ಮಕ್ಕಳ ಅದ್ದೂರಿ ಸ್ವಾಗತಕ್ಕೆ ಸಿದ್ದರಾಗಿ; ಬಿಇಓ ಡಾ.ಐ.ಅರ್. ಅಕ್ಕಿ

0
17

ಸಂಡೂರು:ಮೇ: 30: 2024-25ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದು 29.085.2024 ರ ಪ್ರತಿ ಸುತ್ತೋಲೆ ಜ್ಞಾಪಕಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಮುದ್ರಿಸಿ ಕಡತಗೊಳಿಸಿ ಅಧ್ಯಾಯನ ಮಾಡಿ ಶಿಕ್ಷಕರೆಲ್ಲಾರಿಗೂ ಅವುಗಳ ಅಧ್ಯಾಪನ ನಡೆಸಿ ಅವುಗಳ ಅನುಷ್ಠಾನಕ್ಕೆ ಶಾಲಾ ಹಂತದಲ್ಲಿ ಸೂಕ್ತ ಕ್ರಿಯಾ ಯೋಜನೆಯನ್ನು ಹಾಗೂ ಕಾರ್ಯ ಹಂಚಿಕೆ ಮಾಡುವುದು ಪ್ರಮುಖ ಗುರಿಯಾಗಿದೆ. ಶಾಲೆಯ ಬೌದ್ಧಿಕ ಪರಿಸರ ಒಳ-ಹೊರ ವಾತಾವರಣಗಳನ್ನು ಸ್ವಚ್ಚ ಶುಭ್ರ ಆಕರ್ಷಕವಾಗಿಟ್ಟುಕೊಳ್ಳಲು ಕಾರ್ಯಪ್ರವೃತ್ತರಾಗಲು ಈಗಾಗಲೇ ಶಿಕ್ಷಕರಿಗೆ ಮಾಹಿತಿ ನೀಡಲಾಗಿದೆ.

ಶಾಲೆಯ ಕೊಠಡಿಯ ಧೂಳು ಜೇಡ ತ್ಯಾಜ್ಯದ ಅನುಪಯುಕ್ತ ವಸ್ತು ಮುಕ್ತವಾಗಿರುವಂತೆ ವ್ಯವಸ್ಥೆಗೊಳಿಸಲು ಶಾಲೆಯ ಅನುಪಯುಕ್ತ ಎಲ್ಲಾ ವಸ್ತುಗಳನ್ನು ಇಲಾಖೆಯ ನಿಯಮಾನುಸಾರ ವಿಲೇವಾರಿ ಮಾಡಿ ಬಂದ ನಿರ್ವಹಣೆಯನ್ನು ಸೂಕ್ತ ಮಾಡುವುದು ಶಿಕ್ಷಕರು, ಸಿಬ್ಬಂದಿ ಹಾಗೂ ಎಸ್.ಡಿ.ಎಂ.ಸಿ. ಪಾಲಕರ ಪೋಷಕರ ಪರಿಷತ್ತಿನ ಸಭೆ ನಡೆಸಿ ನಡಾವಳಿ ದಾಖಲಿಸಿ ಅನುಷ್ಠಾನಕ್ಕೆ ಮುಂದಿನ ಹೆಜ್ಜೆಯನ್ನು ಇಡಬೇಕು ದಿನಾಂಕ: 30.05.2024 ರಂದು ಮಕ್ಕಳ ಆಗಮನದ ಮುನ್ನಾ ದಿನ ಹಾಕಿಕೊಂಡಿರುವ ಯೋಜನೆ ಅನುಪಾಲಿಸಿಗೆ ಕಾರ್ಯ ಹಂಚಿಕೆ ಮಾಡುತ್ತಾ ಶಾಲೆಯ ಅವರಣದ ಪ್ರವೇಶ ದ್ವಾರ ತರಗತಿಯ ಕಾರಿಡಾರ್ ಮತ್ತು ತಳಿರು ತೋರಣಗಳನ್ನು ಬಣ್ಣದ ಹಾಳೆಗಳಿಂದ ಸಿಂಗರಿಸುವ ಕಾರ್ಯ ಪೂರ್ಣಗೊಳಿಸುವುದು ಶಾಲೆಯವರು ವಿಶೇಷ ಮತ್ತು ವ್ಯಾಪಕ ದಾಖಲಾತಿ ಪ್ರಚಾರಕ್ಕೆ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಂಡು ಅನುಷ್ಠಾನ ಮಾಡಿಸುವ ಮಾಹಿತಿಯನ್ನು ಶಿಕ್ಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಅರ್. ಅಕ್ಕಿಯವರು ತಿಳಿಸಿದರು.

