

Please enter your comment!
Please enter your name here