ನೊಂದ ಜೀವಿಗಳ ಕಣ್ಣೀರು ಒರೆಸುವ ಕಾರುಣ್ಯಾಶ್ರಮದ ಸೇವೆ ಅನನ್ಯ: ನ್ಯಾಯಧೀಶ ಕೋಟೆಪ್ಪ ಕಾಂಬಳೆ

0
90

ಸಿಂಧನೂರು.೨೯—ನೊಂದ ಜೀವಿಗಳ ಕಂಬನಿ ಒರೆಸುವುದು ಭಗವಂತನ ಪ್ರಾರ್ಥನೆಗೆ ಸಮ ಸಂತ್ರಸ್ತರಿಗೆ ಸಹಾಯ ಮಾಡವುದು ಬದುಕಿಗೆ ಪುಣ್ಯ ಪ್ರಾಪ್ತಿಯನು ಪಡೆದು ಕೊಂಡಂತೆ ಎಂದು ಸಿಂಧನೂರು ನ್ಯಾಯಾಲಯದ ಹೆಚ್ಚುವರಿ ನ್ಯಾಯಧೀಶ ರಾದ ಕೋಟೆಪ್ಪ ಕಾಂಬಳೆ ಹೇಳಿದರು. ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಮತ್ತು ವಯಸ್ಕರ ಬುದ್ಧಿಮಾಂಧ್ಯ ಆಶ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಧೀಶರಾದ ಶ್ರೇಯಾಂಸು ದೊಡ್ಡಮನಿಯವರು ಅವರ ತಂದೆಯವರಾದ ನಿಂಗಪ್ಪ ದೊಡ್ಡಮನಿಯವರ ಸ್ಮರಣಾರ್ಥ ಆಶ್ರಮಕ್ಕೆ ಮಂಚ ದೇಣಿಗೆ ನೀಡಿದ ಕಾರ್ಯಕ್ರಮದಲ್ಲಿ ಮಾತನಾಡಿದರು ಹಿರಿಯರಿಗೆ ಮನೆಯಲ್ಲಿಯೇ ಇಟ್ಟು ಕೊಂಡು ಸಲುಹಿ ಸಾಕುವುದು ಭಾರತೀಯರ ಸಂಪ್ರದಾಯ ಆದರೆ ಪ್ರಗತಿ ಶೀಲ ಸಮಾಜ ದ ಕಡೆ ಸಾಗುವ ನಾಗಲೋಟದಲಿ ನಾವು ನಮ್ಮ‌ ಹಿರಿಯರನು ಆಶ್ರಮಕ್ಕೆ‌ ಸೇರಿಸುವುದು ನಿಜಕ್ಕೂ ಕಳವಳದ ವಿಷಯ ಎಂದರು. ಕಾರುಣ್ಯಾಶ್ರನದ ಗೌರವಾಧ್ಯಕ್ಷ ಶರಣು.ಪಾ.ಹಿರೇಮಠ ಮಾತನಾಡಿ ಕಾರುಣ್ಯ ಆಶ್ರಮಕ್ಕೆ ಪ್ರಧಾನ‌ ಸಿವಿಲ್ ನ್ಯಾಯಧೀಶರಾದ ಶ್ರೇಯಾಂಸು ದೊಡ್ಡಮನಿಯವರು ಅವರು ತಮ್ಮ ಮಗ ನಮಿತ ಅವರ ಹುಟ್ಟು ಹಬ್ಬವನು ಈ ಆಶ್ರಮದಲ್ಲಿ ಆಯೋಜನೆ ಮಾಡಿದ್ದರು ಅಂದೇ ಯಾವ ಹಿರಿಯರು ಕೆಳಗೆ ಮಲಗುವುದು ಬೇಡ ಅವರ ಮುಸ್ಸಂಜೆ ಸಂತಸವಾಗಿರಬೇಕು ಎಂದು ಮಂಚಗಳನು ನೀಡಿ ವೃದ್ದರಿಗೆ ಆಸರೆಯಾಗಿ ಸಂತ್ರಸ್ತರಿಗೆ ಮಾತೃ ಮಮತೆ ನೀಡಿದ್ದಾರೆ ಎಂದರು ವೇದಿಕೆ‌ ಮೇಲೆ ಎರಡನೇ ಹೆಚ್ಚುವರಿ ನ್ಯಾಯಧೀಶರಾದ ಆನಂದಪ್ಪ.‌ ಕಾರುಣ್ಯಾಶ್ರಮದ ಕಾನೂನು ಸಲಹೆಗಾರರಾದ ರಾಯಪ್ಪ ವಕೀಲರು. ಸಹರಾ ಇಂಡಿಯಾ ಪರಿವಾರದ ಮುಕ್ತಕ ಕವಿ ಶರಬಯ್ಯ ಹಿರೇಮಠ. ಗುತ್ತೇದಾರರಾದ ಬಸವಲಿಂಗಪ್ಪ ಬಾದರ್ಲಿ, ಜೀವ ಸ್ಪಂದನ ಸೇವಾ ಸಂಸ್ಥೆಯ ಕಾರ್ಯದರ್ಶಿ ಅವಿನಾಶ ದೇಶಪಾಂಡೆ ಇದ್ದರು ಕಾರುಣ್ಯಶ್ರಾಮದ ಆಡಳಿತಾಧಿಕಾರಿ ಸುಜಾತ ಚೆನ್ನಬಸವ ಹಿರೇಮಠ ಅವರಿಗೆ ಪ್ರಧಾನ್ ಸಿವಿಲ್ ನ್ಯಾಯಧೀಶರಾದ ಶ್ರೇಯಾಂಸು ದೊಡ್ಡ ಮನಿಯವರು ಮಂಚಗಳನು ಹಸ್ತಾಂತರಿಸಿದರು.
ಸಾಮೂಹಿಕ ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ವರದಿ: ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here