ಮಕ್ಕಳು ತಿನ್ನುವ ಮೊಟ್ಟೆ/ಬಾಳೆಹಣ್ಣಿಗೆ ಕನ್ನ ಹಾಕುತ್ತಿರುವ ಪುಣ್ಯಾತ್ಮರು.!!

0
306

ಸಂಡೂರು:ಪೆ:22:-ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಎಲ್ಲಾ ಶಾಲೆಗಳಿಗೆ ಇತ್ತೀಚಿಗೆ ಸರ್ಕಾರವು ಅಪೌಷ್ಟಿಕತೆಯಿಂದ ನರಳುತ್ತಿರುವ ಶಾಲಾ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ವಾರದಲ್ಲಿ ಮೂರು ದಿನ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ,ಬಾಳೆಹಣ್ಣು ನೀಡಲು ಅದೇಶಿಸಿದ್ದು ಅದು ಆಚರಣೆಗೂ ಸಹ ಬಂದಿದೆ

ಅಪೌಷ್ಟಿಕತೆ ನಿವಾರಣೆಗಾಗಿ ಏಳು ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ವಿತರಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು.

ಸಂಡೂರು ತಾಲೂಕಿನ ಬಂಡ್ರಿ ಗ್ರಾಮದ ಕೆಪಿಎಸ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲದಿನಗಳಿಂದ ಸೋಮವಾರದ ದಿನದಂದು ಮೊಟ್ಟೆಯನ್ನು ತಿನ್ನುವವರಿಗೆ ಮೊಟ್ಟೆಯನ್ನು ನೀಡದೇ, ಬಲವಂತದಿಂದ ಒಂದೇ ಒಂದು ಬಾಳೆಹಣ್ಣನ್ನು ಕೊಡುತ್ತಿದ್ದಾರೆ,ಮಕ್ಕಳು ಹಾಗೂ ಪೋಷಕರು ನಮ್ಮ ಪತ್ರಿಕೆಗೆ ದೂರು ನೀಡಿದ್ದು, ಮಕ್ಕಳು ತರಗತಿಯ ಶಿಕ್ಷಕರಿಗೆ ಸಾರ್ ನಮಗೆ ಮೊಟ್ಟೆ ಕೊಡಿ ಅಂದ್ರೆ ಅದೆಲ್ಲಾ ನಮಗೆ ಗೊತ್ತಿಲ್ಲಾ ನಾವು ಕೊಟ್ಟಿದ್ದನ್ನಾ ನೀವು ತಿನ್ನಬೇಕು ಮೊಟ್ಟೆ ಬೇಕು ಅಂದ್ರೆ ಹೆಡ್ ಮಾಸ್ಟರ್ ರನ್ನು ಕೇಳಿ ಎಂದು ಗದರಿಸುತ್ತಾರಂತೆ,

ಕೆಪಿಎಸ್ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಎಂ.ಡಿ.ನಾಗೇಶ್ ಅವರನ್ನು ಮಕ್ಕಳು ಕೇಳಿದರೆ, ಮೊಟ್ಟೆ ಸಿಗ್ತಾಇಲ್ಲ,ಇವತ್ತು ಸೋಮವಾರ ಬಂಡ್ರಿ ಬಸವಣ್ಣನ ವಾರ ನೀವು ಮೊಟ್ಟೆ ತಿನ್ನಬಾರದು ಅಂತಾ ಗದರಿಸುತ್ತಾರಂತೆ, “ಅಂದರಿಕಿ ಮಂಚಿವಾಳು ಬಿಇಓ” ಡಾ.ಐ.ಅರ್.ಅಕ್ಕಿ, ಹಾಗೂ ಅಕ್ಷರ ದಾಸೋಹದ ಅಧಿಕಾರಿ ತಿಪ್ಪೇಸ್ವಾಮಿ ಅವರು ಬಂಡ್ರಿ ಕೆಪಿಎಸ್ ಶಾಲೆ ಖುದ್ದು ಭೇಟಿ ನೀಡಿ ಮಕ್ಕಳನ್ನು ವಿಚಾರಿಸಿ ಸಂಬಂದಪಟ್ಟ ಪ್ರಾಂಶುಪಾಲರು, ಹೆಡ್ ಮಾಸ್ಟರ್ ಗಳ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಿ.

