ಮೆಟ್ರಿಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಲ್ತ್ ಪ್ರೊಮೋಷನಲ್ ಟ್ರಸ್ಟ್ ವತಿಯಿಂದ ಕ್ಷಯರೋಗದ ಚಿಕಿತ್ಸೆಯಲ್ಲಿರುವವರಿಗೆ ನೆರವಿನ ಹಸ್ತ

0
169

ಸಂಡೂರು: ಕೋವಿಡ್ ವಿಪತ್ತಿನಲ್ಲಿ ಕರ್ನಾಟಕ ಹೆಲ್ತ್ ಪ್ರೋಮೋಷನಲ್ ಟ್ರಸ್ಟ್ ವತಿಯಿಂದ ಕ್ಷಯರೋಗದ ಚಿಕಿತ್ಸೆಯಲ್ಲಿರುವವರಿಗೆ ಪಡಿತರ ಕಿಟ್ ವಿತರಣೆ ಮಾಡಿದ್ದು ಸಂತೋಷವಾಯಿತು ಎಂದು ಡಾ.ಶುಭಂಸರ್ಕಾರ್,ತಿಳಿಸಿದರು

ಸಂಡೂರು ತಾಲೂಕಿನ ಮೆಟ್ರಿಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರದ ವೈದ್ಯಾಧಿಕಾರಿ ಡಾ.ಶುಭಂಸರ್ಕಾರ್, ಕರ್ನಾಟಕ ಹೆಲ್ತ್ ಪ್ರೋಮೋಷನಲ್ ಟ್ರಸ್ಟ್, ಬೆಂಗಳೂರು ಇವರು ಕ್ಷಯರೋಗ ನಿರ್ಮೂಲನೆಯಲ್ಲಿ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸುತ್ತಿದ್ದು ಹೆಮ್ಮೆಯ ವಿಷಯವಾಗಿತ್ತು,ಈಗ ಕ್ಷಯರೋಗದ ಚಿಕಿತ್ಸೆಯಲ್ಲಿ ಇರುವವರಿಗೆ ಕೋವಿಡ್ ವಿಪತ್ತಿನಲ್ಲಿ ಪೌಷ್ಟಿಕಾಹಾರ ದೊರೆಯುವ ಸಲುವಾಗಿ ರೋಗಿಗಳಿಗೆ ಅನುಕೂಲವಾಗಲು ಟ್ರಸ್ಟ್ ವತಿಯಿಂದ ಮೆಟ್ರಿಕಿ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿರುವ 17 ಕ್ಷಯರೋಗಿಗಳಿಗೆ ಅಕ್ಕಿ, ಬೇಳೆ, ಎಣ್ಣೆ, ಸೋಪು, ಸಾಸುವೆ,ಜೀರಿಗೆ, ಅರಿಷಿಣ, ಟೀಪುಡಿ,ಹಾಲೀನ ಪುಡಿ, ಇತರೆ ಆಹಾರ ಪದಾರ್ಥಗಳುಳ್ಳ ಕಿಟ್ ಗಳನ್ನು ನೀಡಿದ್ದಾರೆ ಅವುಗಳನ್ನು ನೇರವಾಗಿ ಫಲಾನುಭವಿಗಳಿಗೆ ವಿತರಣೆ ಮಾಡಿದ್ದು ಮತ್ತಷ್ಟು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು,

ಹಾಗೇ ಕಾರ್ಯಕ್ರಮದಲ್ಲಿ ರೋಗಿಗಳ ಆರೈಕೆ ಮತ್ತು ಕುಟುಂಬದವರ ಬೆಂಬಲವು ಅತೀ ಅವಶ್ಯಕವಾಗಿರುತ್ತದೆ, ರೋಗವನ್ನು ದೂರವಿಡಬೇಕೇ ಹೊರತು ರೋಗಿಯನ್ನಲ್ಲ ಎಂದು ತಿಳಿಸಿದರು, ರೋಗಿಗಳಿಗೆ ಚಿಕಿತ್ಸೆ ಪೂರ್ಣ ಅವಧಿ ತೆಗೆದು ಕೊಳ್ಳಬೇಕು, ಕ್ಷಯ ಸಾಂಕ್ರಾಮಿಕ ರೋಗ,ರೋಗಿ ಕೆಮ್ಮಿದಾಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ,ಕೆಮ್ಮಿದಾಗ ಬಟ್ಟೆ ಅಡ್ಡ ಇಟ್ಟುಕೊಳ್ಳಬೇಕು, ಎಲ್ಲಂದರಲ್ಲಿ ಉಗುಳಬಾರದು, ಮಕ್ಕಳಿಂದ ಅಂತರ ಕಾಯ್ದುಕೊಳ್ಳಬೇಕು, ಪೌಷ್ಟಿಕ ಆಹಾರ ಸೇವನೆ ಮಾಡಬೇಕು, ಬೀಡಿ,ಸಿಗರೇಟು, ತಂಬಾಕು ಸೇವನೆ ಮತ್ತು ಮದ್ಯಪಾನ ಮಾಡುವುದನ್ನು ಸಂಪೂರ್ಣ ತ್ಯಜಿಸಬೇಕು, ಕುಟುಂಬದ ಯಾರಿಗಾದರೂ ಕ್ಷಯರೋಗದ ಲಕ್ಷಣಗಳು ಕೆಮ್ಮು, ಜ್ವರ, ತೂಕ ಕಡಿಮೆಯಾಗುವುದು, ಹಸಿವೆಯಾಗದಿರುವುದು, ಕೆಮ್ಮಿದಾಗ ಕಫ ಬರುವ ಲಕ್ಷಣಗಳು ಕಾಣಿಕೊಂಡರೆ ತಕ್ಷಣ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಬೇಕು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಂಗಸ್ವಾಮಿ, ಪಂಚಾಯತಿ ಸದಸ್ಯ ಪರಮೇಶ್ವರಪ್ಪ, ಗ್ರಾಮದ ಮುಖಂಡ ರಾಜಶೇಖರ, ಕಾರ್ಯದರ್ಶಿ ಪ್ರಭಾಕರ ರೆಡ್ಡಿ, KHPT ಸಂಯೋಜಕ ಸಂಗಮೇಶ್,ರಾಜಶೇಖರ್, ಆಸ್ಪತ್ರೆಯ ಫಾರ್ಮಸಿ ಅಧಿಕಾರಿ ದೇವರಾಜ್, ಆಶಾ ಕಾರ್ಯಕರ್ತೆ ಲಕ್ಷ್ಮಿ,ರತ್ನಮ್ಮ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here