ಅದ್ದೂರಿಯಾಗಿ ಜರುಗಿದ ಜಗಜ್ಯೋತಿ ಬಸವ ಜಯಂತಿ

0
78

ಸಂಡೂರು:13:ಮೇ:-ಪಟ್ಟಣದ ವೀರಶೈವ ಸಮಾಜದಿಂದ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇಶ್ವರ ಜಯಂತ್ಯೋತ್ಸವದ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.

ಪ್ರಭುದೇವರ ಸಂಸ್ಥಾನ ವಿರಕ್ತ ಮಠದಿಂದ ಪ್ರಮುಖ ಬೀದಿಯಲ್ಲಿ ಸಾಗಿದ ಮೆರವಣಿಗೆಯಲ್ಲಿ 101 ಜತೆ ಅಲಂಕೃತ ಜೋಡೆತ್ತುಗಳನ್ನು ರೈತರು ಉತ್ಸಾಹದಿಂದ ತಂದು ಮೆರವಣಿಗೆಯಲ್ಲಿ ಬಾಗಿಯಾಗಿದ್ದರು. ವೀರಭದ್ರೇಶ್ವರ ಮಹಿಳಾ ಮಂಡಳಿಯ ಸದಸ್ಯರು ಕೋಲಾಟದ ಮೂಲಕ ಮೆರವಣಿಗೆಗೆ ಕಳೆ ತುಂಬಿದರು.

ಶಾಸಕರು ಕುಣಿದು ಕುಪ್ಪಳಿಸಿದರು:ಸಮಾಜ ಹಾಗೂ ನಂದಿಕೋಲಿನ ನಾದಕ್ಕೆ ಮನಸೋತ ಶಾಸಕ ಈ. ತುಕರಾಮ್ ಸ್ವತಃ ತಾವೇ ನಂದಿಕೊಲು ಹಾಕಿಕೊಂಡು ಸಮಾಳದ ನಾದಕ್ಕೆ ಕುಣಿದು ಕುಪ್ಪಳಿಸಿದರು.

ಮಹಿಳಾ ಡೊಳ್ಳು ಕುಣಿತ, ಕಂಪ್ಲಿಯ ತಾಷಾ ರಾಂಡೊಲಿನ ನಾದಕ್ಕೆ ಯುವಕ, ಯುವತಿಯರು ಹೆಜ್ಜೆ ಹಾಕಿದರು. ಚಿಣ್ಣರು ಬಸವೇಶ್ವರ ವೇಷ ಭೂಷಣ ತೊಟ್ಟು ಗಮನ ಸೆಳೆದರು. ಮೆರವಣಿಗೆ ಆರಂಭಕ್ಕೂ ಮುನ್ನ ಪೇಟೆ ಬಸವೇಶ್ವರ ಸ್ವಾಮಿ ಹಾಗೂ ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪ್ರಭುದೇವರ ಸಂಸ್ಥಾನ ವಿರಕ್ತ ಮಠದ ಪ್ರಭುಸ್ವಾಮೀಜಿ,ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ನಾಗನಗೌಡ, ವೀರಶೈವ ಸಮಾಜದ ಮುಖಂಡರಾದ ಮೇಲುಸೀಮೆ ಶಂಕ್ರಪ್ಪ, ಜಿ.ವೀರೇಶ,ರಮೇಶ್ ಗಡಾದ್,ಕೆ.ಎಸ್.ಕುಮಾರಸ್ವಾಮಿ, ಕೆ.ಶಿವಪ್ಪ,ಗುಡೆಕೋಟೆ ನಾಗರಾಜ, ಹಗರಿ ಬಸವರಾಜಪ್ಪ, ಅಂಕಮ್ಮನನಾಳ್ ವೀರೇಶ, ರುದ್ರಪ್ಪ, ನಾಗರಾಜ ಪಟ್ಟಣಶೆಟ್ಟಿ, ಪಿ.ರವಿಕುಮಾರ್,ಬಿ.ಜಿ.ಸಿದ್ದನಗೌಡ, ವಾಲ್ಮೀಕಿ ಮಹಾ ಸಭಾದ ಅಧ್ಯಕ್ಷ ಡಿ.ಕೃಷ್ಣಪ್ಪ,ರೈತ ಸಂಘದ ಎಂ ಎಲ್ ಕೆ ನಾಯ್ಡು, ಶ್ರೀಪಾದ ಸ್ವಾಮಿ, ಸೇರಿದಂತೆ ಇತರರು ಇದ್ದರು ಇದೇ ಸಂಧರ್ಭದಲ್ಲಿ ಬಾಣ ಬಿರುಸುಗಳನ್ನು ಪ್ರದರ್ಶಿಸಲಾಯಿತು.

◆”ಪಠ್ಯಪುಸ್ತಕದಲ್ಲಿ ವಚನ, ಕೀರ್ತನೆ ಸೇರಿಸಿ”

ಶರಣರ ವಚನಗಳು, ದಾಸರ ಕೀರ್ತನೆಗಳು, ಸಂತರ ಹಿತನುಡಿಗಳನ್ನು ಸೇರಿಸಲು ಪಠ್ಯ ಪುಸ್ತಕ ರಚನಾ ಸಮಿತಿ ಪ್ರಯತ್ನಿಸಬೇಕು ಎಂದು ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

ಪಟ್ಟಣದಲ್ಲಿ ವೀರಶೈವ ಸಮಾಜದಿಂದ ಅಲ್ಲಮಪ್ರಭು ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಬಸವೇಶ್ವರ ಜಯಂತೋತ್ಸವದ ಸಾನಿಧ್ಯವಹಿಸಿ ಮಾತನಾಡಿದರು.