ಅವರು ಮುಂದುವರೆದು ಬ್ಯಾನರ್ಸ್, ಕರಪತ್ರ ಆಕರ್ಷಕ ಪ್ಲೇ ಕಾರ್ಡಗಳ ಬಳಕೆ ಪ್ರಭಾತ್ ಪೇರಿ ಇವುಗಳನ್ನು ಪ್ರತಿ ತರಗತಿಗಳಿಗೆ ನಿಗದಿಪಡಿಸಿದ 30 ವಿದ್ಯಾರ್ಥಿಗಳನ್ನು ದಾಖಲಿತ ಕಾರ್ಯಕ್ರಮವನ್ನು ಪೂರ್ಣಗೊಳಿಸಬೇಕು ಅತಿಥಿ ಶಿಕ್ಷಕರನ್ನು ಹಾಗೂ ಆಯಾಗಳನ್ನು ನೇಮಕಾತಿ ನಿಯಮದಡಿ ಮಾಡಿಕೊಳ್ಳಲು ಕಾರ್ಯಪ್ರವೃತ್ತರಾಗಬೇಕು. ದಿನಾಂಕ: 31.5.2024 ಕ್ಕೆ ಗೋಬಿ, ಸಿಹಿ ನೀಡುವ ಮೂಲಕ ಎತ್ತಿನ ಬಂಡಿ ಟ್ಯಾಕ್ಟರ್, ಇತರೆ ವ್ಯವಸ್ಥಾಪಕ ಮೂಲಕ ಶಾಲಾರಂಭವನ್ನು ಆಕರ್ಷಕ ವಿನೂತನ ರೀತಿಯಲ್ಲಿ ಪ್ರಾರಂಭಿಸಬೇಕು ಅಂದು ಮಕ್ಕಳಿಗೆ ಸಿಹಿ ಭೋಜನ ವ್ಯವಸ್ಥೇ ಮಾಡಿಸಬೇಕು ಶಾಲೆಯಲ್ಲಿ ಪರಿಪಾಲನೆಯ ಸಮಯ ತನ್ಮತೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆನೀಡಿದರು.

ಈ ವರ್ಷ ಎಲ್.ಕೆ.ಜಿ. ಯು.ಕೆ.ಜಿ. 28 ಮಕ್ಕಳಿಗೆ ಸೇರ್ಪಡೆ ಮಡಿಕೊಳ್ಳಲಾಗುವುದು ಫಸ್ಟ್ ಸ್ಟ್ಯಾಂರ್ಡಡ್ ಇಂಗ್ಲೀಷ್ ಮೀಡಿಯಂಗೆ 29 ಮಕ್ಕಳನ್ನು ಸೇರ್ಪಡೆ ಮಾಡಿಕೊಳ್ಳಲಾಗುವುದು 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಎನ್.ಎಸ್.ಕ್ಯೂ.ಇ. 7 ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಹಾಗೂ ಸೇತುಬಂಧ, ಕಾರ್ಯವನ್ನು ಆಧಾರವಾಗಿಟ್ಟುಕೊಂಡು ಅತ್ಯಂತ ವಸ್ತುನಿಷ್ಠವಾಗಿ ಅನುಷ್ಠಾನಕ್ಕೆ ತರಲು ಶಿಕ್ಷಕರು ಕ್ರಮವಹಿಸಬೇಕೆಂದು, ಸಮವಸ್ತ್ರ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುತ್ತಾ ಸೂಕ್ತ ದಾಖಲೆಗಳ ನಿರ್ವಾಹಣೆ ಮಾಡಿ ತಾತ್ಕಾಲಿಕದಲ್ಲಿಯೇ ಅವುಗಳನ್ನು ಕಡ್ಡಾಯವಾಗಿ ದಾಖಲಿಸಬೇಕಾಗಿದೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದರು

LEAVE A REPLY

Please enter your comment!
Please enter your name here