ಭಾರತ ರಕ್ಷಿಸಿ ದಿನದ ಅಂಗವಾಗಿ ಎಐಯುಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ,

0
160

“ಭಾರತ ರಕ್ಷಿಸಿ ದಿನ” ಎಂಬ ಘೋಷ ವಾಕ್ಯದ ಮೇಲೆ ದೇಶವ್ಯಾಪಿ ಕಾರ್ಮಿಕರ ಪ್ರತಿಭಟನೆ ಇಂದು ನಡೆಯುತ್ತಿದೆ. ಇದರ ಅಂಗವಾಗಿ ಎ.ಐ.ಯು.ಟಿ.ಯು.ಸಿ ಹಾಗು ಎಸ್.ಡಬ್ಲ್ಯು.ಎಫ್.ಐ (ಸ್ಕೀಮ್ ವರ್ಕರ್ಸ್ ಫೆಡೆರೇಷನ್ ಆಫ್ ಇಂಡಿಯಾ) ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಮಿಕರ ಪ್ರತಿಭಟನೆ ನಡೆಯಿತು.

ದೇಶದಾದ್ಯಂತ ಕೊಟ್ಯಾಂತರ ಸ್ಕೀಮ್ ನೌಕರರು ಅದರಲ್ಲೂ ಬಹುತೇಕವಾಗಿ ಮಹಿಳೆಯರು, ಅಂಗನವಾಡಿ ಶಿಕ್ಷಕರು ಮತ್ತು ಸಹಾಯಕರು ಆಶಾ ಕಾರ್ಯಕರ್ತರು ಬಿಸಿಯೂಟ ನೌಕರರು ಭಾರತ ರಕ್ಷಿಸಿ ದಿನದ ಅಂಗವಾಗಿ ಪ್ರತಿಭಟಿಸುತ್ತಿದ್ದಾರೆ ಇದರ ಭಾಗವಾಗಿ ಜಿಲ್ಲಾ ಕಾರ್ಮಿಕರು ಬಳ್ಳಾರಿ ಜಿಲ್ಲಾಧಿಕಾರಿ ಕಛೇರಿಯ ಮುಂದೆ ಪ್ರತಿಭಟನೆ ಮಾಡಿ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಪ್ರಧಾನ ಮಂತ್ರಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ನಂತರ ಪ್ರತಿಭಟನೆ ಉದ್ದೇಶಿಸಿ ರಾಜ್ಯ ಕಾರ್ಯದರ್ಶಿಗಳಾದ ಕಾಮ್ರೇಡ್ ಡಿ.ನಾಗಲಕ್ಷ್ಮಿಯವರು ಮಾತನಾಡುತ್ತಾ ಸ್ಕೀಮ್ ನೌಕರರು ಪ್ರಧಾನವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಗಲಿರುಳೆನ್ನದೆ ಸಮಾಜದ ಅತ್ಯಂತ ತಳಮಟ್ಟದ ಮತ್ತು ನಿರ್ಗತಿಕ ಸಮುದಾಯಗಳ ಸಾಮಾಜಿಕ ಅವಶ್ಯಕತೆಗಳನ್ನು ಪೂರೈಸಲು ಕೆಲಸ ಮಾಡುತ್ತಿದ್ದಾರೆ. ಹಲವಾರು ದಶಕಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದರು ಅವರಿಂದ ಸ್ಕೀಮ್ ವರ್ಕರ್ಸ್ ಎಂಬ ಹೆಸರಿನಲ್ಲಿ ಬಿಡಿಗಾಸಿಗೆ ದುಡಿಸಿಕೊಳ್ಳಲಾಗುತ್ತಿದೆ.

ಈ ನೌಕರರು ಸ್ವತಃಹ ಅತ್ಯಂತ ಬಡವರು ಮತ್ತು ಸಮಾಜದ ಅತ್ಯಂತ ತಳಮಟ್ಟದ ಜನರಾಗಿದ್ದಾರೆ ಅವರಲ್ಲಿ ಹಲವಾರು ಮಂದಿ ಸೂರು ಅಥವಾ ಬೆಂಬಲ ಇಲ್ಲದೆ ವಿಧವೆಯರು ಹಾಗೂ ಕುಟುಂಬದಿಂದ ದೂರ ತಳ್ಳಲ್ಪಟ್ಟ ಮಹಿಳೆಯರಾಗಿದ್ದಾರೆ. ಸ್ಕೀಮ್ ನೌಕರರು ಸರ್ಕಾರದ ವಿವಿಧ ಇಲಾಖೆಯಡಿ ನೇರವಾಗಿ ದುಡಿಯುವ, ಅತ್ಯಂತ ಹೆಚ್ಚು ಶೋಷಣೆಗೆ ಒಳಗಾಗುವ ನೌಕರರು ಎಂಬದು ಗೊತ್ತಿದ್ದರೂ ಸಹ ಅವರು ಹಲವಾರು ಸ್ಕೀಮ್ ಗಳಲ್ಲಿ ದುಡಿಯುತ್ತಿದ್ದಾರೆ. ಅವರ ತಿಂಗಳ ವೇತನ 1,100 ರಿಂದ 10,000 ರೂಪಾಯಿ. ಇದನ್ನು ಅಂತರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ ಶಿಫಾರಸ್ಸು ಆದರೂ 21000 ರೂಪಾಯಿ ಕನಿಷ್ಠ ವೇತನಕ್ಕೆ ಹಾಕುವುದು ದೂರದ ಮಾತೇ ಸರಿ ವೇತನವನ್ನು ಸಮಯಕ್ಕೆ ಸರಿಯಾಗಿ ನೀಡುವುದಿಲ್ಲ, ಕಷ್ಟಪಟ್ಟು ಗಳಿಸಿದ ವೇತನವನ್ನು ಪಡೆಯಲು ಅವರು ತಿಂಗಳಗಟ್ಟಲೆ ಅಲೆಯಬೇಕು, ಕೆಲವು ಸಲವಂತೂ ಸಮಯ ಮೀರಿ ಹೋಗಿದೆ ಎಂಬ ನೆಪ ಹೇಳಿ ಅವರದಲ್ಲದ ತಪ್ಪಿಗೆ ಅವರಿಗೆ ವೇತನ ವಂಚನೆಯ ಬರೆ ಎಳೆಯಲಾಗುತ್ತದೆ. ಜೀವನ ವಿಡಿ ಸರ್ಕಾರಿ ನೌಕರರ ಸಮಾನಕ್ಕೆ ದುಡಿದರು ನಿವೃತ್ತಿ ಹೊಂದಿದ ಮೇಲೆ ಅವರಿಗೆ ಯಾವುದೇ ಸಾಮಾಜಿಕ ಭದ್ರತೆ ಇರುವುದಿಲ್ಲ ಎಂದರು.

