ವಿಜಯನಗರ ಜಿಲ್ಲಾಧಿಕಾರಿ ಎಂ ಎಸ್ ದಿವಾಕರ್ ಕೋಗಳಿ ಗ್ರಾಮಕ್ಕೆ ಭೇಟಿ.

0
66

ಕೊಟ್ಟೂರು :ಜು:೨೯:-ತಾಲೂಕಿನ ಕೋಗಳಿ ಗ್ರಾಮದಲ್ಲಿ ಗೋಡೆ ಬಿದ್ದು ಮೃತರಾದ ಕಾಡಪ್ಪರ ಹಿರಿಯಮ್ಮನ ಮನೆಗೆ ಶುಕ್ರವಾರ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ತಾಲೂಕಿನಲ್ಲಿ ಕಳೆದ 15-20 ದಿನಗಳಿಂದ ಬಿಟ್ಟುಬಿಡದೆ ನಿರಂತರ ಮಳೆ ಸುರಿದ ಹಿನ್ನೆಲೆ ಮಳೆಗೆ ಕೋಗಳಿ ಗ್ರಾಮದ ಕಾಡಪ್ಪರ ಹಿರಿಯಮ್ಮ 60 ವರ್ಷದ ಮಹಿಳೆ ಮೇಲೆ ಮಂಗಳವಾರ ಗೋಡೆ ಬಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳಕ್ಕೆ ಕರೆದೊಯ್ದಿದ್ದರು.

ಹಿರಿಯಮ್ಮನ ತಲೆಯಲ್ಲಿ ರಕ್ತ ಹೆಚ್ಚು ಹೋಗಿರುವ ಕಾರಣ ಕೊಪ್ಪಳದ ವೈದ್ಯಾಧಿಕಾರಿಗಳು ಹುಬ್ಬಳ್ಳಿ ವಿಮ್ಸ್ ಆಸ್ಪತ್ರೆಗೆ ಕರೆದೊಯ್ಯವಂತೆ ಸೂಚಿಸಿದರು,ಅಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಬುಧವಾರ ರಾತ್ರಿ ಹಿರಿಯಮ್ಮ ಮೃತರಾಗಿದ್ದಾರೆ.

ಈ ನಿಮಿತ್ತ ವಿಜಯನಗರ ಜಿಲ್ಲಾಧಿಕಾರಿಗಳು ಕೋಗಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ದುರ್ಘಟನೆ ವಿವರಣೆ ಕೇಳೆ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ತಹಶಿಲ್ದಾರ ಎಂ. ಕುಮಾರ್ ಸ್ವಾಮಿ ಅವರಿಂದ ತಾಲೂಕಿನಲ್ಲಿನ. ಮಳೆಯಿಂದ ಹಾನಿಗೀಡಾದ ಮನೆಗಳ ಅಂಕಿ ಸಂಖ್ಯೆ ಹಾಗೂ ಕೃಷಿ ಸಂಬಂಧಿಸಿದಂತೆ ಮಾಹಿತಿಗಳನ್ನು ಪಡೆದುಕೊಂಡರು.

ಈ ವೇಳೆ ಕೊಟ್ಟೂರು ತಹಶಿಲ್ದಾರ ಎಂ.ಕುಮಾರ್ ಸ್ವಾಮಿ ಮತ್ತು ಕೋಗಳಿಯ ಕಂದಾಯ ನಿರೀಕ್ಷಕರು ಶಿವಕುಮಾರ್ ಹಾಗೂ ಉಪ ತಹಶಿಲ್ದಾರ ರೇಖಾ,ಕೊಟ್ಟೂರು ತಾ.ಪಂ ಎಡಿ ವಿಜಯಕುಮಾರ್ ಹಾಗೂ ಗ್ರಾಮದ ಸದಸ್ಯರು ಇದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here