ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕುರಿತು ಜಾಗೃತಿ ಕಾರ್ಯಕ್ರಮ,

0
100

ಸಂಡೂರು:ನ:15: ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಬಾಬಾ ನಗರದಲ್ಲಿ ಆಯೋಜಿಸಲಾದ “ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ” ಕಾರ್ಯಕ್ರಮದ ಅಂಗವಾಗಿ ಗುಂಪು ಸಭೆಗಳ ಮೂಲಕ ಜಾಗೃತಿ ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮ ಉದ್ದೇಶಿಸಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಮಕ್ಕಳ ತಾಯಂದಿರು ತಮ್ಮ ಮಕ್ಕಳಿಗೆ ಅತಿಸಾರ ಭೇದಿ ಕಾಣಿಸಿಕೊಂಡಾಗ ಹೇಗೆ ಉಪಚರಿಸಬೇಕು, ಓ.ಆರ್.ಎಸ್ ದ್ರಾವಣ ತಯಾರಿಸಬೇಕು, ಜಿಂಕ್ ಮಾತ್ರೆಗಳನ್ನು ಹದಿನಾಲ್ಕು ದಿನ ತಪ್ಪದೇ ಕೊಡಬೇಕು ಮತ್ತು ಶುದ್ಧವಾಗಿ ಕೈಗಳನ್ನು ತೊಳೆದುಕೊಳ್ಳ ಬೇಕು ಎಂಬ ಬಗ್ಗೆ ಮಾಹಿತಿ ನೀಡುತ್ತಾ,

ಮಕ್ಕಳ ಮರಣದ ಪ್ರಮಾಣದಲ್ಲಿ ಶೇಕಡ 10 ರಷ್ಟು ಮಕ್ಕಳು ಅತಿಸಾರ ಭೇದಿಯಾದಾಗ ಸರಿಯಾಗಿ ನಿರ್ವಹಣೆ ಮಾಡದೇ ನಿರ್ಜಲಿಕರಣಕ್ಕೆ ತುತ್ತಾಗಿ ಮರಣಕ್ಕೆ ಕಾರಣವಾಗುವರು, ಅತಿಸಾರ ಭೇದಿಯಿಂದಾಗುವ ಮರಣಗಳನ್ನು ತಪ್ಪಿಸಲು ನವಂಬರ್ 15 ರಿಂದ 28 ರ ವರೆಗೆ “ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ” ಆಚರಿಸಿ, ಮಕ್ಕಳಿರುವ ಮನೆಗಳಿಗೆ ಭೇಟಿಕೊಟ್ಟು ಓ.ಆರ್.ಎಸ್ ಪೊಟ್ಟಣ ಕೊಟ್ಟು ಓ.ಆರ್.ಎಸ್ ದ್ರಾವಣ ತಯಾರಿಸುವ ವಿಧಾನ ಮತ್ತು ಕೈಗಳನ್ನು ಹೇಗೆ ತೊಳೆದುಕೊಳ್ಳಬೇಕು, ಮಗು ಎರಡು ವರ್ಷಗಳ ಒಳಗಿದ್ದರೆ ಎದೆಹಾಲನ್ನು ಕೊಡುವುದನ್ನು ಮುಂದುವರೆಸಬೇಕು, ದ್ರವ ರೂಪದ ಆಹಾರಗಳನ್ನು ಹೆಚ್ಚಾಗಿ ಕೊಡಬೇಕು ಎಂದು ಅರಿವು ಮೂಡಿಸಿದರು, ಈ ವರ್ಷದ ಘೋಷವಾಕ್ಯ “ಅತಿಸಾರ ಭೇದಿಯಿಂದ ಶೂನ್ಯ ಬಾಲ್ಯದ ಸಾವುಗಳ ಕಡೆಗೆ ತೀವ್ರ ಪ್ರಯತ್ನ” ಈ ನಿಟ್ಟಿನಲ್ಲಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು,

ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆ ವಿಜಯಶಾಂತಿ ಮತ್ತು ಶ್ರೀದೇವಿ ಕೈಗಳನ್ನು ಶುದ್ಧವಾಗಿ ತೊಳೆದು ಕೊಳ್ಳುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು,
ಈ ಸಂದರ್ಭದಲ್ಲಿ ಆರೋಗ್ಯ ಸುರಕ್ಷಣಾಧಿಕಾರಿ ಭಾಗ್ಯ ಲಕ್ಷ್ಮಿ, ಚಂದ್ರಶೇಖರ, ಮಾಬುಬಾಷ, ಮಕ್ಕಳ ತಾಯಂದಿರಾದ ಜ್ಯೋತಿ, ಮಾಬುನ್ನಿ, ಗೌಸಿಯಾ, ಶೋಭಾ, ಮಮತಾ,ತಸ್ಲೀಮ್, ಕವಿತಾ,ಮಹಾದೇವಿ, ಮತ್ತು ಆಶಾ ಕಾರ್ಯಕರ್ತೆ ವೆಂಕಟಲಕ್ಷ್ಮಿ, ರಾಜೇಶ್ವರಿ, ಆಶಾ,ಹುಲಿಗೆಮ್ಮ,ಪದ್ಮಾ,ರೇಖಾ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here