ಸಾಹಿತ್ಯ ಸಂಘಗಳು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಏಕಕಾಲಕ್ಕೆ ಕಟ್ಟಿ ಕೊಟ್ಟಿವ; ಡಾಕ್ಟರ್ ಬಸವರಾಜ ಸಬರದ.

0
232

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ “ಕನ್ನಡ ಸಾಹಿತ್ಯ ಸಂಘ ಸುರಪುರ” 1942 ರಲ್ಲಿ ಸ್ಥಾಪನೆಗೊಂಡಿದ್ದು ಇಂದಿಗೆ (2022) ಎಂಭತ್ತು ವರ್ಷ ಪೂರ್ಣಗೊಳಿಸಿ “ಸಹಸ್ರ ಚಂದ್ರಮಾನೋತ್ಸವ” ಆಚರಿಸಿಕೊಳ್ಳುತ್ತಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಏಕಕಾಲಕ್ಕೆ ಪೋಷಿಸುವ ಬೆಳೆಸುವ ನಿರಂತರ ಕೆಲಸ ನಡೆಸಿರುವ ಸಂಘ ಎಂಭತ್ತನೆಯ ವರ್ಷಾಚರಣೆಯ ಸವಿ ನೆನಪಿಗಾಗಿ ಆರು ಕನ್ನಡ ಕೃತಿಗಳನ್ನು ಪ್ರಕಟಗಣೆಗೊಳಿಸಿದ್ದು. ನಗರದ ಗರುಡಾದ್ರಿ ಕಲಾಮಂದಿರದಲ್ಲಿ ನಡೆದ ಎರಡು ಗಜಲ್ ಸಂಕಲನಗಳ ಲೋಕಾರ್ಪಣೆ ಕಾರ್ಯಕ್ರಮ ಅದ್ದೂರಿಯಾಗಿ ಮತ್ತು ಅಷ್ಟೇ ಅರ್ಥಪೂರ್ಣವಾಗಿ ಜರುಗಿತು

ಕಾರ್ಯಕ್ರಮವನ್ನು ಸಂಘದ ಸಂಸ್ಥಾಪಕ ವಂಶಸ್ಥರಾದ ಬುಕ್ಕಪಟ್ಟಣಂ ಆದಿತ್ಯನಾರಾಯಣ ರಾಜಗುರು ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಖ್ಯಾತ ಲೇಖಕ ಡಾಕ್ಟರ್ ಬಸವರಾಜ ಸಬರದ ಅವರು ಶ್ರೀಮತಿ ಜ್ಯೋತಿ ದೇವಣಗಾವ ಅವರ ಗಜಲ್ ಕೃತಿ “ಅತ್ತರಿನ ಭರಣಿ” ಪರಿಚಯವನ್ನು ನೀಡುತ್ತಾ ಉರ್ದು ಕಾವ್ಯದ ಅತ್ತರ್ ಎಂದರೆ ಗಜಲ್ ಆಗಿದ್ದು, ಕಾವ್ಯ ಸುವಾಸನೆಯುಳ್ಳದ್ದು, ಕಾಂತಾಸಮ್ಮಿಹಿತವಾಗಿದ್ದು,ನವಿರಾದ ಪಿಸುಮಾತಿನ ಇಷ್ಕ್ ಯಿದ್ದಾಗಲೇ ಗಜಲ್ ಮೈದಾಳುತ್ತದೆ ಎಂದು ಅಭಿಪ್ರಾಯಪಟ್ಟರು.

ಲೇಖಕ ಶ್ರೀ ಕೃಷ್ಣಮೂರ್ತಿ ಕೈದಾಳ ಅವರು ಮಹಾಂತೇಶ ಗೋನಾಲ ಅವರ ಕೃತಿ “ಚಾಡಮಾರಿ ಶಹರಗಳು” ಕುರಿತು ಮಾತನಾಡುತ್ತಾ ಮೊದಲ ಕೃತಿಯಲ್ಲಿ ಮೌನವನ್ನು ಆಶ್ರಯಿಸಿದ ಕವಿಮನ ಮುರಿದು ಬೀಳುತ್ತಿರುವ ಚಂದ್ರನನ್ನು ಕಂಡು, ಈ ಶಹರುಗಳ ಚಾಡಮಾರಿತನವನ್ನು ಕಂಡು ಘಾಸಿಗೊಂಡಿದ್ದಾನೆ ಎಂದು ಅಭಿಪ್ರಾಯಿಸಿದರು,

ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಉಸ್ತಾದ್ ಅಬ್ದುಲ್ ರಬ್ ಮುಖ್ಯಸ್ಥರು ಉರ್ದು ಮತ್ತು ಪರ್ಷಿಯನ್ ಅಧ್ಯಯನ ವಿಭಾಗ ಕಲಬುರ್ಗಿ ಇವರು ಗಜಲ್ ನ ಮೂಲ ಮತ್ತು ಅರ್ಥ ವಿನ್ಯಾಸಗಳನ್ನು ಹಲವು ಶೇರ್ ಮತ್ತು ನಜಮ್ ಗಳ ಉದಾಹರಿಸುವದರ ಮೂಲಕ ಸಭೆಗೆ ಪ್ರಸ್ತುತಪಡಿಸಿದರು.

ಸಂಘದ ಅಧ್ಯಕ್ಷರಾದ ಶ್ರೀ ಬಸವರಾಜ ಜಮದರಾಖಾನಿ ಅವರು ಅಧ್ಯಕ್ಷೀಯ ನುಡಿಗಳನ್ನು,ಉಪಾಧ್ಯಕ್ಷರಾದ ಶ್ರೀ ಜೇ ಆಗಷ್ಟಿನ್ ನಿವೃತ್ತ ಮುಖ್ಯ ನ್ಯಾಯಾಧಿಕಾರಿಗಳು ಗುಲಬರ್ಗಾ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು, ಕೃತಿಯ ಲೇಖಕರಾದ ಶ್ರೀಮತಿ ಜ್ಯೋತಿ ದೇವಣಗಾವ್ ಗೋಗಿ ಮತ್ತು ಮಹಾಂತೇಶ್ ಗೋನಾಲ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಶ್ರೀ ರಾಜಾ ಮುಕುಂದ ನಾಯಕ್,ಶ್ರೀ ಚಂದ್ರಕಾಂತ ಭಂಡಾರೆ, ಶ್ರೀ ಲಕ್ಷ್ಮಣ ಶಾಸ್ತ್ರಿ ಹೆಬ್ಬಾಳ ಅವರು ಭಾಗವಹಿಸಿದ್ದರು ಬಸವರಾಜ್ ದೇಶಮುಖ್, ರಾಘವೇಂದ್ರ ಗುಡುಗುಂಟಿ, ನಬೀಲಾಲ್ ಮಕಾನ್ದಾರ್,ಶ್ರೀ ಹರಿರಾವ್ ಆದೋನಿ, ನಿಂಗನಗೌಡ ದೇಸಾಯಿ, ಶರಣಬಸವ ಯಾಳವಾರ,ಮಲ್ಲಿನಾಥ ತಳವಾರ ಕುತುಬುದ್ದಿನ್ ಅಮ್ಮಾಪುರ, ಎ ಕಮಲಾಕರ್, ಕನಕಪ್ಪ ವಾಗನಗೇರಿ,ಗೋಪಣ್ಣ ಯಾದವ, ಜಯಲಲಿತಾ ಪಾಟೀಲ್,ನಿರ್ಮಲ ರಾಜಗುರು, ಶಕುಂತಲಾ ಜಾಲವಾದಿ, ಪಾರ್ವತೀ ದೇಸಾಯಿ ಹಾಜರಿದ್ದರು.ಡಾಕ್ಟರ್ ಸತ್ಯನಾರಾಯಣ ಅಲದರ್ತಿ, ಮಲ್ಲಯ್ಯ ಕಮತಗಿ,ದೊಡ್ಡಮಲ್ಲಿಕಾರ್ಜುನ ಹುದ್ದಾರ್, ಸಜ್ಜನಸೆಟ್ಟಿ ಉಪಸ್ಥಿತರಿದ್ದರು

ಶ್ರೀನಿವಾಸ ಜಾಲವಾದಿ ಸ್ವಾಗತಿಸಿದರು, ಶಿವಕುಮಾರ್ ಮಸ್ಕಿ ನಿರೂಪಿಸಿದರು,ಹೆಚ್ ರಾಠೋಡ್ ವಂದಿಸಿದರು.

LEAVE A REPLY

Please enter your comment!
Please enter your name here