ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಈ ಮಣ್ಣಿನ ಗುಣ

0
46

ಕೊಟ್ಟೂರು: ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ಕನ್ನಡೋತ್ಸವ ಕನ್ನಡ ನಾಡು ನುಡಿ ಚಿಂತನೆಯ ವಿಶೇಷ ಕಾರ್ಯಕ್ರಮ ಕನ್ನಡ ಸಂಭ್ರಮ-೫೦ ಶುಕ್ರವಾರ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದ್ದು. ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ನಾಡೋಜ ಡಾ.ಮನು ಬಳಿಗಾರ್ ನಿಕಟ ಪೂರ್ವ ರಾಜ್ಯಾಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಆಗಮಿಸಿ ಮಾತನಾಡಿ ಕನ್ನಡ ನಾಡು ನುಡಿಯ ಈ ವಿಶೇಷ ಕಾರ್ಯಕ್ರಮ ನಿರಂತರವಾಗಿ ಸಾಗಬೇಕೆಂದರು, ಹಾಗೂ ಕನ್ನಡ ಭಾಷೆ ಕನ್ನಡ ಮಾಧ್ಯಮದ ಶಾಲೆಗಳನ್ನು ಉಳಿಸಿ ಬೆಳೆಸಲು ಕರೆ ನೀಡಿದರು ಕನ್ನಡದಲ್ಲಿ ಓದಿದ ಎಲ್ಲರಿಗೂ ಸಹ ಉದ್ಯೋಗಾವಕಾಶಗಳು ಹೆಚ್ಚಿವೆ ಸದುಪಯೋಗ ಪಡಿಸಿಕೊಳ್ಳಿ ಎಂದರು ನಿರಂತರವಾಗಿ ಕನ್ನಡ ಪುಸ್ತಕಗಳನ್ನ ಕನ್ನಡ ಭಾಷೆಯನ್ನು ಬಳಸಬೇಕೆಂದರು ಹಿಂದಿ ಇಂಗ್ಲಿಷ್ ಭಾಷೆಗಳ ಅಬ್ಬರದಲ್ಲಿ ಪ್ರಾದೇಶಿಕ ಭಾಷೆಗಳು ತನ್ನ ಮಹತ್ವವನ್ನು ಕಳೆದುಕೊಳ್ಳುತ್ತೇವೆ ಎಂದರು, ಕನ್ನಡ ಎರಡು ಸಾವಿರ ವರ್ಷಗಳಿಗಿಂತ ಹಳೆಯದಾದ ನಮ್ಮ ಭಾಷೆಯನ್ನು ಉಳಿಸಿ ಬೆಳೆಸುವುದು ಎಲ್ಲಾ ವಿದ್ಯಾರ್ಥಿಗಳ, ಎಲ್ಲಾ ಕನ್ನಡಿಗರ ಜವಾಬ್ದಾರಿಯಾಗಿದೆ. ಕನ್ನಡತನವನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ, ಕಾದಂಬರಿ ಕಾರ ವಿಮರ್ಶಕ ಕಥೆಗಾರರಾದ ಕುಂ ವೀರಭದ್ರಪ್ಪ ಮಾತನಾಡಿ ಕನ್ನಡ ಭಾಷೆಯನ್ನು ಓದುಸ್ರಿ ಕನ್ನಡದಲ್ಲಿ ನಗಿಸಿ, ಕನ್ನಡದಲ್ಲೇ ಸಂಭ್ರಮಿಸಿ ಕನ್ನಡವೇ ಪರಮ ಶ್ರೇಷ್ಠ ಎಂದು ಕನ್ನಡ ಮಾಧ್ಯಮದಲ್ಲಿ ಓದಿ, ಮನುಷ್ಯ ಸಂಬಂಧಗಳನ್ನು ಬೆಸೆವ ಏಕೈಕ ಭಾಷೆ ಅದುವೇ ಕನ್ನಡ ಭಾಷೆ. ಪಂಪ ರನ್ನ ಜನ್ನ ಕನ್ನಡ ಕವಿಗಳನ್ನು ಸ್ಮರಿಸಿದರು . ಎಂಪಿಎಂ ಮಂಜುನಾಥ್ ವೆಂಕಟಪೂರ್ವ ಜಿಲ್ಲಾ ಕಾರ್ಯದರ್ಶಿ ಹೆಚ್ ಬಿ ಹಳ್ಳಿ ಇವರು ಮಾತನಾಡಿ ಮನೋ ಬಳೆಗಾರ ಹಾಗೂ ಸಿದ್ದರಾಮ ಕಲ್ಮಠ ಸರ್ವರ ಜೊತೆಯಲ್ಲಿ ಕನ್ನಡ ನಾಡು-ನುಡಿಗೆ ನಾವೆಲ್ಲರೂ ಒಟ್ಟಾಗಿ ಸೇವೆ ಗೆ ಅವಕಾಶ ಲಭಿಸಿದ್ದು ನಮ್ಮ ಭಾಗ್ಯ ಎಂದರು , ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀ ಸಿದ್ದರಾಮ ಕಲ್ಮಠ ಮಾತನಾಡಿ ಕನ್ನಡ ಭಾಷೆ ಉಳಿದರೆ ಕನ್ನಡದ ಸಂಸ್ಕೃತಿ ಉಳಿಯುತ್ತದೆ ಹಾಗಾಗಿ ಎಲ್ಲರೂ ಕನ್ನಡ ಭಾಷೆಯನ್ನ ಕನ್ನಡದ ಪುಸ್ತಕಗಳನ್ನ ನಿರಂತರವಾಗಿ ಓದುವಂತಾಗಿ, ಕನ್ನಡ ನಾಡು ನುಡಿ ಸೇವೆಗಾಗಿ ನಾವೆಲ್ಲ ಸದಾ ಸಿದ್ಧ ಎಂದರು. ಈ ಕಾರ್ಯಕ್ರಮದಲ್ಲಿ ಎಸ್ಎಂ ಗುರುಪ್ರಸಾದ್ಅಡಿಕೆ ಮಂಜುನಾಥಯ್ಯ, ಕೋರಿ ಬಸವರಾಜ್, ಡಿಎಸ್ ಶಿವಮೂರ್ತಿ, ಕೆಬಿ ಮಲ್ಲಿಕಾರ್ಜುನ್ಪದವ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು, ಪ್ರಾಚಾರ್ಯರಾದ ಡಾ.ಎಂ ರವಿಕುಮಾರ್, ಸ್ವಾಗತಿಸಿದರು,ಟಿ ರೇವಣ್ಣ ವಂದಿಸಿದರು ವಿಜಯಲಕ್ಷ್ಮಿ ಸಜ್ಜನ್ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here