ಸರಕಾರದಿಂದ ಪ್ರತಿ ವಿದ್ಯಾರ್ಥಿಗೆ 6 ರೂ. ಖರ್ಚು:

ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್- ಮಧ್ಯಾಹ್ನದ ಉಪಹಾರದ ಯೋಜನೆಯಡಿ ಕೇಂದ್ರ ಸರ್ಕಾರ ಶೇ.60ರಷ್ಟು ಮತ್ತು ರಾಜ್ಯ ಸರ್ಕಾರ ಶೇ.40ರಷ್ಟು ಅನುದಾನ ಹಂಚಿಕೆಯಡಿ ಈ ಯೋಜನೆ ರೂಪಿಸಲಾಗಿದೆ. ಪ್ರತಿ ವಿದ್ಯಾರ್ಥಿಯ ಒಂದು ಮೊಟ್ಟೆಯ ವೆಚ್ಚ 6 ರೂ. ಎಂದು ನಿಗದಿ ಮಾಡಲಾಗಿದೆ. ಅದೇ ರೀತಿ ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ 6 ರೂ. ಮೀರದಂತೆ ಒಂದು ಅಥವಾ ಎರಡು ಬಾಳೆಹಣ್ಣು ನೀಡಬೇಕು ಎಂದು ಸೂಚಿಸಲಾಗಿದೆ. ಇದಕ್ಕಾಗಿ 39.86 ಕೋಟಿ ರೂ. ಅನುದಾನ ಮೀಸಲಿಡಲಾಗಿದ್ದು, ಅದನ್ನು ಈ ಏಳು ಜಿಲ್ಲೆಗಳಿಗೆ ವಿದ್ಯಾರ್ಥಿ ಸಂಖ್ಯೆಗೆ ಅನುಗುಣವಾಗಿ ವಿಂಗಡಿಸಿ ಜಿಲ್ಲಾವಾರು ಬಿಡುಗಡೆ ಮಾಡಲಾಗಿದೆ.

ಒಂದು ವಾರಕ್ಕೆ ಬೇಕಾಗುವಷ್ಟು ಅಗತ್ಯ ಪ್ರಮಾಣದಲ್ಲಿ ಮೊಟ್ಟೆ ಮತ್ತು ಬಾಳೆ ಹಣ್ಣು ಖರೀದಿಸಿಟ್ಟುಕೊಳ್ಳಬೇಕು. ಪ್ರತಿ ತಿಂಗಳ ವೇಳಾಪಟ್ಟಿಯಂತೆ ಮೊಟ್ಟೆ ವಿತರಿಸುವಾಗ ಸ್ಥಳೀಯ ಜನರ ಆಹಾರ ಪದ್ಧತಿಯಂತೆ ವಾರದಲ್ಲಿ ಮೊಟ್ಟೆ ವಿತರಿಸುವ ದಿನಗಳನ್ನು ನಿಗದಿಪಡಿಸಿ ಬಿಸಿಯೂಟದ ಜೊತೆಗೆ ಬೇಯಿಸಿ, ಸಿಪ್ಪೆ ಸುಲಿದ ಮೊಟ್ಟೆ ನೀಡಬೇಕು ಎಂದು ಸೂಚಿಸಲಾಗಿದೆ.

ಮೊಟ್ಟೆ ವಿತರಿಸುವ ಮೊದಲು ವಿದ್ಯಾರ್ಥಿಗಳು ಮತ್ತು ಪೋಷಕರ ಅಭಿಪ್ರಾಯ ಪಡೆಯಬೇಕು. ಮೊಟ್ಟೆ ತಿನ್ನುವ ಬಗ್ಗೆ ಅವರಿಂದ ಒಪ್ಪಿಗೆ ಪಡೆದುಕೊಳ್ಳಬೇಕು. ಮೊಟ್ಟೆ ತಿನ್ನುವುದಿಲ್ಲ ಎಂದಾಗ ಮಾತ್ರ ಅವರಿಗೆ ಬಾಳೆಹಣ್ಣು ವಿತರಿಸಬೇಕು. ಈ ಕುರಿತು ಪ್ರತ್ಯೇಕವಾಗಿ ದಾಖಲೆ ನಿರ್ವಹಿಸಬೇಕು ಎಂದು ಶಿಕ್ಷಕರಿಗೆ ಮಾಹಿತಿ ನೀಡಲಾಗಿದೆ.