ಕಾಶ್ಮೀರದ ರಾಜ ಮಾಳ್ಗಿ ಮಾರಯ್ಯ ತನ್ನ ಸ್ಥಾನ ತೊರೆದು ಬಂದು ಬಸವಣ್ಣನ ಕಾಯಕತ್ವಕ್ಕೆ ಶರಣಾದ, ಕಾಯಕ ಮಾಡದ ವ್ಯಕ್ತಿ ಬದುಕಲು ಅನರ್ಹ, ಕಾಯಕ ಶುದ್ಧವಾಗಿರಬೇಕು ಎಂದು ಬಸವಣ್ಣ ಜಗತ್ತಿಗೆ ತೋರಿದ ಎಂದು ಸ್ಮರಿಸಿದರು.

ಸಾಹಿತಿ ಹಾಗೂ ಪತ್ರಕರ್ತ ರಂಜಾನ್ ದರ್ಗಾರವರು ಉಪನ್ಯಾಸ ನೀಡಿ ಬಸವಾದಿ ಶರಣರ ವಚನಗಳಲ್ಲಿ ಅರ್ಥಶಾಸ್ತ್ರ ಸಮಾಜ ಶಾಸ್ತ್ರ ಮನಃಶಾಸ್ತ್ರ ರಾಜಕೀಯ ಪ್ರಜ್ಞೆಯಿದ್ದು ಇಡೀ ವಿಶ್ವವೇ ಇದೆಲ್ಲವನ್ನು ಇಂದು ಬಯಸುತ್ತಿದೆ ಎಂಬುದಕ್ಕೆ ಥೇಮ್ಸ್ ನದಿಯ ದಡದ ಮೇಲೆ ಬಸವೇಶ್ವರ ಮೂರ್ತಿ ಮಾಡಿದ್ದು ಸಾಕ್ಷಿಯಾಗುತ್ತದೆ ಎಂದರು.

ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ನಾಗನಗೌಡ ಮಾತನಾಡಿ ಬಸವಾದಿ ಶರಣರ ಕಾಲ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕವಾಗಿ ವಿಶಿಷ್ಟವಾಗಿದೆ ಬಸವಣ್ಣ ಹಾಕಿಕೊಟ್ಟ ಕಾಯಕವೇ ಕೈಲಾಸ ಎಂಬ ಮಾರ್ಗದಲ್ಲಿ ನಡೆದರೆ ಬದುಕು ಸುಂದರವಾಗುತ್ತದೆ ಎಂದರು.

ವಿರಕ್ತ ಮಠದ ಪ್ರಭು ಸ್ವಾಮಿಗಳು ಮಾತನಾಡಿ, ಬಸವ ಜಯಂತಿಯಲ್ಲಿ ಎಲ್ಲಾ ವರ್ಗಗಳ ಜನ ಬಾಗವಹಿಸಿರುವುದು ಸಂಡೂರು ಸರ್ವ ಜನಾಂಗದ ಶಾಂತಿಯ ತೋಟ ಎಂಬುದನ್ನು ಸಾಬೀತು ಮಾಡಿದೆ ಎಂದರು.

ಶಾಸಕ ಈ. ತುಕಾರಾಮ್ ಮಾತನಾಡಿ ಬಿಜ್ಜಳನ ಆಸ್ಥಾನದ ಅರ್ಥ ಮಂತ್ರಿ ಬಸವಣ್ಣ ಭಕ್ತಿ ಭಂಡಾರಿ ಎನಿಸಿಕೊಂಡರು. ಜನರ ತೆರಿಗೆ ಹಣವನ್ನು ಹೇಗೆ ಜನರ ಉಪಯೋಗಕ್ಕೆ ಬಳಸಬವುದು ಎಂದು ತಿಳಿಸಿದರು. ಸ್ಮಯೋರ್ ಸಂಸ್ಥೆ ಎಂಡಿ ಬಹಿರ್ಜಿ ಘೋರ್ಪಡೆ ಮಾತನಾಡಿ, ತಮ್ಮ ಅಜ್ಜ ಎಂವೈಜಿಯವರು ಬಸವಣ್ಣನವರ ಕುರಿತು ರಚಿಸಿದ ಕೃತಿಯ ಬಗ್ಗೆ ಮಾತನಾಡಿದರು.

ವೀರಶೈವ ಸಮಾಜದ ಅಧ್ಯಕ್ಷ ಕೆ.ಎಸ್.ನಾಗರಾಜ, ಹಂಗಾಮಿ ಅಧ್ಯಕ್ಷ ಸಿ. ಸತೀಶ, ತಹಶೀಲ್ದಾರ್ ಕೆ.ಎಂ. ಗುರುಬಸವರಾಜ್, ಗಡಂಬ್ಲಿ ಚನ್ನಪ್ಪ, ಡಾ.ಕೆ.ತಿಪ್ಪೇರುದ್ರ ಇತರರು ಇದ್ದರು

LEAVE A REPLY

Please enter your comment!
Please enter your name here