ಲಸಿಕೆ ವಂಚಿತ ಮಕ್ಕಳಿಗೆ “ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0” ಲಸಿಕಾ ಅಭಿಯಾನದಡಿ ತಪ್ಪದೇ ಲಸಿಕೆ ಕೊಡಿಸಿ; ಪುರಸಭೆ ಸದಸ್ಯೆ ಶ್ರೀಮತಿ ಜ್ಯೋತಿ,

0
216

ತಾಲೂಕಿನ ಕುರೇಕುಪ್ಪ ಪುರಸಭೆ ವ್ಯಾಪ್ತಿಯ ರೈಲ್ವೆ ನಿಲ್ದಾಣದ ಅಂಕಲಮ್ಮ ಪ್ರದೇಶದ ಗ್ರಾಮದ ನಾಲ್ಕನೆ ವಾರ್ಡನಲ್ಲಿ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಲಸಿಕಾ ಅಭಿಯಾನದ ಎರಡನೇ ಸುತ್ತಿನ ಫಲಾನುಭವಿಗಳೊಂದಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,

ಕಾರ್ಯಕ್ರಮ ಉದ್ದೇಶಿಸಿ ಪುರಸಭೆ ಸದಸ್ಯೆ ಶ್ರೀಮತಿ ಜ್ಯೋತಿ ಅವರು ತಾಯಂದಿರಿಗೆ ಲಸಿಕೆ ಕೊಡಿಸುವಂತೆ ಮನವಿ ಮಾಡಿದರು, ನಮ್ಮ ಕೆಲಸಗಳು ಇದ್ದದ್ದೆ ಅದನ್ನು ಬದಿಗೊತ್ತಿ ಲಸಿಕೆ ಕೊಡಿಸ ಬೇಕಾದ್ದು ನಮ್ಮೆಲ್ಲ ಆದ್ಯ ಕರ್ತವ್ಯ, ಕಸ ವಾಹನಗಳಲ್ಲೂ ಪ್ರಚಾರ ಮಾಡುತ್ತಿದ್ದಾರೆ ಎಲ್ಲರು ಎಚ್ಚೆತ್ತು ಕೊಂಡು ಬಿಟ್ಟು ಹೋದ ಲಸಿಕೆಗಳನ್ನು ಕೊಡಿಸೋಣ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಯಾವುದೋ ಕಾರಣಕ್ಕೆ ಲಸಿಕೆ ಪಡೆಯದೆ ವಂಚಿತರಾದ ಮಕ್ಕಳಿಗಾಗಿ ಈ ವರ್ಷ ಮೂರು ಸುತ್ತಿನಲ್ಲಿ ಲಸಿಕೆ ನೀಡಲಾಗುತ್ತಿದ್ದು, ಆಗಸ್ಟ್ ತಿಂಗಳ ಮೊದಲ ಸುತ್ತಿನಲ್ಲಿ ಲಸಿಕೆ ವಂಚಿತ ಎಲ್ಲಾ ಮಕ್ಕಳು ಲಸಿಕೆ ಪಡೆಯಲು ವಿಫಲರಾದ ಕಾರಣಕ್ಕೆ ಈ ಸುತ್ತಿನಲ್ಲಿ ಲೋಪ ದೋಷಗಳನ್ನು ಸರಿಪಡಿಸಿಕೊಂಡು ಹೆಚ್ಚು ಪ್ರಚಾರ ಕೈಗೊಳ್ಳುವಂತೆ ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಆದೇಶ ಮೇರಗೆ ಅರಿವು ಮೂಡಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ, ಇದೇ 11 ರಂದು ಲಸಿಕೆಗಳನ್ನು ನೀಡಲಾಗುತ್ತಿದ್ದು, ಫಲಾನುಭವಿ ಮಗುವಿಗೆ ಲಸಿಕೆ ಕೊಡಿಸಿ ಖಾತ್ರಿ ಪಡಿಸಿಕೊಳ್ಳುವಂತೆ ತಾಯಂದಿರಿಗೆ ಮನವಿ ಮಾಡಿದರು, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಲಸಿಕೆ ತಳಪಾಯವಾಗಿದ್ದು, ಶಿಶುಗಳಿಗೆ ದೊರೆಯ ಬೇಕಿದ್ದ ಪೂರ್ಣ ಲಸಿಕಾ ಹಕ್ಕನ್ನು ದೊರೆಯುವಂತೆ ಮಾಡುವುದು, ಶಿಶುಗಳಿಗೆ ಹನ್ನೆರಡು ಮಾರಕ ರೋಗಗಳ ವಿರುದ್ಧ ಹುಟ್ಟನಿಂದ ಐದು ವರ್ಷದೊಳಗೆ ಇಂದ್ರಧನುಷ್ ನ ಏಳು ಬಣ್ಣಗಳ ಹಾಗೆ ಒಟ್ಟು ಏಳು ಬಾರಿ ಲಸಿಕೆ ಕೊಡಿಸಿ ಮಕ್ಕಳ ಆರೋಗ್ಯ ವೃದ್ಧಿಗೆ ಸಹಕಾರ ನೀಡಲು ಎಲ್ಲರೂ ಕೈಜೋಡಿಸಿರಿ ಎಂದು ಮನವಿ ಮಾಡಿದರು,

ಈ ಸಂದರ್ಭದಲ್ಲಿ ಹೆಚ್.ಐ.ಒ ಬಸವರಾಜ, ಸಮಾಲೋಚಕ ಪ್ರಶಾಂತ್ ಕುಮಾರ್, ಆಶಾ ಕಾರ್ಯಕರ್ತೆ ವೆಂಕಟಲಕ್ಷ್ಮಿ,ಶ್ರೀದೇವಿ, ಆಶಾ,ಹುಲಿಗೆಮ್ಮ,ರೇಖಾ, ತಾಯಂದಿರಾದ ಶ್ರೀಲತ,ಶ್ರಾವಣಿ,ಪೂಜಾ,ಲಕ್ಷ್ಮೀದೇವಿ, ಹುಲಿಗೆಮ್ಮ,ಚಂದ್ರಕಲಾ,ವರಲಕ್ಷ್ಮಿ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here