ಎಲ್ಲದಕ್ಕೂ ಕೋವಿಡ್ ನೆಪ ಹೇಳುವ ಹಾಗಿಲ್ಲ; ಡಾ.ಇಂದ್ರಾಣಿ,

0
638

ಸಂಡೂರು:ಮೇ:08:- ತಾಲೂಕು ಆರೋಗ್ಯಾಧಿಕಾರಿಗಳ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ತಾಲೂಕು ಮಟ್ಟದ ಪ್ರಗತಿ ಪರಿಶೀಲನೆ ಸಭೆ ನಡೆಯಿತು,

ಬಹಳ ದಿನಗಳಿಂದ ಕೋವಿಡ್ ಇರುವ ಕಾರಣದಿಂದ ಸಭೆಗಳನ್ನು ಮುಂದೂಡಲಾಗಿದ್ದು, ಕೋವಿಡ್ ಪ್ರಕರಣಗಳು ಇಳಿದ ಕಾರಣ ಮತ್ತೆ ಸಭೆಗಳನ್ನು ನಡೆಸಲು ಇಲಾಖೆ ಪ್ರಾರಂಭಿಸಿದ್ದು, ಈ ಕಾರಣದಿಂದ ಸಂಡೂರು ತಾಲೂಕಿನ ಅರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಯಿತು,

ಸಭೆಯನ್ನು ಉದ್ದೇಶಿಸಿ ತಾಲೂಕು ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ ಅನಿಲ್ ಕುಮಾರ್, ಅವರು ಮಾತನಾಡಿ ಕೋವಿಡ್ ನೆಪದಿಂದ ಹಲವಾರು ರಾಷ್ಟ್ರೀಯ ಕಾರ್ಯಕ್ರಮಗಳ ಪ್ರಗತಿಯು ಕುಂಠಿತವಾಗಿರುತ್ತದೆ, ಕ್ಷಯ ರೋಗಿಗಳ ಪತ್ತೆ, ಮಲೇರಿಯಾ ಪತ್ತೆ ಹಚ್ಚುವ ರಕ್ತ ಲೇಪನಗಳ ಸಂಗ್ರಹ, ಗರ್ಭಿಣಿ ದಾಖಲಾತಿ, ಆಸ್ಪತ್ರೆ ಹೆರಿಗೆ ನೊಂದಣಿ, ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ ಮಾಡಿಸುವುದು, ಸಾರ್ವತ್ರಿಕ ಲಸಿಕಾಕರಣ ಪ್ರಗತಿ, ಮತ್ತು ಕೋವಿಡ್ ಲಸಿಕಾಕರಣದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಪ್ರಿಕಾಷನ್ ಡೋಸ್, ಮತ್ತು 18+ ಎರಡನೇ ಡೋಸ್ ಸಾಧನೆಯೂ ಕಡಿಮೆ ಇದ್ದು, ಮುಂದಿನ ತಿಂಗಳು ಈ ಎಲ್ಲಾ ಕಾರ್ಯಕ್ರಮದ ಪ್ರಗತಿಯು ಸಮಾಧಾನಕರವಾಗಿರಬೇಕು ಕೋವಿಡ್ ನೆಪ ಹೇಳುವ ಹಾಗಿಲ್ಲ ಎಂದು ಎಚ್ಚರಿಕೆ ನೀಡಿದರು, ಎನ್.ಹೆಚ್.ಎಮ್ ನಲ್ಲಿ ವಿಶೇಷ ನೇಮಕಾತಿಯಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸೇವೆಗಳು ಉತ್ತಮ ಗುಣಾತ್ಮಕವಾಗಿರಬೇಕು ಇತರೆ ಕೇಂದ್ರದ ಸೇವೆಗಳಿಗೆ ಹೋಲಿಕೆ ಮಾಡಿದಲ್ಲಿ ಉತ್ಕೃಷ್ಟ ಮಟ್ಟದಲ್ಲಿ ಇರಬೇಕು, ಜಿಲ್ಲೆಗೆ ಮಾದರಿಯಾಗಿರ ಬೇಕು, ಇದನ್ನು ಮುಂದಿನ ತಿಂಗಳಿಂದ ಉತ್ತಮ ಪಡಿಸಿಕೊಳ್ಳಲು ಎಲ್ಲಾ ಸಿ.ಹೆಚ್.ಓ ಮತ್ತು ಪಿ.ಹೆಚ್.ಸಿ.ಓ, ಹಾಗೂ ಹೆಚ್.ಐ.ಓ ಅವರಿಗೆ ಸೂಚಿಸಿದರು,

ಈ ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಕುಶಾಲ್ ರಾಜ್ ಸ್ವಾಗತಿಸಿ ಎಲ್ಲಾ ಉಪ ಕೇಂದ್ರಗಳ ಗ್ರಾಮವಾರು ಪ್ರಗತಿಯ ವಿವರಣೆಯನ್ನು ನೀಡಿದರು, ಮತ್ತು ಈ ತಿಂಗಳಿಂದ ಎಲ್ಲಾ ಗ್ರಾಮಗಳಿಗೂ ಬೇಟಿ ನೀಡಿ ಅಲ್ಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು,

ಈ ಸಂದರ್ಭದಲ್ಲಿ ಡಾ.ನವೀನ್ ಕುಮಾರ್, ಡಾ.ಭರತ್ ಕುಮಾರ್,ಡಾ. ಅಕ್ಷಯ್, ಡಾ.ಚಂದ್ರಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಪ್ರತಾಪ್, ಜಿಲ್ಲೆಯ ಮತ್ತು ತಾಲೂಕಿನ ಮೇಲ್ವಿಚಾರಕರು, ಹಾಗೂ ಎಲ್ಲಾ ಸಿ.ಹೆಚ್.ಓ, ಪಿ.ಹೆಚ್.ಸಿ.ಓ, ಹೆಚ್.ಐ.ಓ, ಆಶಾ ಮೆಂಟರ್ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here