ಶೂನ್ಯ ಮಲೇರಿಯಾ ಹಂತ ತಲುಪಲು ಕಾರ್ಯತಂತ್ರ ಅಳವಡಿಕೆ : ಆಡಳಿತ ವೈದ್ಯಾಧಿಕಾರಿ ಡಾ.ಸಾದಿಯ,

0
408

ಸಂಡೂರು:ಜೂ:26:- ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ” ಮಲೇರಿಯಾ ವಿರೋಧಿ ಮಾಸಾಚರಣೆ -2023″ ರ ಅಂಗವಾಗಿ ಆಯೋಜಿಸಲಾದ ಸಮುದಾಯ ಮಟ್ಟದ ಕಾರ್ಯಕ್ರಮದಲ್ಲಿ ಡಾ.ಸಾದಿಯ ಅವರು ಮಾತನಾಡಿ 2027 ರ ವೇಳೆಗೆ ಶೂನ್ಯ ಮಲೇರಿಯಾ ಪ್ರಕರಣವಾಗುವಂತೆ ನೋಡಿಕೊಳ್ಳುವುದು ಹಾಗೇ 2030 ಕ್ಕೆ ಮಲೇರಿಯಾ ನಿರ್ಮೂಲನೆ ರಾಷ್ಟ್ರ ರೂಪಿಸಲು ಎಲ್ಲಾ ಕಾರ್ಯತಂತ್ರಗಳನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಲಾಗುವುದು, ನಮ್ಮ ಕ್ಷೇತ್ರದಲ್ಲಿ ಯಾವುದೇ ಮಲೇರಿಯಾ ಪ್ರಕರಣ ವರದಿ ಯಾಗಿಲ್ಲದಿದ್ದರೂ, ಇತರೆ ಬಿಹಾರ ಮತ್ತು ಯು.ಪಿ ರಾಜ್ಯದ ಎರಡು ಪ್ರಕರಣಗಳು ವರದಿಯಾಗಿದ್ದು, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಮಳೆಗಾಲ ಪ್ರಾರಂಭದ ಮುಂಚೆ ಮಲೇರಿಯಾ ವಿರೋಧಿ ಮಾಸ ಆಚರಿಸಿ, ಮುಂದಿನ ದಿನಗಳು ಮಲೇರಿಯಾ ನಿಯಂತ್ರಣ ಸಾಧಿಸಲು ಕ್ಷೇತ್ರ ಮಟ್ಟದಲ್ಲಿ ಸಕ್ರಿಯವಾಗಿ ರಕ್ತ ಲೇಪನಗಳ ಮಾದರಿ ಸಂಗ್ರಹಣೆ ಮತ್ತು ಪರೀಕ್ಷೆಗಳು ನಿಯಮಿತವಾಗಿ ನಡೆಯುವಂತೆ ನೋಡಿ ಕೊಳ್ಳುವುದು, ಮಲೇರಿಯಾ ರೋಗದ ಲಕ್ಷಣಗಳು, ಪರೀಕ್ಷೆ ಮತ್ತು ಚಿಕಿತ್ಸೆ ವಿಧಾನಗಳ ಕುರಿತು ಶಾಲೆಯ ಮಕ್ಕಳಿಗೆ, ಸಾರ್ವಜನಿಕರಿಗೆ ಗುಂಪು ಸಭೆಗಳ ಮೂಲಕ ಜಾಗೃತಿಯನ್ನು ಮೂಡಿಸುವುದು, ಪತ್ರಿಕಾ ಮಾಧ್ಯಮದ ಮೂಲಕವೂ ಸಹ ವರದಿ ಮತ್ತು ಲೇಖನಗಳು ಪ್ರಕಟವಾಗುವಂತೆ ನೋಡಿಕೊಳ್ಳುವುದು, ಮತ್ತು ಅಂತರ ಇಲಾಖೆಗಳಾದ ಸಮಾಜ ಕಲ್ಯಾಣ, ಕೃಷಿ, ತೋಟಗಾರಿಕೆ,ಅರಣ್ಯ ಇಲಾಖೆ, ಗ್ರಾಮ ಪಂಚಾಯತ್,ಪುರಸಭೆಯ ಸಹಕಾರದಲ್ಲಿ ಸೊಳ್ಳೆಗಳ ನಿಯಂತ್ರಣ ಕ್ರಮಗಳ ಕುರಿತು ಕಾರ್ಯ ನಿರ್ವಹಣೆಯ ಕ್ರಮಗಳನ್ನು ಅನುಸರಿಸುತ್ತಾ ಮಲೇರಿಯಾ ನಿರ್ಮೂಲನೆ ಮಾಡಲು ಪ್ರಯತ್ನ ಮಾಡುವುದು, ಯಾವುದೇ ಜ್ವರ ವಿರಲಿ ರಕ್ತ ಪರೀಕ್ಷೆಗೆ ಒಳಗಾದಾಗ ಮಲೇರಿಯಾವನ್ನು ನಿಯಂತ್ರಣ ಸಾಧಿಸಲು ಸಾಧ್ಯವಿದೆ, ಎಲ್ಲಾ ಇಲಾಖೆಗಳು ಮತ್ತು ಸಾರ್ವಜನಿಕರು ಇಲಾಖೆಯೊಂದಿಗೆ ಕೈಜೋಡಿಸಬೇಕಿದೆ ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಕೆ.ಮಂಜುನಾಥ್ ಅವರು ಉದ್ಘಾಟಿಸಿ ಮಾತನಾಡಿ ಸೊಳ್ಳೆಗಳ ನಿಯಂತ್ರಣಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು, ಈ ಸಂದರ್ಭದಲ್ಲಿ ಸಿಬ್ಬಂದಿ ರೋಜಾ ಮತ್ತು ನಾಗರತ್ನ ಅವರು ತಯಾರಿಸಿದ ಮಲೇರಿಯಾ ಕುರಿತು ಸ್ತಬ್ಧ ಚಿತ್ರವನ್ನು ಗಣ್ಯರು ಅನಾವರಣಗೊಳಿಸಿದರು,

