ಗ್ರಾ.ಪಂ ಚುನಾವಣೆ ಅಬಕಾರಿ ಅಕ್ರಮ ತಡೆಯಲು ಸಂಚಾರಿ ದಳಗಳ ರಚನೆ

0
110

ದಾವಣಗೆರೆ ಡಿ.10-ಗ್ರಾಮ ಪಂಚಾಯಿತಿ ಚುನಾವಣೆ-2020ರ ಪ್ರಯುಕ್ತ ಚುನಾವಣೆ ನೀತಿ ಸಂಹಿತೆಯು ನ.30 ರಿಂದ ಜಾರಿಯಾಗಿರುವ ಹಿನ್ನಲೆಯಲ್ಲಿ ಚುನಾವಣೆಯನ್ನು ಮುಕ್ತ ಮತ್ತು ನಿಷ್ಪಕ್ಷಪಾತವಾಗಿ ನಡೆಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಅಬಕಾರಿ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ಒಟ್ಟು 10 ಸಂಚಾರಿ ದಳಗಳನ್ನು ರಚಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ-1, ಉಪವಿಭಾಗ ಮಟ್ಟದಲ್ಲಿ-2 ಮತ್ತು ವಲಯ ಮಟ್ಟದಲ್ಲಿ-05 ಒಟ್ಟು 08 ಕಂಟ್ರೋಲ್ ರೂಂಗಳನ್ನು ತೆರೆದು, ಕಂಟ್ರೋಲ್ ರೂಂನ ದೂರವಾಣಿ ಸಂಖ್ಯೆಗಳನ್ನು ಈಗಾಗಲೇ ದಿನಪತ್ರಿಕೆಗಳ ಮೂಲಕ ಸಾರ್ವಜನಿಕ ಮಾಹಿತಿಗಾಗಿ ತಿಳಿಸಲಾಗಿದೆ. ಮೇಲ್ಕಂಡಂತೆ ರಚಿಸಲಾದ ಸಂಚಾರಿ ದಳ ಮತ್ತು ಕಂಟ್ರೋಲ್ ರೂಂಗಳಲ್ಲಿ 24 ಗಂಟೆಯೂ ಅಧಿಕಾರಿ/ಸಿಬ್ಬಂದಿಯವರು ಕಾರ್ಯನಿರ್ವಹಿಸುತ್ತಿದ್ದಾರೆ.
ಚುನಾವಣೆ ನೀತಿಸಂಹಿತೆ ಜಾರಿಯಾದ ದಿ: 30.11.2020 ರಿಂದ 09.12.2020 ರವರಗೆ ಜಿಲ್ಲೆಯಾದ್ಯಂತ ಒಟ್ಟು-89 ದಾಳಿಗಳನ್ನು ನಡೆಸಿ 17 ಘೋರ, 41 15(ಎ) ಮತ್ತು 07 ಬಿಎಲ್‍ಸಿ ಹೀಗೆ ಒಟ್ಟು 65 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಈ ಪ್ರಕರಣಗಳಲ್ಲಿ 416.240ಲೀ. ಮದ್ಯ, 54.790 ಲೀ ಬಿಯರ್ ಹಾಗೂ 12 ದ್ವಿಚಕ್ರ ವಾಹನ, 01 ತ್ರಿಚಕ್ರ ಆಟೋ ರಿಕ್ಷಾ ಹೀಗೆ ಒಟ್ಟು 13 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಲಾದ ಮದ್ಯ ಮತ್ತು ವಾಹನಗಳ ಮೌಲ್ಯ ಅಂದಾಜು ರೂ.5,83,784/- ಆಗಿರುತ್ತದೆ. ಉಳಿದಂತೆ ಜಾರಿ ಮತ್ತು ತನಿಖಾ ಕಾರ್ಯಗಳು ಮುಂದುವರೆದಿರುತ್ತದೆ ಎಂದು ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್‍ನ ಅಧಿಕಾರಿ ಬಿ.ಶಿವಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here