ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವ ಆಚರಣೆ

0
69

ಕೊಟ್ಟೂರು ತಾಲೂಕು ಕಛೇರಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಸೋಮವಾರದಂದು ಪಂಚಮಸಾಲಿ ಸಂಘಟನೆಯ ಮುಖಂಡರು ಹಾಗೂ ತಾಲೂಕು ಆಡಳಿತ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಜಯಂತಿ ಆಚರಿಸಲಾಯಿತು.

ಶಿವಕುಮಾರ್ ಶಿಕ್ಷಕರು,ಮಾತನಾಡಿ ವೀರ ವನತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಶೌಯ೯ದ ಬಗ್ಗೆ  ತಮ್ಮ ಭಾಷಣದಲ್ಲಿ ‘ನೆನೆಯುತ್ತಾ ‘ ಹೊಗಳಿದರು. ಮಹಾನ್ ಹೋರಾಟಗಾತಿ೯ ಜಯಂತಿ ಆಚರಣೆ ಮಾಡುವುದು ನಮ್ಮೆಲ್ಲರ ಭಾಗ್ಯ ಎಂದರು

ಕೆಲವು ಮಹಾನಾಯಕರ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ವೀರರ ಜಯಂತಿಯನ್ನು, ಅವರ ಸವಿ ನೆನಪಿಗಾಗಿ ಕೆಲವು  ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರು ಸಮಾಜ ಸೇವೆಯಲ್ಲಿ ತೊಡಗಿರುವ  ಗಣ್ಯರಿಗೆ ಹಾಗೂ ಸರಕಾರಿ ನೌಕರರಿಗೆ  ಸನ್ಮಾನ ಮಾಡುವ ಮೂಲಕ  ಜಯಂತಿ ಆಚರಣೆಗೆ ಮೆರುಗು ಬಂದಂತಾಯಿತು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ವೀಣಾ ವಿವೇಕಾನಂದ, ಪಂಚಮಸಾಲಿ ಸಮಾಜದ  ಸರಕಾರಿ ನೌಕರರಿಗೆ  ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಪಂಚಮಸಾಲಿ ಕೊಟ್ಟೂರು ತಾಲುಕು ಘಟಕದ ಅಧ್ಯಕ್ಷ  ಚಾಪೆ ಚಂದ್ರಪ್ಪ , ಕಾಯ೯ದಶಿ೯ ದಾವಣಗೆರೆ ಬಟ್ಟೆ ಅಂಗಡಿ ಅಶೋಕ್,  ಅಶೋಕ್ ಇಂಜಿನೀಯರ್,ಪಂಚಮಸಾಲಿ ಘಟಕದ ಇನ್ನು ಇತರ ಪದಾಧಿಕಾರಿಗಳು ಹಾಗೂ ತಾಲುಕು  ಸಿಬ್ಬಂದಿ ಮತ್ತು ವಗ೯ದವರು ಇದ್ದರು.

LEAVE A REPLY

Please enter your comment!
Please enter your name here