ಕಾರ್ಯಕ್ರಮವನ್ನು ಆರ್.ಕೆ.ಎಸ್.ಕೆ ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್ ನಡೆಸಿಕೊಟ್ಟರು, ಆಶಾ ವಿಜಯಲಕ್ಷ್ಮಿ ಪ್ರಾರ್ಥನೆ ಹೇಳಿದರು, ಎನ್.ಸಿ.ಡಿ ಆಪ್ತ ಸಮಾಲೋಚಕ ಯಂಕಪ್ಪ ವಂದಿಸಿದರು,

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಮೊಹಮ್ಮದ್ ಖಾಸಿಂ, ಡಾ.ಪ್ರಿಯಾಂಕಾ, ಎಮ್.ಟಿ.ಎಸ್ ಸಾಗರ್ ಕುಮಾರ್, ತಾಲೂಕಿನ ಮಲೇರಿಯಾ ಮೇಲ್ವಿಚಾರಣ ತಂತ್ರಜ್ಞ ವೆಂಕಟೇಶ್, ಹೆಚ್.ಐ.ಒ ಬಸವರಾಜ, ನಿಜಾಮುದ್ದೀನ್, ಪಿ.ಹೆಚ್.ಸಿ.ಒ ಭಾಗ್ಯಲಕ್ಷ್ಮಿ, ರಾಜೇಶ್ವರಿ, ಇಮ್ರಾನ್, ಆಶಾ ಕಾರ್ಯಕರ್ತೆ ಶ್ರೀದೇವಿ,ವಿಜಯಶಾಂತಿ, ಆಶಾ,ಹುಲಿಗೆಮ್ಮ, ಹನುಮಂತಮ್ಮ, ಮೇಘನಾ,ಎರ್ರಮ್ಮ, ಸಾವಿತ್ರಿ, ಶಿವಲೀಲ, ಮಂಜುಳಾ,ಪದ್ಮಾ, ಪಕ್ಕೀರಮ್ಮ,ಭಾಗ್ಯ, ಲಕ್ಷ್ಮಿ, ಅನಸೂಯಾ, ತಿಮ್ಮಕ್ಕ, ಭಾರತಿ, ನೀಲಮ್ಮ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here