ಬಳ್ಳಾರಿ ಲೋಕಸಭಾ ಚುನಾವಣೆ;ಬಹುಜನ ಸಮಾಜ ಪಕ್ಷ (BSP)ದ ಅಭ್ಯರ್ಥಿ ಶಕುಂತಲಾ ದೇವಿ ಲಕ್ಷ್ಮೀಪ್ರಿಯ ಅವರ ಮನದಾಳದ ಮಾತು

0
79

ನಮ್ಮ ಪತ್ರಕರ್ತ ಬಂಧುಗಳೇ ತಮಗೆಲ್ಲರಿಗೂ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ, ನನ್ನ ಮಾತುಗಳನ್ನು ನಿಮ್ಮ ಮುಂದೆ ಹೇಳುವ ಮೊದಲು ಬಹುಜನ ಸಮಾಜದಲ್ಲಿ ಹುಟ್ಟಿರುವ ಸಂತ-ಗುರು-ಮಹಾಪುರುಷರಿಗೆ ಕೋಟಿ ನಮನಗಳನ್ನು ನಮಿಸುತ್ತಾ ಜ್ಞಾನದ ಜ್ಯೋತಿಯಾದ ಮಾಹಾತ್ಮ ಜ್ಯೋತಿ ಬಾಪುಲೆ, ಅಕ್ಷರದವ್ವ ಸಾವಿತ್ರಿ ಬಾ ಪುಲೆ, ಹಾಗೂ ಮೀಸಲಾತಿ ಜನಕ ಛತ್ರಪತಿ ಶಾವು ಮಹಾರಾಜ್ ಮಾಹಾಕವಿ ರಾಮಾಯಣದ ಕತೃ ಮಹರ್ಷಿ ಆದಿಕವಿ ವಾಲ್ಮೀಕಿ, ಕನಕದಾಸರು, ಬುದ್ಧ, ಬಸವಣ್ಣನವರು, ನಾರಾಯಣ ಗುರು, ಬಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ಹಾಗೂ ಬಹುಜನ ಸಮಾಜ ಪಕ್ಷ ಸಂಸ್ಥಾಪಕರಾದ ದಾದ ಸಾಹೇಬ್ ಕಾನ್ಶಿರಾಮ್ ರವರಿಗೆ ನಮಿಸುತ್ತಾ ಬಾರತದ ಅತಿ ದೊಡ್ಡ ರಾಜ್ಯ ಉತ್ತರಪ್ರದೇಶ ರಾಜ್ಯದ 25 ಕೋಟಿಗಿಂತಲೂ ಹೆಚ್ಚು ಜನಸಂಖ್ಯೆವುಳ್ಳ ರಾಜ್ಯ. ಅ ರಾಜ್ಯದಲ್ಲಿ 4 ಬಾರಿ ಮುಖ್ಯಮಂತ್ರಿಯಾಗಿದ್ದ ಉಕ್ಕಿನ ಮಹಿಳೆ ಬೆಹನ್ ಜಿ ಅಕ್ಕ ಮಾಯಾವತಿಯವರಿಗೆ ನನ್ನ ಆದರ್ಶ ನಾಯಕಿ ಅಂತ ತಿಳಿದು ಒಪ್ಪಿಕೊಂಡು ನನ್ನ ಜೊತೆ ಇರುವ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಗೂ ಬಹುಜನ ಪಾರ್ಟಿಯ ಎಲ್ಲಾ ಅಭಿಮಾನಿಗಳಿಗೆ ವಂದಿಸುತ್ತಾ ನನ್ನ ಎರಡು ಮಾತುಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ.

