ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಸಾಯುತ್ತಿವೆ..!?

0
240

ನಮ್ಮ ಹೆಸರಾಂತ ಕನ್ನಡಪರ ಸಂಘಟನೆಗಳು, ಕರ್ನಾಟಕ ರಕ್ಷಣಾ ವೇದಿಕೆಗಳು,ಕನ್ನಡ ಸಾಹಿತ್ಯ ಪರಿಷತ್ ಮತ್ತು
ಕನ್ನಡವನ್ನು ಉಳಿಸಲು ಇರುವ ಇನ್ನೂ ಮುಂತಾದ ಸಂಘಟನೆಯವರಲ್ಲಿ ನಮ್ಮ ಮನವಿ …

ನಮ್ಮ ಅನುದಾನ ರಹಿತ ಕನ್ನಡ ಶಾಲೆಗಳನ್ನು ಉಳಿಸಿಕೊಡಿ…

ಕರ್ನಾಟಕ ರಾಜ್ಯದಲ್ಲಿ ಕನ್ನಡ ಮಾಧ್ಯಮ ಓದುತ್ತಿರುವ ಕನ್ನಡದ ಮಕ್ಕಳಿಗೆ
1.ಓದಲು ಉಚಿತ ಪಠ್ಯಪುಸ್ತಕಗಳನ್ನು ಸರ್ಕಾರ ನೀಡುವುದಿಲ್ಲ,.
2.ಕನ್ನಡದ ಮಕ್ಕಳಿಗೆ ಬಿಸಿಯೂಟ ಇಲ್ಲ..
3.ಕನ್ನಡ ಮಕ್ಕಳಿಗೆ ಉಚಿತ ಶಿಕ್ಷಣ ಇಲ್ಲ..
4.ಕನ್ನಡದ ಮಕ್ಕಳಿಗೆ ಕ್ಷೀರ ಭಾಗ್ಯ ಇಲ್ಲ..

ಖಾಸಗೀ ಆಂಗ್ಲ ಮಾಧ್ಯಮ ಶಾಲೆಗಳಿಗೆ ಅಡ್ಮಿಷನ್ ಇಲ್ಲದೇ ಸಂಕಷ್ಟ ಎದುರಾಗಿದೆ ಇಂತಹ ಪರಿಸ್ಥಿತಿಯಲ್ಲಿ ನಮ್ಮ ಕನ್ನಡ ಮಾಧ್ಯಮ ಅನುದಾನ ರಹಿತ ಶಾಲೆಯಲ್ಲಿ ಮಕ್ಕಳು ಏಕೆ ಅಡ್ಮಿಷನ್ ಆಗುತ್ತಾರೆ…?

25 ವರ್ಷಗಳ ಕಾಲ ಈ ಶಾಲೆಗಳು ಇಂತಹ ನೋವನ್ನು ಅನುಭವಿಸಿಕೊಂಡು ಬಂದಿವೆ,ಈಗ ಕರೋನದ ಪರಿಣಾಮ ಪರಿಸ್ಥಿತಿ ಬಹಳಷ್ಟು ಕೆಟ್ಟಿದೆ..ಈ ಕನ್ನಡ ಶಾಲೆಗಳು ಈಗ ನಿಜವಾಗಿಯೂ ಸಾಯುತ್ತವೆ..
ದಯವಿಟ್ಟು ನಮ್ಮ ಕನ್ನಡ ಮಾಧ್ಯಮ ಅನುದಾನ ರಹಿತ ಶಾಲೆಗಳನ್ನು ಉಳಿಸಿಕೊಡಿ..

1995ರ ನಂತರದ ಕನ್ನಡ ಮಾಧ್ಯಮ ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸಬೇಕು. ಎಂದು ಮನವಿ ಮಾಡಿಕೊಂಡಿದ್ದಾರೆ.
ಎಂ.ರಾಘವೇಂದ್ರ.
ಜಿಲ್ಲಾಧ್ಯಕ್ಷರು.
ಕರ್ನಾಟಕ ರಾಜ್ಯ ಖಾಸಗೀ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಮತ್ತು ನೌಕರರ ಸಮನ್ವಯ ಹೋರಾಟ ಸಮಿತಿ..
ಬಳ್ಳಾರಿ ಜಿಲ್ಲಾ ಘಟಕ…
7353559789

LEAVE A REPLY

Please enter your comment!
Please enter your name here