ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ.ಗೋಪಾಲ್ ರಾವ್,

0
708

ಸಂಡೂರು:ಪೆ:27:-ತಾಲೂಕಿನ ತೋರಣಗಲ್ಲು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ 2022 ರ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಡಾ. ಗೋಪಾಲ್ ರಾವ್ ಚಾಲನೆ ನೀಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ತೋರಣಗಲ್ಲು ವ್ಯಾಪ್ಯಿಯ 10752 ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲು ಎಲ್ಲಾ ಕೇಂದ್ರಗಳಲ್ಲಿ ಸಿದ್ದತೆ ಮಾಡಿ ಕೊಳ್ಳಲಾಗಿದೆ,ಲಸಿಕಾ ಕೇಂದ್ರಗಳನ್ನು ಪೋಸ್ಟರ್ ಮತ್ತು ಬ್ಯಾನರ್ ಗಳಿಂದ ಪ್ರಚಾರ ಮಾಡಲಾಗಿದೆ, ಎಲ್ಲಾ ಮಕ್ಕಳಿಗೂ ಇಂದೇ ಎರಡು ಹನಿ ಪೋಲಿಯೊ ಲಸಿಕೆ ಕೊಡಿಸಬೇಕು, ಕಾರ್ಯಕರ್ತರು ಮನೆಮನೆಗೆ ಬಂದು ಹಾಕುವರೆಂಬ ನಿರ್ಲಕ್ಷ ಬೇಡ ಎಲ್ಲಾ ಮಕ್ಕಳಿಗೂ ಒಂದೇ ದಿನ ಲಸಿಕೆ ಕೊಡಿಸುವುದು ಒಳ್ಳೆಯದು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಕಛೇರಿಯ ಸೂಪರಿಂಟೆಂಡೆಂಟ್ ಹರೀಶ್, ಫಾರ್ಮಸಿ ಅಧಿಕಾರಿ ಮಂಜುನಾಥ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಕೀಲ್ ಅಹಮದ್,ರೂಪಾ, ಹುಲಿಗೆಮ್ಮ, ಸುನಿಲ್, ಕರಿಬಸಮ್ಮ, ತಿಪ್ಪೇಸ್ವಾಮಿ, ಮಾಬುಸಾಬ್, ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here