ಬಳ್ಳಾರಿಯ ಪ್ರತಿಷ್ಠಿತ ಶ್ರೀ ನಂದ ವಸತಿ ಶಾಲೆಗೆ 100ರಷ್ಟು ಫಲಿತಾಂಶ.

0
251

ಶ್ರೀ ನಂದ ವಸತಿ ಶಾಲೆ,, ವಿದ್ಯಾನಗರ 4ನೇ ಅಡ್ಡರಸ್ತೆ,..ಬಳ್ಳಾರಿಯ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿದೆ. ಈ ವಸತಿ ಶಾಲೆಯು ಉತ್ತಮ ಮಕ್ಕಳಿಗೆ ಯೋಗ್ಯವಾದ ಶಿಕ್ಷಣವನ್ನು ನೀಡುತ್ತಿದೆ. ಈ ಶಾಲೆಯು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಯೋಗ್ಯವಾದ ಸ್ಥಳವನ್ನು ಹೊಂದಿದೆ. ಈ ಶಾಲೆಯಲ್ಲಿ ಪ್ರತಿವರ್ಷ 10ನೇ ತರಗತಿಯಲ್ಲಿ ಶೇಕಡ 100ರಷ್ಟು ಫಲಿತಾಂಶ ದೊಂದಿಗೆ ಈ ಶಾಲೆಯು ಉತ್ತಮವಾದ ಫಲಿತಾಂಶವನ್ನು ಪ್ರತಿವರ್ಷವೂ ಹೊರತರುತ್ತದೆ. ಮಕ್ಕಳಲ್ಲಿ ಉತ್ತಮ ನಡತೆ ,ಒಳ್ಳೆಯ ಸಂಸ್ಕಾರ ವನ್ನು ಶಾಲೆ ಓದಿನ ಜೊತೆಗೆ ಹೇಳಿಕೊಡುತ್ತದೆ.

ಈ ಶಾಲೆಯ 2020- 21 ನೇ ಸಾಲಿನಲ್ಲಿ sslc ವಾರ್ಷಿಕ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿರುವುದು ಶ್ಲಾಘನೀಯ. ಈ ಸಾಲಿನಲ್ಲಿ ಶ್ರೀ ನಂದ ವಸತಿ ಶಾಲೆಯ ವಿದ್ಯಾರ್ಥಿನಿಯಾದ ಕು॥ದೀಕ್ಷಿತ 625ಕ್ಕೆ 601 ಅಂಕಗಳನ್ನು ಗಳಿಸಿ ಶಾಲೆಗೆ ಹೆಸರು ಕೀರ್ತಿ ತಂದಿದ್ದಾರೆ. ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಈ ಫಲಿತಾಂಶದಿಂದ ತುಂಬಾ ಸಂತೋಷಗೊಂಡಿದ್ದಾರೆ. ಉತ್ತಮ ಫಲಿತಾಂಶವನ್ನು ತಂದ ಎಲ್ಲಾ ವಿದ್ಯಾರ್ಥಿಗಳಿಗೂ ಶಾಲಾ ಸಿಬ್ಬಂದಿ ಅಭಿನಂದಿಸಿದ್ದಾರೆ. ಎಲ್ಲಾದರೂ ಇರು, ಎಂತಾದರು ಇರು,ಎಂದೆಂದಿಗೂ ನೀ ಕನ್ನಡವಾಗಿರು ಎಂಬ ನುಡಿಯಂತೆ ಅನ್ಯ ಮಾತೃ ಭಾಷೆಯಾಗಿದ್ದರೂ ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸಿರುವುದು, ಇಂಗ್ಲೀಷ್ ಮಾಧ್ಯಮದ ಶಾಲೆ ಯಾಗಿದ್ದರೂ ಪ್ರತಿವರ್ಷದಂತೆ ಈ ಬಾರಿ ಹತ್ತು ಮಕ್ಕಳು ನೂರಕ್ಕೆ ನೂರು ಅಂಕಗಳನ್ನು ಗಳಿಸಿರುವುದು ಶ್ರೀನಂದ ವಸತಿ ಶಾಲೆಯ ಹೆಮ್ಮೆ.

