ಹಸಿರು ಕ್ರಾಂತಿಯ ಹರಿಕಾರ ಚೌದರಿ ಚರಣಸಿಂಗ್- ಈ.ತುಕರಾಂ

0
22

ಸಂಡೂರು:ಡಿ: 24: ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ದೇಶ ಬಡತನದಲ್ಲಿತ್ತು ಅಂದಿನ ಪ್ರಧಾನಿ ನೆಹರೂ, ಲಾಲಾಬಹದ್ದೂರು ಶಾಸ್ತ್ರಿ ಹಾಗೂ ಚೌದರಿ ಚರಣಸಿಂಗ್ ಅವರ ಹಸಿರು ಕ್ರಾಂತಿಯ ಫಲವಾಗಿ ಇಂದು ನಾವು ರಾಷ್ಟ್ರೀಯ ಕೃಷಿ ದಿನಾಚರಣೆಯನ್ನು ಹೆಮ್ಮೆಯಿಂದ ಆಚರಿಸಲು ಸಾಧ್ಯವಾಗಿದೆ ಎಂದು ಶಾಸಕ ಈ.ತುಕರಾಂ ತಿಳಿಸಿದರು.

ಅವರು ಇಂದು ಪಟ್ಟಣದ ಕೃಷಿ ಇಲಾಖೆಯ ಅವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕೃಷಿ ದಿನಾಚರಣೆ,ಕಿಸಾನ್ ಗೋಷ್ಠಿ, ತೋಟಗಾರಿಕೆ ಇಲಾಖೆಯ ಒಂದು ದಿನದ ವಿಶೇಷ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದೇಶದಲ್ಲಿ ಡ್ಯಾಂಗಳ ನಿರ್ಮಾಣ, ಕೈಗಾರಿಕೆಗಳ ಸ್ಥಾಪನೆಯ ಮೂಲಕ ಹಸಿರು ಕ್ರಾಂತಿಯನ್ನು 20 ಅಂಶಗಳ ಅಡಿಯಲ್ಲಿ ಕೈಗೊಳ್ಳುವ ಮೂಲಕ ದೇಶವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿಸಿದ ಕೀರ್ತಿ ನಮ್ಮ ನಾಯಕರಿಗೆ ಸಲ್ಲುತ್ತದೆ, 1992ರಲ್ಲಿ ಮನಮೋಹನ್ ಸಿಂಗ್ ಅವರು, ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ನೂತನ ಅರ್ಥಿಕ ನೀತಿಯನ್ನು ಜಾರಿಗೆ ತರುವ ಮೂಲಕ ಇಡೀ ದೇಶ ಪ್ರಗತಿಯ ಪಥದಲ್ಲಿ ಹೆಜ್ಜೆ ಹಾಕಲು ಸಾಧ್ಯವಾಗಿದೆ, ಸಂಡೂರು ತಾಲೂಕಿಗೆ ಸ್ವತಂತ್ರ್ಯ ಎ.ಪಿ.ಎಂ.ಸಿ. ನೂತನ ಕೃಷಿ ತರಬೇತಿ ಕೇಂದ್ರ, ಕೃಷಿ ಹೊಂಡ ಯೋಜನೆಯ ಮರು ಜಾರಿಗೆ, ಹನಿ ನೀರಾವರಿ, ತುಂತುರು ನೀರಾವರಿ ಯೋಜನೆ, ಕೃಷಿಯಲ್ಲಿ ಅಧುನಿಕ ಯಂತ್ರಗಳ ಬಳಕೆ, ಸಿರಿಧಾನ್ಯಗಳನ್ನು ಬೆಳೆಗಾರರಿಗೆ ವಿಶೇಷ ಸೌಲಭ್ಯ ಯೋಜನೆಗಳನ್ನು ಅನುಷ್ಠಾನಮಾಡುವ ಮೂಲಕ ತಾಲೂಕಿನ ರೈತರು ನೆಮ್ಮದಿಯ ನಿಟ್ಟಿಸಿರು ಬಿಡುವಂತಹ ಮಹತ್ತರ ಕಾರ್ಯಗಳನ್ನು ಕೈಗೊಳ್ಳಲಾಗಿದೆ, ಈಗಾಗಲೇ ತಾಲೂಕಿನ 3 ಭಾಗಗಳಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಂಜೂರು ಮಾಡುವ ಮೂಲಕ ಆರೋಗ್ಯ ರಕ್ಷಣ, ನೂತನ ಮಾದರಿ ಶಾಲೆಗಳ ನಿರ್ಮಾಣದ ಮೂಲಕ ಉತ್ತಮ ಶಿಕ್ಷಣ, ವೀಲ್ಹ್ ಅನ್ ಅಸ್ಪಿಟಲ್ ಯೋಜನೆಯಲ್ಲಿ ಪ್ರತಿ ಗ್ರಾಮಕ್ಕೆ ಅಂಬ್ಯೂಲೆನ್ಸ್ ವ್ಯವಸ್ಥೆ, ರೈತರು ಸ್ವತಂತ್ರ್ಯವಾಗಿ ಮಾರಾಟಮಾಡಲು ಅಧುನಿಕ ವ್ಯವಸ್ಥೆಯಾದ ಅಪ್ ಕಾಮ್ಸ್ ವ್ಯವಸ್ಥೆಯನ್ನು ಸಹ ಮಾಡಲು ಯೋಜನೆ ರೂಪಿಸಿದ್ದು ಅದರ ಪೂರ್ಣ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು, ನೂತನ ಮಿಶ್ರ ಬೇಸಾಯ ಮಾಡುವ ಮೂಲಕ ಭೂಮಿಯನ್ನು ರಕ್ಷಿಸಿಕೊಳ್ಳಬೇಕು, ತಮ್ಮ ಭೂಮಿಯೇ ಒಂದು ಬಹುದೊಡ್ಡ ಗಣ ಇದ್ದ ಹಾಗೆ ಅದನ್ನು ನಂಬಿ ಕೃಷಿ ಮಾಡಿ ಎಂದು ಕರೆನೀಡಿದರು. ಇದೇ ಸಂದರ್ಭದಲ್ಲಿ ಕೃಷಿಭಾಗ್ಯ ಯೋಜನೆಗಳನ್ನು ಮರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಉತ್ತಮ ಕೃಷಿಕರ ಪ್ರಶಸ್ತಿ ಪಡೆದ ದುರುಗಪ್ಪ, ಕನಕಪ್ಪ ಇತರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸಾವಯವ ಕೃಷಿ, ಯರೇಹುಳು ಗೊಬ್ಬರ, ಸಿರಿಧಾನ್ಯಗಳನ್ನು ಬೆಳೆಯುವ ಮೂಲಕ ಹಣ ಸಂಪಾಧನೆ ಮಾಡಿದರೆ, ಹಸು ಸಾಕಾಣೆಯಿಂದ ಅತಿ ಹೆಚ್ಚು ಲಾಭ ಪಡೆಯುವುದರ ಜೊತೆಗೆ ತಮ್ಮ ಹಸುವಿನ ಎಲ್ಲಾ ಗಂಜಲು, ಸೆಗಣಿಯಿಂದ ಉತ್ತಮ ಕೃಷಿ ಮಾಡಲು ಸಾಧ್ಯ ಅದನ್ನು ಹೆಚ್ಚು ಮಾಡಿ ಎಂದು ರೈತರಾದ ಕನಕಪ್ಪ ತಿಳಿಸಿದರು.

