ಗುಂಪು ಸಭೆಯ ಮೂಲಕ ಡೆಂಗೀಜ್ವರ ಕುರಿತು ಅರಿವು, ಸಾರ್ವಜನಿಕರ ಸಹಕಾರಕ್ಕೆ ಮನವಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,

0
145

ಸಂಡೂರು:ಅ:08:- ಸಂಡೂರು ತಾಲೂಕಿನ ತೋರಣಗಲ್ಲು ಸಮುದಾಯ ಕೇಂದ್ರ ವ್ಯಾಪ್ತಿಯಲ್ಲಿ ನಿನ್ನೆ ಒಂದು ಡೆಂಗೀ ಪ್ರಕರಣ ಕಂಡುಬಂದು,ಜನವರಿಯಿಂದ ಇಲ್ಲಿಯವರೆಗೆ 5 ಡೆಂಗೀ ಪಾಸಿಟಿವ್ ಪ್ರಕರಣಗಳು ಮತ್ತು 3 ಯಾಂಟಿಜೆನ್ ಪಾಸಿಟಿವ್ ಕಂಡುಬಂದಿದ್ದು, ಈಗಾಗಲೇ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಹಾಗೆಯೇ ಪಾಸಿಟಿವ್ ವರದಿಯಾದ ಸ್ಥಳಗಳಲ್ಲಿ ಗುಂಪು ಸಭೆಯ ಮೂಲಕ ಜನರಿಗೆ ಡೆಂಗೀ ಜ್ವರದ ಲಕ್ಷಣಗಳಾದ ತಲೆನೋವು, ಜ್ವರ, ಕೀಲು ನೋವು, ವಾಂತಿ, ಕಣ್ಣಿನ ಹಿಂಭಾಗದ ನೋವು, ಕಪ್ಪು ಬಣ್ಣದಬೇದಿಯ ಕುರಿತು ಮಾಹಿತಿ ನೀಡಲಾಯಿತು,ಮತ್ತು ಡೆಂಗೀ ಜ್ವರಕ್ಕೆ ಕಾರಣವಾಗುವ ಈಡೀಸ್ ಈಜಿಪ್ಟೈ ಸೊಳ್ಳೆಗಳ ಜೀವನ ಶೈಲಿ, ಸೊಳ್ಳೆಗಳ ಉತ್ಪತ್ತಿ ನಿಯಂತ್ರಣ, ಹಗಲು ಹೊತ್ತಿನಲ್ಲಿ ಸೊಳ್ಳೆಗಳ ಕಚ್ಚುವಿಕೆಯಿಂದ ರಕ್ಷಿಸಿಕೊಳ್ಳಲು ಮೈತುಂಬ ಬಟ್ಟೆ ಧರಿಸುವುದು, ಸೊಳ್ಳೆ ನಿರೋಧಕ ಬತ್ತಿಗಳನ್ನು ಹಚ್ಚುವುದು, ಓಡೋಮಾಸ್ ನಂತಹ ಕ್ರೀಮ್ ಗಳನ್ನು ಹಚ್ಚುವುದು, ಮನೆಯಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳಾದ ಡ್ರಮ್, ಬ್ಯಾರಲ್, ಗಡಿಗೆ, ತೊಟ್ಟಿಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ಒಣಗಿಸಿ ನೀರು ಶೇಖರಣೆ ಮಾಡುವ ಬಗ್ಗೆ ಅರಿವು ಮೂಡಿಸಲಾಯಿತು, ಜ್ವರ ಬಂದು ಕೂಡಲೆ ಸ್ವಯಂ ಚಿಕಿತ್ಸೆ ಪಡೆಯದೇ ರಕ್ತ ಪರೀಕ್ಷೆಗೆ ಒಳಪಡುವಂತೆ ತಿಳಿಸಲಾಯಿತು,

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಹೆಚ್, ಹನುಮಂತಪ್ಪ, ದಲಿತ ಸಂಘದ ಅಧ್ಯಕ್ಷ ಬಾಬಣ್ಣ, ಆರೋಗ್ಯ ನಿರೀಕ್ಷಣಾಧಿಕಾರಿ ಶಕೀಲ್ ಅಹಮದ್, ಭಾಗ್ಯಲಕ್ಷ್ಮಿ, ಪರಮೇಶ್ವರಪ್ಪ, ವಸಂತ್, ರಮೇಶ, ಅಂಜಿನಪ್ಪ, ಅಭಿಷೇಕ್, ಲಕ್ಷ್ಮಿ, ಕಮಲಮ್ಮ,ರಾಜಲಕ್ಷ್ಮಿ, ಪಕ್ಕಿರಮ್ಮ, ಅರುಣಮ್ಮ ಆಶಾ ಕಾರ್ಯಕರ್ತೆ ಕಾವೇರಿ, ಶ್ರೀದೇವಿ,ಹುಲಿಗೆಮ್ಮ, ವಿಜಯ ಶಾಂತಿ, ಆಶಾ, ರಾಜೇಶ್ವರಿ, ವೆಂಕಟಲಕ್ಮಿ,ಪದ್ಮಾ, ಗೋವಿಂದಮ್ಮ ಇತರರು ಭಾಗವಹಿದ್ದರು

LEAVE A REPLY

Please enter your comment!
Please enter your name here