ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ): ಕಲಿಯುವ, ಕಲಿಸುವ, ವಿಧಾನಗಳು ಕುರಿತು ವ್ಯಕ್ತಿತ್ವ ವಿಕಸನ ಕಾರ್ಯಾಗಾರ

0
102

ಧಾರವಾಡ:ಜ.14: ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ)ಯಲ್ಲಿ ಕಲಿಯುವ, ಕಲಿಸುವ, ವಿಧಾನಗಳು ಕುರಿತು ಕಾರ್ಯಾಗಾರ ಜ.13 ರಂದು ಜರುಗಿತು.

ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ. ವಿ.ಆಯ್.ಬೆಣಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭವಿಷ್ಯದ ಸಮಾಜ ನಿರ್ಮಾಣದಲ್ಲಿ ಬೋಧಕರ ಪಾತ್ರ ಮಹತ್ವದ್ದಾಗಿದೆ. ಶಿಕ್ಷಕರು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಎಸ್. ಪೆÇೀದ್ದಾರ ಮಾತನಾಡಿ, ಜಲ ಮತ್ತು ನೆಲ ನಿರ್ವಹಣೆ ಪ್ರಸ್ತುತ ಅವಶ್ಯಕತೆಯಾಗಿದೆ. ವಾಲ್ಮಿಯು ರೈತರಿಗೆ, ವಿದ್ಯಾರ್ಥಿಗಳಿಗೆ, ಅಭಿಯಂತರರಿಗೆ ಮತ್ತು ಸಮಾಜದ ಎಲ್ಲ ಸ್ತರದ ಜನತೆಗೆ ಜಲ-ನೆಲ ನಿರ್ವಹಣೆ ಕುರಿತು ತರಬೇತಿ ನೀಡುವ ರಾಜ್ಯಮಟ್ಟದ ಸಂಸ್ಥೆಯಾಗಿದೆ. ವಿವಿಧ ವರ್ಗ, ಲಿಂಗ, ವಯೋಮಾನದ, ಅಧಿಕಾರಿಗಳು, ಇಂಜಿನಿಯರುಗಳು ಮತ್ತು ರೈತರುಗಳಿಗೆ ತಲುಪುವುದು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಬೋಧಕರಿಗೆ ಇದು ಒಂದು ಸವಾಲಾಗಿದೆ. ಶಿಕ್ಷಕರು ವಿವಿಧ ಬೋಧನಾ ವಿಧಾನ ಮತ್ತು ತಂತ್ರಜ್ಞಾನಗಳ ಕಲಿಕೆ ಮತ್ತು ಅಳವಡಿಕೆಯಿಂದ ಶಿಬಿರಾರ್ಥಿಗಳಿಗೆ ಕಲಿಕೆ ಆಸಕ್ತಿದಾಯಕವಾಗುವಂತೆ ಕಾರ್ಯನಿರ್ವಹಿಸಬೇಕು. ಕ್ರಿಯಾಶೀಲತೆ ಕಲಿಸುವ ವಿಧಾನಗಳನ್ನು ಬೋಧಕರು ಅಳವಡಿಸಿಕೊಂಡರೆ ಸಂಸ್ಥೆಯ ಸಾಮಥ್ರ್ಯವರ್ಧನೆ ಚಟುವಟಿಕೆಗಳಿಗೆ ಮೌಲ್ಯವರ್ಧನಯಾಗುತ್ತದೆ. ನಿರಂತರ ಕಲಿಕೆ ಮತ್ತು ಕೌಶಲ್ಯಗಳ ಅಭಿವೃದ್ಧಿ ಮೂಲಕ ಸಂಸ್ಥೆಯ ಮೂಲ ಉದ್ದೇಶಗಳಾದ ತರಬೇತಿ, ಜ್ಞಾನ, ವಿಜ್ಞಾನ ಪ್ರಚುರ ಪಡಿಸುವ ವಿಧಾನಗಳಲ್ಲಿ ಸುಧಾರಣೆ ತರಲು ಸಾಧ್ಯ.ಆ ಮೂಲಕ ಅಚ್ಚುಕಟ್ಟು ಪ್ರದೇಶಗಳ ಕೊನೆಯ ರೈತನಿಗೂ ನೀರು ತಲುಪಿಸಲು ಸಾಧ್ಯ ಎಂದರು.