ಉತ್ತಮ ಸಾಧನೆ ಮಾಡಿದ ರೈತರಿಗೆ ಸನ್ಮಾನವನ್ನು ಶಾಸಕರು ನೆರವೇರಿಸಿದರು, ಅಲ್ಲದೆ ಕೃಷಿ ಅಧಿಕಾರಿ ಮಂಜುನಾಥ ರಡ್ಡಿಯವರು ಮಾತನಾಡಿ ಇಡೀ ಕೃಷಿ ಇಲಾಖೆಯಲ್ಲಿ ಬರುವಂತಹ ಎಲ್ಲಾ ಅನುಕೂಲಗಳ ಮಾಹಿತಿಯನ್ನು ನೀಡಿದರು, ಅಲ್ಲದೆ ಪ್ರಮುಖವಾಗಿ ಮತ್ತೆ ಕೃಷಿಭಾಗ್ಯ, ಕೃಷಿಹೊಂಡ ಯೋಜನೆಯನ್ನು ಜಾರಿಗೊಳಿಸಿದ್ದು ರೈತರು ಪಡೆದುಕೊಳ್ಳಬೇಕು, ಕಡ್ಡಾಯವಾಗಿ ವಿಮೆಯನ್ನು ಮಾಡಿಸುವ ಮೂಲಕ ಅದರ ಸೌಲಭ್ಯ ಪಡೆಯಬೇಕು, ಸರ್ಕಾರ ಕೊಡುವ ಧನಸಹಾಯಕ್ಕಿಂತಲೂ ಹೆಚ್ಚು ಅನುದಾನಬರುತ್ತದೆ, ಅಲ್ಲದೆ ರೈತರ ಕಡ್ಡಾಯವಾಗಿ ನೊಂದಾಯಿಸಿಕೊಳ್ಳುವ ಮೂಲಕ ತಮ್ಮ ಎಲ್ಲಾ ಸೌಲಭ್ಯ ಪಡೆಯಿರಿ ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಮಂಜುನಾಥರಡ್ಡಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಹನುಮನಾಯಕ್, ಕೃಷಿ ಇಲಾಖೆಯ ಎಲ್ಲಾ ಅಧಿಕಾರಿಗಳು, ಕುರುಬರ ಸತ್ಯ, ಪುರಸಭೆ ಸದಸ್ಯ ಮಾಜಿ ಅಧ್ಯಕ್ಷ ಎಲ್.ಹೆಚ್. ಶಿವಕುಮಾರ್ ಪಂಪಣ್ಣ ಎಲ್ಲಾ ಇಲಾಖೆ ಅಧಿಕಾರಿಗಳು ರೈತ ಸಂಘದ ಅಧ್ಯಕ್ಷರುಗಳಾದ ಚಂದ್ರಶೇಖರಮೇಟಿ, ಉಜ್ಜಿನಯ್ಯ ಬಿ.ಎಂ, ಶ್ರೀಪಾದಸ್ವಾಮಿ, ಧರ್ಮನಾಯ್ಕ, ತಾಲೂಕಿನ ತೋರಣಗಲ್ಲು, ಸಂಡೂರಿನ ರೈತ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಾಲಕೀರಯ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ರಮೇಶ್ ಚೋರನೂರು ಸ್ವಾಗತಿಸಿದರು, ರೈತಗೀತೆಯನ್ನು ಮಕ್ಕಳು ಹಾಡಿದರು,

LEAVE A REPLY

Please enter your comment!
Please enter your name here