ಘೋಷಣೆಗಷ್ಟೇ ಸೀಮಿತವಾದ ಒಕ್ಕೂಟ ಸರ್ಕಾರದ ಬಜೆಟ್, ಡಿವೈಎಫ್ಐ ಸಂಘಟನೆಯಿಂದ ಮನವಿ

0
122

ಸಂಡೂರು:ಪೆ:03- ಉದ್ಯೋಗ ಖಾತ್ರಿ ಪಡಿಸದ,ಯುವಜನರ ಕನಸುಗಳನ್ನು ಛಿದ್ರಗೊಳಿಸಿದ ಕೇಂದ್ರ ಬಜೆಟ್ ಕುರಿತು ಬಳ್ಳಾರಿ ಜಿಲ್ಲಾ ಸಂಡೂರು ತಾಲೂಕು ತೋರಣಗಲ್ಲು ಗ್ರಾಮ ಡಿವೈಎಫ್ಐ ಸಂಘಟನೆ ನೇತೃತ್ವದಲ್ಲಿ ಡಿವೈಎಫ್ಐ ಕೆಂದ್ರ ಸಮಿತಿ ತಿರ್ಮಾನಧಂತೆ ಕರ್ನಾಟಕ ರಾಜ್ಯ ಸಮಿತಿ ಕರೆಯ ಮೆರಗೆ ಮಾನ್ಯ ಉಪಾತಹಾಶಿಲ್ದಾರರು ನಾಡಕಛೇರಿ ತೋರಣಗಲ್ಲು ಇವರ ಮೂಲಕ ಮಾನ್ಯ ನರೇಂದ್ರ ಮೋದಿ ಪ್ರಧಾನಿ ಮಂತ್ರಿಗಳು ಭಾರತ ಕೇಂದ್ರ ಸರ್ಕಾರ, ನವದೆಹಲಿ ಇವರಿಗೆ ಮನವಿ ಪತ್ರವನ್ನು ಕಳುಹಿಸಲಾಯಿತು..

ಈ ಸಂದರ್ಭದಲ್ಲಿ ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷರಾದ ಸ್ವಾಮಿ ಮಾತನಾಡಿ ಉದ್ಯೋಗ ಸಿಗದೇ ಹತಾಶರಾಗಿರುವ ದೇಶದ ಯುವಜನತೆಗೆ ಉದ್ಯೋಗ ಖಾತ್ರಿಪಡಿಸದೇ ಕೇವಲ ಘೋಷಣೆಗೆ ಸೀಮಿತವಾದ ಒಕ್ಕೂಟ ಸರಕಾರದ ಬಜೆಟ್ ನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ಖಂಡಿಸುತ್ತದೆ.
ದೇಶದಲ್ಲಿ ಮೊದಲ ಬಾರಿ ಅಧಿಕಾರಕ್ಕೇರುವ ಸಂದರ್ಭದಲ್ಲಿ ವರ್ಷಕ್ಕೆರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆಂದು ಯುವಜನರಲ್ಲಿ ಭ್ರಮೆ ಸೃಷ್ಟಿಸಿ ನಂತರ ಈವರೆಗೂ ಪ್ರಾಮಾಣಿಕವಾಗಿ ಉದ್ಯೋಗ ಸೃಷ್ಟಿಯತ್ತ ಕೆಲಸ ಮಾಡಲಿಲ್ಲ. ಪ್ರತಿಸಲ ಯುವಜನರನ್ನು ವಂಚಿಸುವ ಕೆಲಸವನ್ನು ಒಕ್ಕೂಟ ಸರಕಾರ ಮಾಡುತ್ತಿರುವುದು ಅಕ್ಷಮ್ಯ ಅಪರಾಧ ಎಂದರು.

ನಂತರ ಮಾತನಾಡಿದ ದಲಿತ ಡಿವೈಎಫ್ಐ ಜಿಲ್ಲಾ ಮುಖಂಡರು ಎಸ್. ಕಾಲೂಬ ಮೊದಲೇ ನಿರುದ್ಯೋಗ ದರ ಪಾತಾಳ ತಲುಪಿರುವ ಅತ್ಯಂತ ಕೆಟ್ಟ ಸ್ಥಿತಿಯಲ್ಲಿ, ಕೊರೋನಾ ಸಾಂಕ್ರಾಮಿಕ ರೋಗವನ್ನು ಸರಿಯಾಗಿ ನಿರ್ವಹಿಸಲಿಲ್ಲ. ಅದೇ ಸಂದರ್ಭದಲ್ಲಿ ಇರುವ ಉದ್ಯೋಗಗಳನ್ನು ಕಡಿತ ಮಾಡಿ ಜನತೆಯನ್ನು ಬೀದಿಗೆ ತಳ್ಳಿದ ನರೇಂದ್ರ ಮೋದಿ ನೇತೃತ್ವದ ಸರಕಾರ ಈ ಬಜೆಟ್ಟಿನಲ್ಲಿ ಯುವಜನರಿಗೆ ಉದ್ಯೋಗದ ಕುರಿತು ಸಮರ್ಪಕ ಯೋಜನೆ-ಅನುದಾನ ನೀಡದೆ ವಂಚಿಸುತ್ತಿದೆ ಎಂದರು

ಅದೇ ರೀತಿ ಅಂಜಿನಿ ದಲಿತ ಯುವಕರ ಸಂಘದ ಅಧ್ಯಕ್ಷರು ಮಾತನಾಡಿ ಕೇವಲ ನಾಮಕಾವಸ್ಥೆಗೆ ಕೌಶಲ್ಯ ಅಭಿವೃದ್ಧಿಗೊಳಿಸುತ್ತೇವೆ ಎಂದು ಬರೀ ಘೋಷಣೆ ನೀಡುತ್ತಿರುವ ಸರಕಾರ ನಂತರ ಉದ್ಯೋಗ ಒದಗಿಸುವ ಕುರಿತು ತನ್ನ ಬದ್ದತೆ ವ್ಯಕ್ತಪಡಿಸದೆ ನುಣುಚಿಕೊಳ್ಳುವ ನೀತಿ ಅನುಸರಿಸುತ್ತಿರುವುದು ದೇಶದ ಬಹುದೊಡ್ಡ ಮಾನವ ಸಂಪನ್ಮೂಲವಾಗಿರುವ ಯುವಜನರಿಗೆ ಮಾಡುವ ವಿದ್ರೋಹವಾಗಿದೆ ಎಂದು ಈ ನಾಡಿನ ಯುವಜನತೆಗೆ ಕರೆ ನೀಡಿದರು

ಈ ಸಂದರ್ಭದಲ್ಲಿ ಡಿವೈಎಫ್ಐ ತಾಲೂಕು ಅಧ್ಯಕ್ಷ ಶಿವು, ಕ್ರೀಡಾಕಾರ್ಯದರ್ಶಿ ನಾಗಭೂಷಣ, ಚೈತನ್ಯ ಸಂಸ್ಥೆಯ ಎಂ.ಟಿ.ಎಸ್.ತಿಪ್ಪೇಸ್ವಾಮಿ,ಡಿವೈಎಫ್ಐ ನ ಮುಖಂಡರುಗಳಾದ ಕುಮಾರ್, ನಾಗರಾಜ, ರುದ್ರ, ಹೂಲೆಪ್ಪ ಮತ್ತಿತರರು ಭಾಗವಹಿಸಿದ್ದರು..

LEAVE A REPLY

Please enter your comment!
Please enter your name here