ಬತ್ತುತ್ತಿವೆ ಕರುನಾಡ ನದಿಗಳು,ಯಾರದರೂ ನೀರು ಕೇಳಿದರೆ ಇಲ್ಲ ಅನ್ನಬೇಡಿ: ಶ್ರೀ ವಾಮದೇವಾ ಶಿವಾಚಾರ್ಯ ಮಹಾಸ್ವಾಮಿ

0
29

ಕುರುಗೋಡು:ಪೆ:17: ಕರ್ನಾಟಕ ಬಿಸಿಲಿನ ಬೇಗೆಗೆ ತತ್ತರಿಸುತ್ತಿದೆ. ರಾಜ್ಯ ರಾಜಧಾನಿ 30 ವರ್ಷದ ಬಳಿಕ ದಾಖಲೆಯ ಬಿಸಿಲಿಗೆ ಮೈಯೊಡ್ಡುತ್ತಿದೆ. ಉರಿ ಬಿಸಿಲಿಗೆ ಕುದಿಯುವ ನೀರಿನಲ್ಲಿ ಜಲಚರಗಳು ಒದ್ದಾಡುತ್ತಿವೆ ಎಂದು ಎಮ್ಮಿಗನೂರು ಗ್ರಾಮದ ಹಂಪಿ ಸಾವಿರ ಮಠದ ಶ್ರೀ ವಾಮದೇವಾ ಶಿವಾಚಾರ್ಯ ಮಹಸ್ವಾಮಿಗಳು ಕಳವಳ ವ್ಯಕ್ತ ಪಡಿಸಸಿದರು.

ಸಮೀಪದ ಅವರು ಎಮ್ಮಿಗನೂರು ಗ್ರಾಮದ ಕೌತಳ ಶ್ರೀ ಬಸವೇಶ್ವರ ದೇವಸ್ಥಾನದ ಗೋಪುರ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಟಾಪನೆ. ಕಳಸರೋಹಣ ನೆರವೇರಿಸಿ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ಬದಲಾಗುತ್ತಿರುವ ಹವಾಮಾನ ದಿಂದಾಗಿ ಸಾಂಕ್ರಾಮಿಕ ರೋಗಭೀತಿಯೂ ಹೆಚ್ಚಾಗುತ್ತಿದೆ. ಮೇ ತಿಂಗಳೊಳಗೆ ಮಳೆ ಬಾರದೇ ಇದ್ದರೆ ಹಲವು ಬಿಸಿಲಿನ ಬೇಗೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಲಿದೆ.

ಅದರಲ್ಲೂ ನಮ್ಮ ನಾಡಿಲ್ಲಿ ತುಂಗಭದ್ರಾ ಸೇರಿದಂತೆ ಹಲವು ನದಿಗಳು ಕ್ಷೀಣಿಸಿದ್ದು, ಈ ಗಾಗಲೇ ಬಹುದೇಕ ಉತ್ತರ ಕರ್ನಾಟಕದಲ್ಲಿ ನೀರಿಗೆ ತಾತ್ಕಾರ ಉಂಟಾಗಲಿದೆ. ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತಿರುವ ಬಿಸಿಲು ಮನುಷ್ಯರನ್ನಷ್ಟೇ ಭಾದಿಸುತ್ತಿಲ್ಲ.

ಪ್ರಾಣಿ-ಪಕ್ಷಿಗಳೂ ಧಗೆಯಿಂದ ಒದ್ದಾಡುತ್ತಿವೆ. ಹಾಗಾಗಿ, ಯಾರಾದರೂ ನೀರು ಕೇಳಿದರೆ ಇಲ್ಲ ಅನ್ನಬೇಡಿ, ಅದು ಮನುಷ್ಯರಾದರೂ ಸರಿ, ಪ್ರಾಣಿ-ಪಕ್ಷಿಗಳಾದರೂ ಸರಿ. ಬಿಸಿಲು ಏರಿದಂತೆ ನಾನಾ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಸರ್ವೆ ಸಾಮಾನ್ಯ ಸಾಧ್ಯವಾದಟ್ಟು. ಬಿಸಿಲಿನಲ್ಲಿ ಕೆಲಸ ಮಾಡುವುದನ್ನು ತಪ್ಪಿ, ನೀರು, ಹಣ್ಣು ಪಾನೀಯಗಳ ಸೇವೆನೆ ಇರಲಿ, ನಿಮ್ಮ ಆರೋಗ್ಯದ ಜೋತೆಗೆ ಗೆಳೆಯರ ಬಗ್ಗೆಯೂ ಕಾಳಜಿ ಇರಲಿ, ಮರಗಿಡಗಳ ವಿರಳವಾಗಿರುವ ಕೆರೆ ಹಳ್ಳ ಕೊಳ್ಳಗಳ ಬತ್ತಿಹೋಗಿರುವ ಪ್ರದೇಶಗಳಲ್ಲಿ ಪ್ರಾಣಿ ಪಕ್ಷಿಗಳ: ಸ್ಥಿತಿ ತೀರ ಹದಗೆಟ್ಟಿದೆ ಹಾಗಾಗಿ ಮನೆಗಳ ಮುಂದೆ ನೆರಳಿನಲ್ಲಿ ನೀರಿನ ವ್ಯವಸ್ಥ ಕಲ್ಪಿಸಿ, ಎಂದು ಸಲಹೆ ನೀಡಿದರು.

ಈ ವೇಳೆ ಗ್ರಾಮದ ಕೌತಳ ಶ್ರೀ ಬಸವೇಶ್ವರ ಸೇವ ಸಮಿತಿ ಪದಾಧಿಕಾರಿಗಳು, ಮಹಿಳೆಯರು, ಸೂತ್ತಮೂತ್ತಲಿನ ನೂರಾರು ಭಕ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here