ಕರಾಬು ಎಂದು ನಮೂದಿಸುವ ಮೂಲಕ ರೈತರನ್ನು ಬೀದಿಗೆ ತಳ್ಳಿದ್ದು ತಕ್ಷಣ ಕ್ರಮವಹಿಸಿ- ಧರ್ಮನಾಯ್ಕ

0
9

ಸಂಡೂರು:ಮಾ:16: ತಾಲೂಕಿನ ಸುಶೀಲಾನಗರ, ದೌಲತ್‍ಪುರ, ಧರ್ಮಾಪುರ, ಕೃಷ್ಣಾನಗರ, 14 ಹಳ್ಳಿಗಳ ಸವೇ ಸೆಟ್ಲಮೆಂಟ್ ಮಾಡಿದ ಸಂದರ್ಭದಲ್ಲಿ ರೈತರ ಜಮೀನುಗಳನ್ನು ಕರಾಬು, ಬಿ.ಕರಾಬು ಎಂದು ನಮೂದಿಸುವ ಮೂಲಕ ರೈತರ ಜಮೀನುಗಳಲ್ಲಿ ಕೃಷಿಮಾಡಂದತಹ ಸ್ಥಿತಿ ಉಂಟಾಗಿದ್ದು ತಕ್ಷಣ ನಿಜವಾದ ಸರ್ವೇ ಮಾಡುವ ಮೂಲಕ ರೈತರ ಜಮೀನುಗಳ ಆಧಾರಗಳನ್ನು ಪರಿಶೀಲಿಸಿ ಅವರಿಗೆ ಹಕ್ಕು ಪತ್ರಗಳನ್ನು ಕೊಡಬೇಕು ಎಂದು ರೈತ ಸಂಘದ ಅಧ್ಯಕ್ಷ ಧರ್ಮಾನಾಯ್ಕ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲೂಕಿನ 14 ಹಳ್ಳಿಗಳ ರೈತರು ಪಟ್ಟಣದ ವಿಜಯ ವೃತ್ತದಲ್ಲಿ ಬೃಹತ್ ಪ್ರತಿಭಟನಾ ಮೆರವಣ ಗೆಯನ್ನು ಮಾಡಿ ತಹಶೀಲ್ದಾರ್ ಅನಿಲ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು ಈ ಸಂದರ್ಭದಲ್ಲಿ ದೌಲತ್‍ಪುರ ಗ್ರಾಮದ ಮುಖಂಡರಾದ ಶ್ರೀಪಾದ ಸ್ವಾಮಿ ಮಾತನಾಡಿ 30-40 ವರ್ಷಗಳಿಂದಲೂ ಕೃಷಿ ಮಾಡುತ್ತಿರುವ ರೈತರ ಭೂಮಿಗಳನ್ನು ಕೆರೆ ಹಳ್ಳ, ಬಿಟ್ಟು ಫಾರಂ 2 ಅಡಿಯಲ್ಲಿ ಕೃಷಿ ಜಮೀನು ಎಂದು ನೀಡಿರುತ್ತೀರಿ, ಅದರೆ ಈಗ ಖರಾಬು ಎಂದು ನಮೂದಿಸಿರುವುದು ರೈತರು ಬೀದಿಪಾಲಾಗುತ್ತಿದ್ದಾರೆ ಅದನ್ನು ತಕ್ಷಣ ಪರಿಶೀಲನೆ ಮಾಡುವ ಮೂಲಕ ಕ್ರಮ ವಹಿಸಬೇಕು, ತಾಲೂಕಿನ ಸುಶೀಲಾನಗರ ಗ್ರಾಮದಲ್ಲಿ 234 ಎಕರೆ, ಸಿದ್ದಾಪುರ ಗ್ರಾಮದಲ್ಲಿ 300 ಎಕರೆ 18ಹುಲಿಕುಂಟೆ ಗ್ರಾಮಗಳಲ್ಲಿ ಯೂ ಸಹ ಬಹಳಷ್ಟು ಜಮೀನುಗಳು ಇಲ್ಲವಾಗುತ್ತಿವೆ ಅದ್ದರಿತಹಶೀಲ್ದಾರ್ ಹಾಗೂ ಇತರ ಅಧಿಕಾರಿಗಳು ಪರಿಶೀಲನೆ ಮಾಡುವ ಮೂಲಕ ರೈತರಿಗೆ ಹಿಂದಿನಂತೆಕ ಪಹಣಿ ಗಳಲ್ಲಿ ಹೆಸರು ಬರಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲೂಕಿನ ಯಶವಂತನಗರ ಗ್ರಾಮದ ರೈತ ಮುಖಂಡ ರಾಜಶೇಖರಗೌಡ ಮಾತನಾಡಿ ರೈತ ಜಮೀನುಗಳಲ್ಲಿ ಅದಿರು ಲಾರಿಗಳ ಸಂಚಾರ ಮಾಡುತ್ತಿವೆ, ಅಲ್ಲದೆಕ ತಿಮ್ಮಪ್ಪನಗುಡಿ ದೇವರ ದರ್ಶನಕ್ಕೆ, ರೈತರು ತಮ್ಮ ಕೃಷಿ ಭೂಮಿಗೆ ಓಡಾಡುವುದು ಸಹ ದುಸ್ತರವಾಗಿದೆ, ಅದ್ದರಿಂದ ತಕ್ಷಣ ತಹಶೀಲ್ದಾರ್ ಅವರು ಪರಿಶೀಲನೆ ಮಾಡಿ ಅದಿರು ಲಾರಿಗಳಿಗೆ ನೀಡಿರುವ ರಸ್ತೆಯ ಬಗ್ಗೆ ಕ್ರಮವಹಿಸಿ ರೈತರಿಗೆ ರಸ್ತೆ ಬಿಡಿಸಿಕೊಡಬೇಕು, ಒಂದಲ್ಲ ಒಂದು ರೀತಿಯಲ್ಲಿ ರೈತರು ಕೃಷಿ ಮಾಡದಂತಹ ದುಸ್ಥಿತಿ ಉಂಟಾಗಿದ್ದು ತಕ್ಷಣ ರೈತರನ್ನು ರಕ್ಷಿಸಬೇಕು ಅವರ ಬೇಡಿಕೆಗಳನ್ನು ಈಡೇರಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಿನ್ನೂರೇಶ್ವರ, ರಾಮನಾಯ್ಕ, ಭಾಷಾ, ಸೋಮಣ್ಣ, ಕಾಗಪ್ಪ, ಫಕೃ, ಕೆ.ಜಂಜಪ್ಪ, ದೊಡ್ಡಬಸಪ್ಪ, ವಸಗೇರಪ್ಪ, ಚೌಡಪ್ಪ, ಕಾಗಪ್ಪ, ಮೊದನ್ ಸಾಬ್, ಹನುಮಂತಪ್ಪ, ಬಿ.ರಾಜಣ್ಣ, ಶ್ರೀನಿವಾಸ ಹಾಗೂ ಇತರರು ಉಪಸ್ಥಿತರಿದ್ದು ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

LEAVE A REPLY

Please enter your comment!
Please enter your name here