ಎಐಯುಟಿಯುಸಿ ಸಂಘದ ಜಿಲ್ಲಾ ಕಾರ್ಯದರ್ಶಿ ಎ,ದೇವದಾಸ್, ಎ,ಶಾಂತ, ಎಸ್, ಜಿ. ನಾಗರತ್ನ, ಗೀತಾ, ರಾಮಕ್ಕ , ರೇಷ್ಮಾ , ಅಂಬಿಕಾ, ಜೈರಾಜ್, ನೀಲಪ್ಪ, ವಿಜಯ್ ಕುಮಾರ್, ಕೃಷ್ಣನಾಯ್ಕ್ , ಲಕ್ಷ್ಮಿ, ಮಂಜುಳಾ , ಜಯಲಕ್ಷ್ಮೀ, ನೀಲಮ್ಮ, ಇತರರು ಉಪಸ್ಥಿತರಿದ್ದರು.

ಬೇಡಿಕೆಗಳು:-
ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಮತ್ತು ರೈತ ವಿರೋಧಿ ಮತ್ತು ಜನವಿರೋಧಿ ಕೃಷಿ ಕಾನೂನುಗಳ ಹಾಗೂ ವಿದ್ಯುತ್ ತಿದ್ದುಪಡಿ ಮಸೂದೆ ಹಿಂತೆಗೆದುಕೊಳ್ಳಿ.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆ, ಔಷಧಿ ಸಹಿತ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಕಡಿಮೆಮಾಡಿ.

ಸಾರ್ವಜನಿಕ ಉದ್ದಿಮೆಗಳು ಮತ್ತು ಸರ್ಕಾರಿ, ಅರೆ ಸರ್ಕಾರಿ, ಇಲಾಖೆ, ಮಂಡಳಿ, ನಿಗಮ , ಕಂಪನಿ,ಕಾರ್ಪೊರೇಷನ್ ಇತ್ಯಾದಿಗಳಲ್ಲಿ ಖಾಸಗೀಕರಣ ಮತ್ತು ಖಾಸಗಿ ಹೂಡಿಕೆ ನಿಲ್ಲಿಸಬೇಕು ಮತ್ತು ಅಲ್ಲಿ ಗುತ್ತಿಗೆ , ಹೊರಗುತ್ತಿಗೆ ಮತ್ತಿತರ ಮಾದರಿಯ ದುಡಿಮೆಯನ್ನು ನಿಷೇಧಿಸಬೇಕು ಎಲ್ಲಾ ಕಾರ್ಮಿಕ ನೌಕರರಿಗೆ ಸೇವಾ ಭದ್ರತೆ ಒದಗಿಸಬೇಕು.

ಆಶಾ, ಅಂಗನವಾಡಿ ಕಾರ್ಯಕರ್ತರು, ಸಹಾಯಕಿ, ಬಿಸಿಯೂಟ ಕಾರ್ಮಿಕರಿಗೆ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನ ದ ಶಿಫಾರಸ್ಸಿನಂತೆ ಕನಿಷ್ಠ ರೂ 21,000 ಮಾಸಿಕ ವೇತನ ಮತ್ತು ರೂ 10,000 ಪಿಂಚಣಿ ನೀಡಬೇಕು.

ಕೋವಿಡ್ 19 ಯೋಧರಿಗೆ ಅಗತ್ಯವಿರುವ ಮಾಸ್ಕ್ ಸಹಿತ ಎಲ್ಲಾ ಸುರಕ್ಷಿತ ಸಾಮಗ್ರಿಗಳನ್ನು ಒದಗಿಸಬೇಕು.

ಸೋಂಕಿಗೆ ಒಳಗಾದ ಕಾರ್ಯಕರ್ತರಿಗೆ ಉಚಿತ ಚಿಕಿತ್ಸೆ ಕನಿಷ್ಠ ರೂ 1 ಲಕ್ಷ ಆರೋಗ್ಯ ಸಹಾಯಧನ ಮತ್ತು ಸಾವಿಗೀಡಾದ ಕುಟುಂಬಗಳಿಗೆ ಘೋಷಿತ 50 ಲಕ್ಷ ಪರಿಹಾರ ಧನ ತಕ್ಷಣ ನೀಡಬೇಕು.

ವರದಿ:-ಮಹೇಶ್

LEAVE A REPLY

Please enter your comment!
Please enter your name here