ಹಿರಾಳ್ ಗ್ರಾಮದಲ್ಲಿ”ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ” ನ ಗ್ರಾಮ ಘಟಕ ಉದ್ಘಾಟನೆ.

0
266

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಹಿರಾಳ್ ಗ್ರಾಮದಲ್ಲಿ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ನ ಗ್ರಾಮ ಘಟಕದ ಉದ್ಘಾಟನಾ ಸಮಾರಂಭ
ಸಂಡೂರು ತಾಲೂಕು ಅಧ್ಯಕ್ಷರಾಗಿರುವ ಜನಾಬ್ ಕೆ.ಕೆ ದಾದಾ ಖಲಂದರ್ ಅವರ
ನೇತೃತ್ವದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ AIMDF ಕರ್ನಾಟಕ ರಾಜ್ಯ ಕಾನೂನು ಸಲಹಾ ಸಮಿತಿಯ ಸದಸ್ಯರಾಗಿರುವ ವಕೀಲರಾದ ಕೆ.ಮುಹಮ್ಮದ್ ಅಯೂಬ್ ಅವರು,ಪ್ರಸಕ್ತ ಸನ್ನಿವೇಶದಲ್ಲಿ ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಪ್ರಗತಿಗಾಗಿ ಮುಸ್ಲಿಂ ಸಮುದಾಯ ಸಂಘಟಿತರಾಗಬೇಕಾಗಿರುವ ಅನಿವಾರ್ಯತೆ ಇದ್ದು ಪರಸ್ಪರ ಇತರೆ ಧರ್ಮೀಯರೊಂದಿಗೆ ಸಹಬಾಳ್ವೆ ನಡೆಸಿ ಭಾರತದ ನೈಜ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸ ಆಗಬೇಕಿದೆ, ಆ ನಿಟ್ಟಿನಲ್ಲಿ ಸಂಘಟನೆ ಶ್ರಮಿಸುತ್ತಿದ್ದು ಕಾರ್ಯಕರ್ತರ ಸಹಕಾರ ಅತಿ ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಘಟನೆಯ ದ್ಯೇಯೋದ್ದೇಶಗಳ ಬಗ್ಗೆ ಮಾತನಾಡಿದ ಎಐಎಂಡಿಎಫ್ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿರುವ ಮುಹಮ್ಮದ್ ದಾನಿಶ್ , ಸಂಘಟನೆ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ಪ್ರಾರಂಭದಿಂದಲೂ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡುವ ಜೊತೆಗೆ, ದೇಶಾದ್ಯಂತ ಯುವ ಸಮುದಾಯ ಸಂಘಟನೆಯ ಕಾರ್ಯಗಳನ್ನು ಗಮನಿಸಿ ಕೈಜೊಡಿಸುತ್ತಿದ್ದು , ಕಡಿಮೆ ಅವಧಿಯಲ್ಲಿ ದೇಶದ 24 ರಾಜ್ಯಗಳಲ್ಲಿ ತನ್ನ ರಾಜ್ಯ ಘಟಕಗಳನ್ನು ಹೊಂದಿರುವುದು ಮಹತ್ತರವಾದ ಮೈಲುಗಲ್ಲಾಗಿದ್ದು ದೇಶದ ಅಷ್ಟದಿಕ್ಕುಗಳಿಗೂ ಸಂಘಟನೆಯ ಉದ್ದೇಶಗಳನ್ನು ಮುಟ್ಟಿಸುವ ಕೆಲಸ ನಮ್ಮೆಲ್ಲರ ಮೇಲಿದೆ ಈ ಕೆಲಸದಲ್ಲಿ ನಮ್ಮ‌ ಜೊತೆ ಕೈಜೋಡಿಸಿ ನವಭಾರತದ ಕನಸನ್ನು ಸಾಕಾರಗೊಳಿಸಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷರಾಗಿರುವ
ದೊಡ್ಮನೆ ಹುಸೈನ್ ಪೀರ್,
ಹಿರಾಳ್ ಗ್ರಾಮದ ಮುತವಲ್ಲಿ ಶರೀಫ್ ಸಾಹೇಬ್, ಇಮಾಂ ಹುಸೈನ್ ಸಾಹೇಬ್ , ಇಬ್ರಾಹೀಂ , ಹಿರಾಳ್ ಗ್ರಾಮ ಘಟಕದ ನಿಯೋಜಿತ ಅಧ್ಯಕ್ಷರಾಗಿರುವ ಅಮೀನುದ್ದೀನ್ , ಮುಜಾವರ್ ಖಾಸಿಂ ಪೀರ್ ಮುಂತಾದವರು ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here