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಡಾ. ಎಸ್.ಎಮ್. ಶಿವಪ್ರಸಾದ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಬೋಧಕರ ಪಾತ್ರ ಬಹಳ ಮಹತ್ವದ್ದಾಗಿದೆ. ಇತ್ತೀಚಿನ ಕೋವಿಡ್ ಸಮಯದಲ್ಲಿ ಆರೋಗ್ಯ ಕಾರ್ಯಕರ್ತರು ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದಂತೆ ಮತ್ತು ಯೋಧರು ದೇಶದ ಗಡಿಗಳಲ್ಲಿ ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡಿದಂತೆಯೇ ಬೋಧಕರು/ ಶಿಕ್ಷಕರು ಯೋಧರುಗಳಂತೆ ದೇಶದ ನಿರ್ಮಾಣದಲ್ಲಿ ಜ್ಞಾನ ಯೋಧರಾಗಿ ಕೈಗೂಡಿಸಬೇಕಾಗಿದೆ. ಪ್ರಸ್ತುತ ಕಲಿಕೆ ಕೇವಲ ತರಗತಿ ಕೊಠಡಿಗಳಿಗೆ ಮಾತ್ರ ಸೀಮಿತವಾಗಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ ಇಂದು ಬೆರಳ ತುದಿಗಳಲ್ಲಿ ಲಭ್ಯವಾಗುತ್ತಿದೆ. ತರಗತಿಗಳಲ್ಲಿ ಒಂದೇ ಹಂತದಲ್ಲಿ ಕಲಿಕೆಯು ಸಾಮಥ್ರ್ಯದ ವಿದ್ಯಾರ್ಥಿಗಳು ಇರುವುದಿಲ್ಲ. ಪ್ರತಿಯೊಬ್ಬ ಶಿಕ್ಷಕನೂ ಬೋಧಿಸುವ ವಿಷಯದಲ್ಲಿ ನಿರಂತರ ಕಲಿಕೆ ಮೂಲಕ ಜ್ಞಾನ ನವೀಕರಿಸಿಕೊಳ್ಳುವುದರ ಜೊತೆಗೆ ಪರಿಣಾಮಕಾರಿ ಸಂವಹನ ಕೌಶಲ್ಯ ಬೆಳೆಸಿಕೊಳ್ಳಬೇಕು. ಕಲಿಯುವ- ಕಲಿಸುವ ವಿನೂತನ ವಿಧಾನಗಳನ್ನು ವಿವರಿಸುತ್ತ ವಿವಿಧ ವರ್ಗಗಳ ತರಬೇತುದಾರರ ತರಬೇತಿಗಾಗಿ ಯಾವ ವಿದಾನಗಳನ್ನು ಅಳವಡಿಸಿಕೊಳ್ಳಬೇಕು.ಬೋಧಕರು ಶೈಕ್ಷಣಿಕ ಜ್ಞಾನ ಅರ್ಹತೆ ಜೊತೆಗೆ ವಿದ್ಯಾರ್ಥಿಗಳನ್ನು ಅರಿಯುವ ಸಹಾನುಭೂತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಇಂ. ಬಿ.ವೈ. ಬಂಡಿವಡ್ಡರ್ ಅತಿಥಿಗಳನ್ನು ಪರಿಚಯಿಸಿದರು. ಇಂದೂಧರ ಹಿರೇಮಠ ಸ್ವಾಗತಿಸಿದರು. ನಾಗರತ್ನ ಕಾರ್ಯಕ್ರಮ ನಿರೂಪಿಸಿದರು. ಶೈಲಜಾ ಹೊಸಮಠ ವಂದಿಸಿದರು. ವಾಲ್ಮಿ ಸಂಸ್ಥೆಯ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗಳು ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು.

LEAVE A REPLY

Please enter your comment!
Please enter your name here