ರಾಬಕೋ ಹಾಲು ಒಕ್ಕೂಟದಲ್ಲಿ ರಾಷ್ಟ್ರೀಯ ಹಾಲು ದಿನ ಆಚರಣೆ

0
94

ಬಳ್ಳಾರಿ,ನ.26 : ಕ್ಷೀರ ಕ್ರಾಂತಿಯ ಪಿತಾಮಹ ಪದ್ಮಭೂಷಣ ಡಾ.ವರ್ಗೀಸ್ ಕುರಿಯನ್ ಅವರ 100 ವರ್ಷಗಳ ಜನ್ಮದಿನದ ನಿಮಿತ್ತ ಬಳ್ಳಾರಿಯಲ್ಲಿರುವ ರಾಬಕೋ ಹಾಲು ಒಕ್ಕೂಟದ ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಾಲು ದಿನಾಚರಣೆಯನ್ನು ಶುಕ್ರವಾರ ಆಚರಿಸಲಾಯಿತು.
ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ವರ್ಗೀಸ್ ಕುರಿಯನ್ ಅವರ ಭಾವಚಿತ್ರಕ್ಕೆ ರಾಬಕೋ ಹಾಲು ಒಕ್ಕೂಟದ ನಿರ್ದೇಶಕಿ ಜಿ.ನಾಗಮಣಿ ಹಾಗೂ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಟಿ.ತಿರುಪತಪ್ಪ, ಪ್ರಭಾರ ಉಪ ವ್ಯವಸ್ಥಾಪಕ(ಮಾ) ಎಸ್.ವೆಂಕಟೇಶ್ ಗೌಡ ಅವರು ಪುಷ್ಪನಮನ ಸಲ್ಲಿಸಿದರು.
ನಂತರ ಜಿಲ್ಲಾಸ್ಪತ್ರೆಯಲ್ಲಿ ರಾಷ್ಟ್ರೀಯ ಹಾಲು ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಿರ್ದೇಶಕಿ ನಾಗಮಣಿ ಅವರು ಹಾಲು ಮತ್ತು ಹಾಲಿನ ಉತ್ಪನ್ನಗಳ ಮಹತ್ವ, ಸಮತೋಲನ ಆಹಾರದಲ್ಲಿರುವ ಪೋಷಕಾಂಶಗಳು ಹಾಗೂ ಆರೋಗ್ಯಕ್ಕೆ ಅವುಗಳ ಮಹತ್ವದ ಕುರಿತು ತಿಳಿಸಿದರು.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಟಿ.ತಿರುಪತಪ್ಪ ಅವರು ರಾಷ್ಟೀಯ ಹಾಲು ದಿನಾಚರಣೆಯ ಕಾರ್ಯಕ್ರಮದ ಕುರಿತು ಉಪನ್ಯಾಸ ನೀಡಿದರು.
ಪ್ರಭಾರ ಉಪ ವ್ಯವಸ್ಥಾಪಕ(ಮಾ) ಎಸ್.ವೆಂಕಟೇಶ್‍ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಶೇಖರಣೆ ಮತ್ತು ತಾಂತ್ರಿಕ ವ್ಯವಸ್ಥಾಪಕ ಜಿ.ಕೆ.ಎರ್ರಿಸ್ವಾಮಿ, ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ,ಹಾಲು ಒಕ್ಕೂಟದ ಅಧಿಕಾರಿಗಳಾದ ಐ.ಎನ್.ಮುರಳೀಧರ, ಪ್ರಸನ್ನಕುಮಾರ, ಸಿ.ಎನ್.ಮಂಜುನಾಥ, ಬಿ.ಬಾಬು ಮತ್ತು ಇತರೆ ಅಧಿಕಾರಿ ಹಾಗೂ ನೌಕರರು ಇದ್ದರು. ಆಸ್ಪತ್ರೆಯ ರೋಗಿಗಳಿಗೆ ಸುವಾಸಿತ ನಂದಿನಿ ಹಾಲನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here