ಅಟ್ರಾಸಿಟಿ ಕೇಸ್ ನಲ್ಲಿ ಮಾಜಿ ಶಾಸಕ ಸಿರಾಜ್ ಶೇಕ್ ಗೆ ಜಾಮೀನು ಸಿಕ್ತು.

0
33

ಹಗರಿಬೊಮ್ಮನಹಳ್ಳಿ, ಅ,24
ಅಟ್ರಾಸಿಟಿ ಮತ್ತು ಕೊಲೆಯತ್ನದ ಆರೋಪದ ಪ್ರಕರಣದಡಿ ಮಾಜಿ ಶಾಸಕರು, ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸಿರಾಜ್ ಶೇಕ್ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ದಿಂದ ಶನಿವಾರ ಜಮೀನು ಮಂಜೂರಾಗಿದೆ.

ಇದೇ ಪ್ರಕರಣದಡಿ ಅ,4 ರಂದು ಮಧ್ಯಂತಾರ ಜಾಮೀನು ನೀಡಲಾಗಿತ್ತು. ಇಂದು ರೇಗಲರ್ ಬೆಲ್ ಸಿಕ್ಕಿತು.ರಾಷ್ಟ್ರದ ಪ್ರಖ್ಯಾತ ನ್ಯಾಯಾವಾದಿಗಳಲ್ಲಿ ಒಬ್ಬರಾದ ರವಿನಾಯಕ್ ಮತ್ತವರ ತಂಡ ಈ ಪ್ರಕರಣದಲ್ಲಿ ಮಾಜಿ ಶಾಸಕ ಸಿರಾಜ್ ಶೇಕ್ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದ್ದರು.

ಜಾಮೀನು ಸಿಕ್ಕಿರುವ ವಿಚಾರ ಗೊತ್ತಾಗುತ್ತಿದ್ದಂತೆಯೇ ಅವರ ಅಭಿಮಾನಿ,ಬೆಂಬಲಿಗರ ಮುಖದಲ್ಲಿ ಪ್ರಕರಣ ದಾಖಲಾದ ಕ್ಷಣಗಳಿಂದಲೂ ಮೂಡಿದ್ದ ಆತಂಕದ ಗೆರೆಗಳು ಕರಗಿ, ನೆಮ್ಮದಿಯ ನಿಟ್ಟುಸಿರು ಮೂಡಿದೆ.

ಆಗಷ್ಟ್ 12 ರಂದು ಹಗರಿಬೊಮ್ಮನಹಳ್ಳಿ ಪಟ್ಟಣದ ಹೊರವಲಯದ ಡಾಬಾ ವೊಂದರ ಬಳಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಆಹ್ಮದ್ ಖಾನ್ ಎದುರಿನಲ್ಲಿಯೇ ಸಿರಾಜ್ ಶೇಕ್ ಮತ್ತು ಇನ್ನೋರ್ವ ಮಾಜಿ ಶಾಸಕ ಭೀಮಾನಾಯ್ಕ್ ಮತ್ತು ಆತನ ಬೆಂಬಲಿಗರ ನಡುವೆ ಭಾರೀ ಮಾತಿನ ಚಕಮಕಿ, ವಾಗ್ವಾದ ನಡೆದಿತ್ತು.

ಆ ನಂತರ , ಕೆಎಂಎಫ್ ಅಧ್ಯಕ್ಷರಿಗೆ ವರಸೆಯಲ್ಲಿ ಅಳಿಯನಾಗಬೇಕಾದ ಕಲ್ಲಹಳ್ಳಿ ತಾಂಡದ ಎಲ್.ಎಸ್.ಮಂಜುನಾಥ, ವಿಜಯನಗರ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಸಿರಾಜ್ ಶೇಕ್ ಮೇಲೆ ಅಟ್ರಾಸಿಟಿ ಹಾಗೂ ಕೊಲೆಯತ್ನದ ಪ್ರಕರಣವನ್ನು ಆ, 16ರ ಮಂಗಳವಾರ ರಾತ್ರಿ ಹಗರಿಬೊಮ್ಮನಹಳ್ಳಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು.

ಪ್ರಕರಣ ದಾಖಲಾದ ದಿನ ದಿಂದಲೇ ಮಾಜಿ ಶಾಸಕ ಸಿರಾಜ್ ಶೇಕ್ ಗುಪ್ತ ಸ್ಥಳದಲ್ಲಿದ್ದು ಕೊಂಡು ಜಾಮೀನಿಗಾಗಿ ಸರ್ವ ಪ್ರಯತ್ನ ನಡೆಸಿದ್ದರು. ಆರಂಭದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಹಾಗೂ ಹೈಕೋರ್ಟ್ ನಲ್ಲೂ ಜಾಮೀನು ತಿರಸ್ಕಾರಗೊಂಡಿತ್ತು.

ಆದರೂ ಪುನಃ ಅವರು ಜಾಮೀನಿಗಾಗಿ ಹೆಸರಾಂತ ನ್ಯಾಯಾವಾದಿಗಳಾದ ರವಿನಾಯಕ್ ಅವರ ನೇತೃತ್ವದಲ್ಲಿ ನ್ಯಾಯಾಲಯದಲ್ಲಿ ನಿರಂತರ ಪ್ರಯತ್ನ ನಡೆಸಿದ್ದರು. ಕೊನೆಗೂ ಸತತ ಪ್ರಯತ್ನ ಶನಿವಾರ ಫಲ ತಂದುಕೊಟ್ಟಿದೆ.

LEAVE A REPLY

Please enter your comment!
Please enter your name here