ಆದರೆ ಇಲ್ಲಿ ಪೋಷಕರ ಅಭಿಪ್ರಾಯವನ್ನು ತೆಗೆದುಕೊಳ್ಳದೇ, ಒಪ್ಪಿಗೆಯನ್ನು ಪಡೆದುಕೊಳ್ಳದೇ ಎಕಾಏಕಿ ಪ್ರಬಾರಿ ಹೆಡ್ ಮಾಸ್ಟರ್ ಅಂತಿಮವಾಗಿ ನಿರ್ದಾರ ತೆಗೆದುಕೊಳ್ಳುವ ಅಧಿಕಾರವನ್ನು ನೀಡಿದವರ್ಯಾರು..? ಇನ್ನು ಬಾಳೆಹಣ್ಣನ್ನು ತಿನ್ನುವ ಮಕ್ಕಳಿಗೆ ಸ್ಥಳೀಯವಾಗಿ ಯಾವ ಬೆಲೆಗೆ ಬಾಳೆಹಣ್ಣು ಸಿಗುತ್ತಾವೋ ಅದೇ ರೀತಿಯಾಗಿ 6 ರೂಪಾಯಿಗೆ ಎಷ್ಟು ಬಾಳೆಹಣ್ಣು ಬರುತ್ತಾವೋ ಅಷ್ಟು ಬಾಳೆಹಣ್ಣನ್ನು ಮಕ್ಕಳಿಗೆ ನೀಡಿರಿ, 2 ರಿಂದ 3 ರೂಪಾಯಿಗೆ ಒಂದರಂತೆ ಬಾಳೆಹಣ್ಣು ಸಿಗುತ್ತಿವೆ ಹಾಗಾಗಿ ಒಬ್ಬರಿಗೆ 2 ಬಾಳೆಹಣ್ಣನ್ನು ನೀಡದೇ ಇನ್ನುಳಿದ ಪ್ರತಿಯೊಬ್ಬ ಮಗುವಿನ 3 ರೂಪಾಯಿಯನ್ನು ಯಾವ ಪುರುಷಾರ್ಥಕ್ಕಾಗಿ ತಿನ್ನಲು ಹೊಂಚು ಹಾಕುತ್ತಿದ್ದೀರಾ.. ನೋಡಿ ಮಕ್ಕಳ ತಿನ್ನುವ ಅನ್ನಕ್ಕೆ ಕನ್ನಾ ಹಾಕಿದವರಾರು ಉದ್ದಾರವಾಗಿಲ್ಲ, ಅವರಷ್ಟು ದೊಡ್ಡ ಖದೀಮರು ಮತ್ಯಾರು ಇಲ್ಲ.