ಶಕುಂತಲಾ ದೇವಿ ಲಕ್ಷ್ಮಿಪ್ರಿಯ (B.E.mech) ಆದ ನಾನು ಬಳ್ಳಾರಿ ಎಸ್ ಟಿ ಮೀಸಲು ಕ್ಷೇತ್ರದ ಬಹುಜನ ಸಮಾಜ ಪಕ್ಷದ ಲೋಕಸಭಾ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುತ್ತಾರೆ, ದಿನಾಂಕ:12.03.24 ರಂದು ಗುಲ್ಬರ್ಗಾ ದಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ನನ್ನನ್ನು ಬಳ್ಳಾರಿ ಲೋಕಸಭಾ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿರುತ್ತಾರೆ, ನನ್ನ ಆರೋಗ್ಯ ಸರಿ ಇಲ್ಲದ ಕಾರಣ ಪತ್ರಿಕಾಗೋಷ್ಠಿಯನ್ನು ಮಾಡಲು ತಡವಾಗಿರುತ್ತದೆ ಆದ್ದರಿಂದ ತಮ್ಮಲ್ಲಿ ಹಾಗೂ ಬಳ್ಳಾರಿ/ವಿಜಯನಗರ ಜಿಲ್ಲೆಯ ಮಹಾಜನತೆಗೆ ಕ್ಷಮೆ ಕೇಳುತ್ತಿದ್ದೇನೆ ನನ್ನನ್ನು ಬಳ್ಳಾರಿ ಲೋಕಸಭಾ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಕ್ಕೆ ಅಕ್ಕ ಮಾಯಾವತಿ ಜೀ ಅವರಿಗೆ ತುಂಬಾ ತುಂಬಾ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅದೇ ರೀತಿ ನಮ್ಮ ರಾಜ್ಯಾಧ್ಯಕ್ಷರಾದ ಮಾರಸಂದ್ರ ಮುನಿಯಪ್ಪ ಜೀ ಅವರಿಗೆ ಧನ್ಯವಾದ ತಿಳಿಸುತ್ತೇನೆ ನಮ್ಮ ರಾಜ್ಯದ ಪಕ್ಷದ ಸಂಯೋಜಕರಾದ ಗೋಪಿನಾಥ್ ಹಾಗೂ ಉಸ್ತುವಾರಿಗಳಾದ ಕೃಷ್ಣಮೂರ್ತಿ ಹಾಗೂ ಅರ್ ಮುನಿಯಪ್ಪ ಅವರುಗಳಿಗೆ ಧನ್ಯವಾದಗಳನ್ನು ಹೇಳುತ್ತೇನೆ

