ಬಂಡ್ರಿ-ಗೊಲ್ಲರಹಟ್ಟಿ ಗ್ರಾಮದಲ್ಲಿ ಕೋವಿಡ್ ಲಸಿಕಾಕರಣ, ಕೋವಿಡ್ ಲಸಿಕೆ ಪಡೆಯಲು ಜನ ಹಿಂಜರಿಕೆ: ಆರೋಗ್ಯ ಸುರಕ್ಷಾಧಿಕಾರಿ ಯಶಸ್ವಿನಿ,

0
462

ಸಂಡೂರು:ಜ:20:- ತಾಲೂಕಿನ ಬಂಡ್ರಿ ಹಾಗೂ ಗೊಲ್ಲರಹಟ್ಟಿ ಗ್ರಾಮದಲ್ಲಿ ಕೋವಿಡ್ ಲಸಿಕೆ ಪಡೆಯಲು 740 ಫಲಾನುಭವಿಗಳಲ್ಲಿ ಈಗಾಗಲೆ 676 ಜನ ಮೊದಲ ಡೋಸ್ ಲಸಿಕೆ ಪಡೆದಿದ್ದು, ಇನ್ನೂ 64 ಜನ ಲಸಿಕೆ ಪಡೆಯದೇ ಹಾಗೆ ಉಳಿದಿದ್ದಾರೆ,

ಹಾಗೆ ಎರಡನೇ ಡೋಸ್ ಲಸಿಕೆ ಪಡೆಯದೇ ಇರುವವರು 203 ಜನರಿದ್ದು ಲಸಿಕೆ ಪಡೆಯಲು ಬರುತ್ತಿಲ್ಲ ಆಶಾ ಕಾರ್ಯಕರ್ತೆ ಮತ್ತು ಸ್ನೇಹ ಸಂಸ್ಥೆ ಸಂಚಾಲಕಿ ಮನೆ ಬೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ,

ಬುಧವಾರ ನೂರು ಜನರಿಗೆ ಲಸಿಕೆ ನೀಡಲು ಪ್ರಯತ್ನ ಮಾಡಿದರೂ ಇಂದು 20 ಜನರಿಗೆ ಎರಡನೇ ಡೋಸ್ ಕೇವಲ ಒಬ್ಬರಿಗೆ ಮೊದಲ ಡೋಸ್ ಲಸಿಕೆ ನೀಡಲಾಯಿತು ಎಂದು ತಿಳಿಸಿದರು, ಇಲ್ಲಿ ಗುರಿ ಸಾಧಿಸಲು ಸಾಧ್ಯವಾಗದ ಕಾರಣ ಕೋಡಿಹಳ್ಳಿ ಗ್ರಾಮಕ್ಕೆ ಬೇಟಿ ಕೊಟ್ಟು ಅಲ್ಲಿ 21 ಜನರಿಗೆ ಲಸಿಕೆ ನೀಡಲಾಯಿತು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಆರೋಗ್ಯ ಸುರಕ್ಷಾಧಿಕಾರಿ ಯಶಸ್ವಿನಿ, ಆಶಾ ಕಾರ್ಯಕರ್ತೆ ಮಂಗಳಾ, ಸ್ನೇಹಾ ಸಂಸ್ಥೆಯ ಸಂಚಾಲಕಿ ನೇತ್ರಾ, ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here