ಬಿಜೆಪಿ ಹಿರಿಯ ನಾಯಕಿ ಮತ್ತು ಟಿಕೇಟ್ ಆಕಾಂಕ್ಷಿ ಪುಷ್ಪಾಂಜಲಿ ಗುನ್ನಾಳ್ ಹಾಗೂ ಅನೇಕ ಬಿಜೆಪಿ ಮುಖಂಡರು ಕಾಂಗ್ರೇಸ್ ಸೇರ್ಪಡೆ.

0
85

ಗಂಗಾವತಿ: ಬಿಜೆಪಿಯ ಕಟ್ಟಾಳು,ಬಿಜೆಪಿ ಹಿರಿಯ ನಾಯಕಿ, ಕನಕಗಿರಿ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದ ಪುಷ್ಪಾಂಜಲಿ ಗುನ್ನಾಳ್ ಅವರು ಮತ್ತು ಅನೇಕ‌ ಬಿಜೆಪಿ ಮುಖಂಡರು, ಶಾಸಕ ಪರಣ್ಣ ಮುನವಳ್ಳಿ ಅವರ ದುರಾಡಳಿತ ಹಾಗೂ ಬ್ರಷ್ಟಚಾರ ಖಂಡಿಸಿ ಮತ್ತು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಅಧಿಕಾರ ಅವಧಿಯ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಸೇರಿದರು.

ಮಂಗಳವಾರ ಗಂಗಾವತಿ‌ನಗರದಲ್ಲಿ ಏರ್ಪಡಿಸಿದ್ದ ಕಾಂಗ್ರೇಸ್ ಪಕ್ಷದ ಬೃಹತ್ ಸಮಾವೇಶದಲ್ಲಿ ಬಿಜೆಪಿ‌ಪಕ್ಷದ ಹಿರಿಯ ನಾಯಕಿ ಪುಷ್ಪಾಂಜಲಿ ಗುನ್ನಾಳ್ ಅವರು ಮತ್ತು ಅವರ ನೂರಾರು ಬೆಂಬಲಿಗರು ಕಾಂಗ್ರೇಸ್ ಪಕ್ಷ ಸೇರಿದರು.

ಕಳೆದ ಹದಿನೇಳು ವರ್ಷಗಳಿಂದ ಬಿಜೆಪಿ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದು, ವಿವಿಧ ಸ್ಥರದಲ್ಲಿ ಪದಾಧಿಕಾರಿಯಾಗಿ ಪಕ್ಷದ ಸಂಘಟನೆಗೆ ಸಾಕಷ್ಟು ಶ್ರಮಿಸುವುದರ ಜೊತೆಗೆ, ಕಳೆದ ಎರೆಡು ವರ್ಷಗಳಿಂದ ಕನಕಗಿರಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿ ಕ್ಷೇತ್ರದಾದ್ಯಂತ ಓಡಾಟ ಮಾಡಿದ್ದ ಪುಷ್ಪಾಂಜಲಿ ಗುನ್ನಾಳ್ ಹಾಗೂ ಬಿಜೆಪಿಯ ಅನೇಕ ಮುಖಂಡರು ಶಾಸಕ ಪರಣ್ಣ ಮುನವಳ್ಳಿ ಹಾಗೂ ಕೆಲ ಬಿಜೆಪಿಯ ಹಿರಿ ಮುಖಂಡರು ನಿಷ್ಠಾವಂತ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಿರುವುದನ್ನು ಖಂಡಿಸಿ ಮತ್ತು ಇವರುಗಳು ಕ್ಷೇತ್ರದಲ್ಲಿ ಮಾಡುತ್ತಿರುವ ಭ್ರಷ್ಟಾಚಾರ, ದುರಾಡಳಿತ, ಗೂಂಡಾಗಿರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರಿಂದಾಗಿ ಕ್ಷೇತ್ರದ ಜನಮಾನಸದಲ್ಲಿ ಅಸಮಾಧಾನ ಹೆಚ್ಚಾಗಿದ್ದರಿಂದ ಬೇಸತ್ತು ಹಾಗೂ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಅಧಿಕಾರದಲ್ಲಿದ್ದಾಗ ಗಂಗಾವತಿ ಕ್ಷೇತ್ರದಾದ್ಯಂತ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದನ್ನು ಮತ್ತು ಕ್ಷೇತ್ರದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಮೂಲಕ ಅತ್ಯತ್ತಮವಾಗಿ ಆಡಳಿತ ನೆಡೆಸಿರುವದನ್ನು ಮನಗೊಂಡು ನಾವು ಇಂದು ಇಕ್ಬಾಲ್ ಅನ್ಸಾರಿ ಅವರನ್ನು ಬೆಂಬಲಿಸಿ, ಕಾಂಗ್ರೆಸ್ ಪಕ್ಷ ಸೇರುವುದರ ಜೊತೆಗೆ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಲು ಪಣತೊಟ್ಟಿದ್ದೇವೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಇದೇ ವೇಳೆ ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ, ಬಸವರಾಜ್ ರಾಯರೆಡ್ಡಿ, ಕಾಂಗ್ರೇಸ್ ಜಿಲ್ಲಾಧ್ಯಕ್ಷ ಶಿವರಾಜ್ ಎಸ್ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ್, ಮಾಜಿ ಸಂಸದ ಎಸ್.ಶಿವರಾಮಗೌಡ, ನಗರ ಸಭೆಯ ಮಾಜಿ ಅಧ್ಯಕ್ಷ ಶಾಮೀದ್ ಮನಿಯಾರ್, ಸದ್ಯರಾದ ಮನೋಹರಸ್ವಾಮಿ ಮುದೇನೂರ್, ಮುಖಂಡರಾದ ಲಲಿತಾರಾಣಿ ಶ್ರೀರಂಗದೇವರಾಲು, ಯಮನೂರಪ್ಪ ನೆವಣಕ್ಕಿ, ಎಸ್.ಬಿ ಖಾದ್ರಿ, ಸುನಿತಾ ಶ್ಯಾವಿ, ರಾಮಣ್ಣ ನಾಯಕ್, ವಿಶ್ವನಾಥ ಕೇಸರಹಟ್ಟಿ ಸೇರಿದಂತ ಹಲವರು ಇದ್ದರು.

LEAVE A REPLY

Please enter your comment!
Please enter your name here