ನನ್ನ ಬಳ್ಳಾರಿ ಲೋಕಸಭಾ ಕ್ಷೇತ್ರದ ಮತದಾರ ಪ್ರಭುಗಳೇ ಈ 2024 ಮೇ ತಿಂಗಳ 07 ರಂದು ನಡೆಯುವ ಈ ಚುನಾವಣೆ ದೇಶದ ಭವ್ಯ ಭವಿಷ್ಯವನ್ನು ಕಟ್ಟುವ ಹಾಗೂ ಸಂವಿಧಾನ ಸಂರಕ್ಷಣೆ ಹಾಗೂ ಪ್ರಜಾಪ್ರಭುತ್ವವನ್ನು ಕಾಪಾಡುವ ಚುನಾವಣೆಯಾಗಿರುತ್ತದೆ,ಯಾಕೆಂದರೆ ದೇಶದಲ್ಲಿ ಇಷ್ಟು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಂದ ಸಂಪೂರ್ಣ ಸಂವಿಧಾನ ಜಾರಿಯಾಗಿಲ್ಲ ಹಾಗೂ ಸಂವಿಧಾನಕ್ಕೆ ರಕ್ಷಣೆಯಿಲ್ಲ, ನಮ್ಮ ಸಂವಿಧಾನ ಉಳಿಯಬೇಕಾದರೆ ಹೆಣ್ಣು ಮಕ್ಕಳ ದೌರ್ಜನ್ಯ, ಅಸಮಾನತೆ ಹೋಗಲಾಡಿಸಿ ಜಾತೀಯತೆಯನ್ನು ಕಿತ್ತುಹಾಕಬೇಕಾದರೆ ತಾವುಗಳು ಬಹುಜನ ಸಮಾಜ ಪಕ್ಷಕ್ಕೆ ಮತವನ್ನು ಹಾಕಿ ಮತ್ತು ಹಾಕಿಸಿ ದೇಶದ ಹಿತವನ್ನು ಕಾಪಾಡಬೇಕೆಂದು ಜನತೆಯಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಹಾಗೂ ಬಾರತದ ಎಲ್ಲಾ ಜನರಿಗೆ ಆಹಾರ, ವಸತಿ, ಆರೋಗ್ಯ, ಮಾನ-ಸನ್ಮಾನ ದೇಶದಲ್ಲಿ ಶಾಂತಿ ಸಾಮರಸ್ಯ, ಅಭಿವೃದ್ಧಿ, ಶಿಕ್ಷಣ, ಸಮಾನತೆ, ಸಾಮಾಜಿಕ ನ್ಯಾಯ ಸಿಗಬೇಕಾದರೆ ಅದು ಬಿ ಎಸ್ ಪಿ ಪಕ್ಷದಿಂದ ಮಾತ್ರ ಸಾಧ್ಯ ಆದ್ದರಿಂದ ಒಂದು ವೇಳೆ ಕೋಮುವಾದಿ, ಭಯೋತ್ಪಾದಕ ಪಕ್ಷಗಳು ಅಧಿಕಾರಕ್ಕೆ ಬಂದರೆ ಸಂವಿಧಾನಕ್ಕೆ ರಕ್ಷಣೆ ಇಲ್ಲ ಅಲ್ಪ ಸಂಖ್ಯಾತರ,ಮುಸ್ಲಿಂರಿಗೆ ರಕ್ಷಣೆಯಿಲ್ಲ ಆದ್ದರಿಂದ ಬಳ್ಳಾರಿ ಲೋಕಸಭಾ ಕ್ಷೇತ್ರದ ಮತದಾರ ಪ್ರಭುಗಳು ದೇಶದ ಅಭಿವೃದ್ಧಿಗಾಗಿ ಎಲ್ಲಾ ಜನರ ಸರ್ವೋತೋಮುಖ ಅಭಿವೃದ್ಧಿಗಾಗಿ BSP ಗೆ ಮತ ನೀಡಬೇಕೆಂದು ತಮ್ಮಲ್ಲಿ ಕಳಕಳಿಯಿಂದ ಪ್ರಾರ್ಥಿಸಿಕೊಳ್ಳುತ್ತೇನೆ, ಅಕ್ಕ ಮಾಯಾವತಿಯವರನ್ನು ಪ್ರದಾನಿಯನ್ನಾಗಿ ಮಾಡಬೇಕೆಂದು ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತ, ದೀನದಲಿತರ, ಧಾರ್ಮಿಕ, ಅಲ್ಪಸಂಖ್ಯಾತರ ಇಡೀ ದೇಶದ ಶಾಂತಿ ಸುಭದ್ರತೆಗಾಗಿ ಅಕ್ಕ ಮಾಯವತಿಯವರ ಕೈಬಲಪಡಿಸಬೇಕೆಂದು ಕೇಳಿಕೊಳ್ಳುತ್ತೇನೆ

