ಆಯುಷ್ಮಾನ್ ಭವ ಮೇಳದ ಸದುಪಯೋಗ ಪಡೆದುಕೊಳ್ಳಲು; ಆಡಳಿತ ವೈದ್ಯಾಧಿಕಾರಿ ಡಾ. ಗೋಪಾಲ್ ರಾವ್,

0
216

ಸಂಡೂರು: ಸೆ: 26: ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ “ಆಯುಷ್ಮಾನ್ ಭವ ಆಂದೋಲನ”ದ ಅಂಗವಾಗಿ ಸಮುದಾಯ ಅರೋಗ್ಯ ಕೇಂದ್ರ ಮಟ್ಟದ ಆರೋಗ್ಯ ಮೇಳ ಆಯೋಜಿಸಲಾಗಿತ್ತು, ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಆಡಳಿತ ವೈದ್ಯಾಧಿಕಾರಿ ಡಾ. ಗೋಪಾಲ್ ರಾವ್ ಅವರು ಮಾತನಾಡಿ ಡಿಸೆಂಬರ್ ಅಂತ್ಯದ ವರೆಗೆ ಆರೋಗ್ಯ ಮೇಳಗಳನ್ನು ಪ್ರತಿ ಮಂಗಳವಾರ ಆಯೋಜಿಸಲಾಗುವುದು, ನಮ್ಮ ಕೇಂದ್ರದ ತಜ್ಞ ವೈದ್ಯರೊಂದಿಗೆ ವಿಮ್ಸ್‌ನ ತಜ್ಞ ವೈದ್ಯರು ಸಹ ಇಲ್ಲಿಗೆ ಆಗಮಿಸಲಿದ್ದು ಇಲ್ಲೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಿವರು, ಉನ್ನತ ಮಟ್ಟದ ಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ಮೇಲ್ದರ್ಜೆ ಆಸ್ಪತ್ರೆಗೆ ರೆಫರ್ ಮಾಡುವರು, ಪ್ರತಿ ಮಂಗಳವಾರ ಮೇಳಗಳ ಸದುಪಯೋಗ ಪಡೆದು ಕೊಳ್ಳುವಂತೆ ತಿಳಿಸಿ, ಮುಂದಿನ ಮಂಗಳವಾರ ಬೃಹತ್ ಮೇಳ ಇರಲಿದೆ ಎಂದು ತಿಳಿಸಿದರು,

ನಂತರ ಅರವಳಿಕೆ ತಜ್ಞರಾದ ಡಾ.ಸಲೀಮ್, ಪ್ರಸೂತಿ ತಜ್ಞರಾದ ಡಾ.ರಜಿಯಾ ಬೇಗಂ,ಮಕ್ಕಳ ತಜ್ಞರಾದ ಮಣಿಕುಮಾರ್, ದಂತ ಆರೋಗ್ಯಾಧಿಕಾರಿಗಳಾದ ಡಾ.ಸಾದಿಯಾ ಅವರು ತಮಗೆ ವಹಿಸಿಕೊಟ್ಟ ಮೇಳದ ಗುರಿ ಮತ್ತು ಸಾಧನೆ ಕುರಿತು ಮಾತನಾಡಿದರು,

ಈ ಕಾರ್ಯಕ್ರಮವನ್ನು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ನಡೆಸಿಕೊಟ್ಟು,ಆರೋಗ್ಯ ಮೇಳ ನಡೆಸುವುದರೊಂದಿಗೆ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಕಾರ್ಡ್‌ಗಳನ್ನು ಸೃಜಿಸಿ ಕೊಡಲಾಗುವುದು, ಅಂಗಾಂಗ ದಾನ ನೊಂದಣಿ ಮಾಡಲಾಗುವುದು, ಹಾಗೆ ಸಂಘ ಸಂಸ್ಥೆಗಳ ಸಹಕಾರ ದೊಂದಿಗೆ ರಕ್ತದಾನ ಶಿಬಿರ ನಡೆಸುವುದು, ಕ್ಷಯ, ಕುಷ್ಠ ಪತ್ತೆ ಹಚ್ಚುವ ಕಾರ್ಯವನ್ನು ಮಾಡಲಾಗುತ್ತಿದೆ, ಹಾಗೂ ಗ್ರಾಮ ಮಟ್ಟದಲ್ಲಿ ಆರೋಗ್ಯ ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುವುದು, ಎಲ್ಲರೂ ಭಾಗವಹಿಸಿ ನಮ್ಮೊಂದಿಗೆ ಕೈಜೋಡಿಸಿ ನಮ್ಮ ನಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳೋಣ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕಛೇರಿಯ ಅಧಿಕ್ಷಕ ಹರ್ಷ, ಆಪ್ತ ಸಮಾಲೋಚಕ ಪ್ರಶಾಂತ್, ಪ್ರಯೋಗ ಶಾಲಾ ತಜ್ಞ ವೆಂಕಟೇಶ್, ಮಂಜುನಾಥ್, ಹಾಗೂ ಇಲಾಖೆಯ ವಿವಿಧ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಹಾಜರಿದ್ದರು.

LEAVE A REPLY

Please enter your comment!
Please enter your name here