ಸಂಡೂರು ತಾಲೂಕಿನ ಬೇರೆ ಬೇರೆ ಊರಿನ ಶಾಲೆಗಳಲ್ಲಿ ಮಕ್ಕಳಿಗೆ ಯಾವುದೇ ತಾರತಮ್ಯ ಮಾಡದೇ ಮೊಟ್ಟೆ ತಿನ್ನುವ ಮಕ್ಕಳಿಗೆ ಮೊಟ್ಟೆ ಬಾಳೆಹಣ್ಣು ತಿನ್ನುವ ಮಕ್ಕಳಿಗೆ 2 ಬಾಳೆಹಣ್ಣನ್ನು ನೀಡುತ್ತಿರುವಾಗ ಬಂಡ್ರಿ ಕೆಪಿಎಸ್ ಶಾಲೆಯ ಮಕ್ಕಳಿಗೇಕೆ ಅನ್ಯಾಯ ಮತ್ತು ತಾರತಮ್ಯಬಿಸಿಯೂಟ ಯೋಜನಾಧಿಕಾರಿ ತಿಪ್ಪೇಸ್ವಾಮಿಯವರೇ ತಾವುಗಳು ತಾಲ್ಲೂಕು ಕೇಂದ್ರದ ಬಿಸಿಯೂಟದ ಆಫೀಸ್ ನಲ್ಲಿ ಕುಳಿತುಕೊಂಡು SATS ನಲ್ಲಿನ ಅಂಕಿ ಅಂಶಗಳನ್ನು ನೋಡಿಕೊಂಡು ಎಲ್ಲವೂ ಸರಿಯಾಗಿದೆ ಎಂದು ತಿಳಿದುಕೊಳ್ಳುವುದು ತಪ್ಪು, ಮಕ್ಕಳ ಅನ್ನದ ಹಕ್ಕಿನ ಬಗ್ಗೆ ತಾತ್ಸಾರ-ಬೇಜವಾಬ್ದಾರಿತನ ಮಾಡಬೇಡಿ ಖುದ್ದು ಶಾಲೆಗೆ ಹೋಗಿ ಮಕ್ಕಳನ್ನು ವಿಚಾರಿಸಿ ಜೊತೆಗೆ ಪೋಷಕರನ್ನು ವಿಚಾರಣೆ ಮಾಡಿ.

ಕೆಲ ದಿನಗಳ ಹಿಂದೆ ತಾಲೂಕು ಮಟ್ಟದ ಅಧಿಕಾರಿಗಳ ಜೊತೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಕೆಪಿಎಸ್ ಶಾಲೆಗೆ ಭೇಟಿನೀಡಿದಾಗ ಕೊಳೆತ ಮುಗ್ಗುಲು ವಾಸನೆ ಹಾಗೂ ಹುಳಗಳುಳ್ಳ ಅಕ್ಕಿ-ಗೋದಿ ಕಣ್ಣಾರೆ ಕಂಡು ಏನು ಕ್ರಮ ತೆಗೆದುಕೊಳ್ಳದೇ ಇರುವುದು ಸಾರ್ವಜನಿಕರಲ್ಲಿ ಇಂದಿಗೂ ಸಹ ಅನುಮಾನಕ್ಕೆ ಅಸ್ಪದ ಮಾಡಿಕೊಟ್ಟಂತಾಗಿದೆ.
ದಿನದ ಶಾಲಾ ಅವಧಿಯಲ್ಲಿ ಕೆಪಿಎಸ್ ಶಾಲೆಯ ಪ್ರಭಾರಿ ಪ್ರಾಂಶುಪಾಲ, ಸಹಿಪ್ರಾ ಶಾಲೆ ಹಾಗೂ ಪ್ರೌಢ ಶಾಲೆಯ ಹೆಡ್ ಮಾಸ್ಟರ್ ರಾಜಕೀಯ ಮಾಡುತ್ತಾ ಕಾಲಹರಣ ಮಾಡಿ ಊರಿಗೆ ಹೋದರೆ ಮುಗಿಯಿತು, ಸಹಿಪ್ರಾ ಶಾಲೆಯ ಹೆಡ್ ಮಾಸ್ಟರ್ ಗೆ ಯಾರಾದರೂ ಪೋಷಕರಾಗಲಿ ಮಕ್ಕಳಾಗಲಿ ಫೋನ್ ಕಾಲ್ ಮಾಡಿದ್ರೆ ರಿಸೀವ್ ಮಾಡೋದೋ ಇಲ್ಲ, ಪುಣ್ಯಾತ್ಮ..!? ಮತ್ತೆ ಮರುದಿನ ಇವರನ್ನು ಶಾಲೆಯಲ್ಲಿ ಭೇಟಿಯಾಗಿ ಮಾತನಾಡಿ ಕಳೆದ ದಿನದ ಫೋನ್ ಮಾಡಿದ ವಿಷಯ ಹೇಳಬೇಕು ಅಷ್ಟೊಂದು ಬೇಜವಾಬ್ದಾರಿ ಮತ್ತು ಅಹಂ ಮನುಷ್ಯ, ಈ ಹೆಡ್ ಮಾಸ್ಟರ್

LEAVE A REPLY

Please enter your comment!
Please enter your name here