1984 ಏಪ್ರಿಲ್ 14ರಂದು BSP ಯನ್ನು ದಾದಾಸಾಹೇಬ್ ಕಾನ್ಶಿ ರಾಮ್ ರವರು ಸ್ಥಾಪಿಸಿದರು ಅಂದಿನಿಂದ ಇಂದಿನವರೆಗೂ ಬಹುಜನರ ಪಕ್ಷವು ದೇಶದ ಬಹುಜನರ ರಕ್ಷಣೆ, ಕಲ್ಯಾಣವನ್ನು ಮಾಡುತ್ತದೆ. ಈ ಮೂಲಕ ಶಕುಂತಲಾ ಅದ ನನ್ನನ್ನು ಪ್ರಚಂಡ ಬಹುಮತದೊಂದಿಗೆ ಮತವನ್ನು ಹಾಕಿ ಹಾಗೂ ಹಾಕಿಸಿ ಜಯಶೀಲರನ್ನಾಗಿ ಮಾಡಿ ಈ ಮೂಲಕ ಮಹಾ ಜನತೆಯ ಸೇವೆಯನ್ನು ಮಾಡಲು ದೇಶವನ್ನು ಕಟ್ಟಲು ಹಾಗೂ ಬಳ್ಳಾರಿ ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ನಡೆಸಲು ಅವಕಾಶ ಮಾಡಿಕೊಡಬೇಕೆಂದು ತಮ್ಮಲ್ಲಿ ಕಳಕಳಿಯಿಂದ ಕೈ ಮುಗಿದು ಬೇಡಿಕೊಳ್ಳುತ್ತೇನೆ. ಇಷ್ಟು ವರ್ಷಗಳು ಆಡಳಿತದಲ್ಲಿ ಇದ್ದಂತ ಬಳ್ಳಾರಿ ಜಿಲ್ಲೆಯ ಲೋಕಸಭಾ ಸದಸ್ಯರು ಅಭಿವೃದ್ಧಿಯನ್ನು ಮಾಡದೆ ಮರೆತಿದ್ದಾರೆ,ಕುಡಿಯಲು ಜನತೆಗೆ ನೀರಿಲ್ಲ, ಬಸ್ಸುಗಳ ವ್ಯವಸ್ಥೆಯಿಲ್ಲ ಹಳ್ಳಿಗಳಿಗೆ ಸರಿಯಾದ ರಸ್ತೆಯಿಲ್ಲ ಇನ್ನು ಅನೇಕ ಮೂಲಭೂತ ಸೌಕರ್ಯಗಳೇ ಇಲ್ಲಿಲ್ಲ

ಆದ್ದರಿಂದ ನನ್ನ ಗುರುತು ಆನೆಗೆ ಮತ ನೀಡಿ ಹಾಗೂ ಸಮಗ್ರ ಬಳ್ಳಾರಿ ಅಭಿವೃದ್ಧಿಗಾಗಿ ನಿಮ್ಮ ಮತವನ್ನು ಆನೆ ಗುರುತಿಗೆ ನೀಡಿ ನಿಮ್ಮ ಮನೆಯ ಹೆಣ್ಣು ಮಗಳನ್ನು ಗೆಲ್ಲಿಸಿ ಹೆಣ್ಣುಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಿ, ನಿಮ್ಮ ಮನೆ ಮಗಳನ್ನು ಗೆಲ್ಲಿಸಿ ಮತವನ್ನು ಹಾಕಿ ಮತ್ತು ಹಾಕಿಸಿ ನನ್ನನ್ನು ಪ್ರಚಂಡ ಬಹುಮತದೊಂದಿಗೆ ಆರಿಸಿ ಕಳಿಸಬೇಕೆಂದು ತಮ್ಮಲ್ಲಿ ಕಳಕಳಿಯಿಂದ ಬೇಡಿಕೊಳ್ಳುತ್ತೇನೆ, ತನ್ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬಾ ಸಾಹೇಬ್ ಕಾನ್ಶಿ ರಾಮ್,ಅಕ್ಕ ಮಾಯವತಿಯವರ ಕನಸಿನ ಬಾರತವನ್ನು ನನಸು ಮಾಡಲು ಸಹಕರಿಸಬೇಕೆಂದು ತಮ್ಮಲ್ಲಿ ಬೇಡಿಕೊಳ್ಳುತ್ತೇನೆ

ಜೈ ಭೀಮ್, ಜೈ ಬಾರತ್ ಜೈ ಸಂವಿಧಾನ

ಧನ್ಯವಾದಗಳೊಂದಿಗೆ

ಇಂತಿ ನಿಮ್ಮ
ಶಕುಂತಲಾದೇವಿ ಲಕ್ಷ್ಮಿಪ್ರಿಯ (B.E.mech)
ಬಳ್ಳಾರಿ/ವಿಜಯನಗರ ಲೋಕಸಭಾ ಅಭ್ಯರ್ಥಿ

LEAVE A REPLY

Please enter your comment!
Please enter your name here