ಹಾಗೆಯೇ ತೃತೀಯ ಭಾಷೆ ಹಿಂದಿ ವಿಷಯದಲ್ಲಿ ಮೂರು ವಿದ್ಯಾರ್ಥಿಗಳು ಉಳಿದ ಕೋರ್ ವಿಷಯದಲ್ಲೂ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ ಶಾಲೆಗೆ ಹೆಸರನ್ನು ತಂದಿರುತ್ತಾರೆ.


ಕರೋನಾ ಸಮಯದಲ್ಲಿ ಯಾವುದೇ ಭೌತಿಕ ತರಗತಿಗಳು ನಡೆಯದಿದ್ದರೂ ವಿದ್ಯಾರ್ಥಿಗಳು ಆನ್ಲೈನ್ ತರಗತಿಯಲ್ಲೆ ನುರಿತ ಶಿಕ್ಷಕರಿಂದ ಪಾಠವನ್ನು ಕಲಿತು ಒಳ್ಳೆಯ ಫಲಿತಾಂಶವನ್ನು ಹೊರತಂದಿರುವುದು ಶಾಲೆಗೆ ಕಿರೀಟ ಪ್ರಾಯವಾದಂತಾಗಿದೆ. ಹಾಗೆಯೇ ಶ್ರೀನಂದ ವಸತಿ ಶಾಲೆಯಲ್ಲಿ ಈ ವರ್ಷದಿಂದ NEET ಮತ್ತು IIT ಕೋರ್ಸ್ಗಳನ್ನು ಕೂಡ ಪ್ರಾರಂಭ ಮಾಡಲಾಗಿದ್ದು ವಿದ್ಯಾರ್ಥಿಗಳು ಇದರ ಲಾಭ ಪಡೆಯಲು ಮಂಡಳಿ ತಿಳಿಸಿದೆ. ಈ ಹೆಜ್ಜೆ ವಿದ್ಯಾರ್ಥಿಗಳ ಜೀವನಕ್ಕೆ ಅನುಕೂಲವಾಗಬಹುದು.

ಶ್ರೀ ನಂದ ವಸತಿ ಶಾಲೆಯ ಅಂತಿಮ 2020-21 ನೇ ಸಾಲಿನ ವಾರ್ಷಿಕ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇಕಡ 75 ವಿದ್ಯಾರ್ಥಿಗಳು A+ ತೆಗೆದುಕೊಂಡು ಉನ್ನತ ಸ್ಥಾನದಲ್ಲಿ ಉತ್ತೀರ್ಣರಾಗಿದ್ದು, ಶೇಕಡಾ 25 ಮಕ್ಕಳು ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿರುತ್ತಾರೆ.


ಇವರಿಗೆ ಶ್ರೀನಂದ ವಸತಿ ಶಾಲೆಯ ಅಧ್ಯಕ್ಷರಾದ ವಿ ಗಾಂಧಿ, ಕಾರ್ಯದರ್ಶಿಯಾದ ವಿ ರಮನ್ ಕುಮಾರ್, ಪ್ರಾಂಶುಪಾಲರಾದ ಜಿ ಕಿರಣ್ ಕುಮಾರ್, ಶಾಲೆಯ ಆಡಳಿತ ಮಂಡಳಿಯ ಜವಾಬ್ದಾರಿಯನ್ನು ತೆಗೆದುಕೊಂಡ ಶ್ರೀಮತಿ ಎನ್ ಕೆ ಸ್ವರೂಪರಾಣಿ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಕೆ ಲಕ್ಷ್ಮಿಕಾಂತ್ ಮತ್ತು ಶಿಕ್ಷಕ ವೃಂದದ ಮುಖ್ಯಸ್ಥರಾದ ವಿನಯ್ ಕುಮಾರ್ ರೆಹನಾ ಬೇಗಂ ಮತ್ತು ಶಿಕ್ಷಕ ವೃಂದದವರೆಲ್ಲರೂ ವಿದ್ಯಾರ್ಥಿಗಳಿಗೆ ಈ ಮೂಲಕ ಅಭಿನಂದಿಸುತ್ತ ಅವರ ಮುಂದಿನ ಜೀವನಕ್ಕೆ ಶುಭ ಕೋರಿರುತ್ತಾರೆ.

LEAVE A REPLY

Please enter your comment!
Please enter your name here